H-1B ವೀಸಾ ನಿಯಮದಲ್ಲಿ ಬದಲಾವಣೆಯಿಲ್ಲ! ಭಾರತ ನಿರಾಳ!

Posted By:
Subscribe to Oneindia Kannada

ವಾಷಿಂಗ್ಟನ್, ಜನವರಿ 09: ಅಮೆರಿಕದಲ್ಲಿರುವ ಭಾರತೀಯ ಟೆಕ್ಕಿಗಳು ನಿರಾಳ ನಿಟ್ಟುಸಿರು ಬಿಡುವಂಥ ಸುದ್ದಿಯೊಂದನ್ನು ಟ್ರಂಪ್ ಆಡಳಿತ ನೀಡಿದೆ. 7 ಲಕ್ಷಕ್ಕೂ ಹೆಚ್ಚು ಭಾರತೀಯರಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿ ಹುಟ್ಟಿಸಿದ್ದ H-1B ವೀಸಾ ನಿಯಮಗಳಲ್ಲಿ ಬದಲಾವಣೆ ತರುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಟ್ರಂಪ್ ಸಂಪುಟ ಸ್ಪಷ್ಟಪಡಿಸಿದೆ.

ಅಮೆರಿಕ ನಾಗರಿಕತ್ವ ಮತ್ತು ವಲಸೆ ಸೇವೆ ವಿಭಾಗದ ಈ ಘೋಷಣೆಯಿಂದಾಗಿ 7,50,000 ಭಾರತೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅಮೆರಿಕದಲ್ಲಿ ಉದ್ಯೋಗ ನಡೆಸಲು ಅಗತ್ಯವಾದ H-1B ವೀಸಾ ಹೊಂದಿರುವವರು, ಆರು ವರ್ಷದ ಅಮೆರಿಕ ವಾಸದ ನಂತರ ಅಲ್ಲಿನ ಶಾಶ್ವತ ನಾಗರಿಕತ್ವಕ್ಕೆ ಗ್ರೀನ್ ಕಾರ್ಡ್ ಪಡೆಯಬಹುದಾಗಿದೆ.

ಅಮೆರಿಕದಲ್ಲಿ ಉದ್ಯೋಗ ಕಳೆದುಕೊಳ್ಳಲಿದ್ದಾರಾ ಐದು ಲಕ್ಷ ಭಾರತೀಯರು?!

ಆದರೆ ಗ್ರೀನ್ ಕಾರ್ಡ್ ಪಡೆಯುವವರೆಗೂ H-1B ವೀಸಾ ಅವಧಿಯನ್ನು ಅಲ್ಲಿನ ಸರ್ಕಾರ ವಿಸ್ತರಿಸಲು ಅನುಮತಿ ನೀಡಬೇಕಾಗುತ್ತದೆ. ಆದರೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗುತ್ತಿದ್ದಂತೆಯೇ H-1B ವೀಸಾ ಅವಧಿ ವಿಸ್ತರಿಸುವುದಕ್ಕೆ ಒಲ್ಲೆ ಎನ್ನುತ್ತಾರೆ ಎಂಬ ಗುಲ್ಲೆಬ್ಬಿದ್ದರಿಂದ ಉದ್ಯೋಗಕ್ಕಾಗಿ ದೊಡ್ಡಣ್ಣನತ್ತ ಪಯಣ ಬೆಳೆಸಿದ್ದ ಭಾರತೀಯರೆಲ್ಲ ದಿಕ್ಕುತೋಚದಂತಾಗಿದ್ದರು.

A Big relief for Indian techies, No changes in H-1B extension policy: US

ಆದರೆ American Competitiveness in the 21st Century Act (AC21) ಸೆಕ್ಷನ್ 104 C ಪ್ರಕಾರ, H-1B ವೀಸಾ ಹೊಂದಿರುವವರು ತಮ್ಮ ವೀಸಾ ಕಾಲಾವಧಿಯ ನಂತರ ಅಮೆರಿಕ ತೊರೆಯಬೇಕಾದ ಯಾವುದೇ ಬದಲಾವಣೆಯನ್ನು ತರಲಾಗಿಲ್ಲ ಎಂದು ಹೇಳಿದೆ. ಅಂದರೆ ಈ ವೀಸಾ ಅವಧಿಯನ್ನು ಒಬ್ಬ ವ್ಯಕ್ತಿ ಗ್ರೀನ್ ಕಾರ್ಡ್(ಅಮೆರಿಕದ ಶಾಶ್ವತ ಪೌರತ್ವ) ಪಡೆಯುವವರೆಗೂ ವಿಸ್ತರಿಸಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
US president Donald Trump administration is not considering any proposal that would force H-1B visa holders to leave the country, says US authorities. America's decision to not making any changes in H-1B extension policy is a big relief for More than 7.5 lakh Indian techies, who have been working in US since many years.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ