ಆಶ್ವಾಸನೆ ಈಡೇರಿಸದ ಮೇಯರ್ ನನ್ನು ಟ್ರಕ್ ಗೆ ಕಟ್ಟಿ ಎಳೆದ ಜನ: ವಿಡಿಯೋ
ಚುನಾವಣೆಗೂ ಮುನ್ನ ಆಶ್ವಾಸನೆ ನೀಡಿ ಅದನ್ನು ಈಡೇರಿಸದ ಮೇಯರ್ ಒಬ್ಬರನ್ನು ಟ್ರಕ್ಕಿನ ಹಿಂಭಾಗಕ್ಕೆ ಕಟ್ಟಿ ಎಳೆದೊಯ್ದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರನ್ನು ಬಂಧಿಸಲಾಗಿದೆ. ಮೇಯರ್ ಜಾರ್ಜ್ ಲೂಯಿಸ್ ಎಸ್ಕಾಂಡನ್ ಹರ್ನಾಂಡೆಜ್ ಎಂಬುವವರು ಚಿಯಾಪಾಸ್ ಸ್ಟೇಟ್ ನ ಲಾಸ್ ಮಾರ್ಗರೈಟಿಸ್ ಮುನ್ಸಿಪಾಲ್ಟಿಯ ಮೇಯರ್ ಆಗಿದ್ದರು.
UNA SU ARRASTRADA. Alcalde de #LasMargaritas, Jorge Luis Escandón Hernández, es sujetado a una camioneta que lo arrastra en pleno parque central, luego de haber sido secuestrado de la propia alcaldía #Chiapas #VideoViral pic.twitter.com/ptdP7g2w92
— Tinta Fresca Chiapas (@tinta_fresca) October 8, 2019
ರೈತರಿಗೆ ಅವರು ಚುನಾವನೆಗೂ ಮುನ್ನ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲವೆಂಬ ಕಾರಣಕ್ಕೆ ಅವರ ಕಚೇರಿಗೇ ಬಂದ ರೈತರ ಗುಂಪು ಅವರನ್ನು ಹಿಡಿದು, ಹಗ್ಗದಲ್ಲಿ ಕೈಗಳನ್ನು ಕಟ್ಟಿ ಟ್ರಕ್ ವೊಂದರ ಹಿಂಭಾಗಕ್ಕೆ ಕಟ್ಟಿ, ರಸ್ತೆಯಲ್ಲಿ ಅವರನ್ನು ಸಾಕಷ್ಟು ದೂರ ಎಳೆದೊಯ್ದಿತ್ತು.

ಈ ಸಂಬಂಧ 11 ಜನರ ಮೇಲೆ ಕೊಲೆ ಪ್ರಯತ್ನದ ಪ್ರಕರಣ ದಾಖಲಿಸಲಾಗಿದೆ. ಮೇಯರ್ ಅವರನ್ನು ಎಳೆದೊಯ್ಯುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ದೃಶ್ಯವನ್ನು ಟಿಂಟಾ ಫ್ರೆಸ್ಕಾ ಚಿಯಾಪಾಸ್ ಎಂಬ ಡಿಜಿಟಲ್ ಮಾಧ್ಯಮ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ












Click it and Unblock the Notifications