Get Updates
Get notified of breaking news, exclusive insights, and must-see stories!

ಮಾನವ ಮುಖ ಮೀನಿನಂತೆ ಬಾಲ ಹೊಂದಿದ 300 ವರ್ಷದ ಮತ್ಸ್ಯಕನ್ಯೆ

ಮತ್ಸ್ಯಕನ್ಯೆ ನಿಜವಾಗಿಯೂ ಇದೆಯೇ? ಈ ಪ್ರಶ್ನೆಗೆ ಖಚಿತವಾದ ಉತ್ತರ ಇನ್ನೂ ಯಾರಿಂದಲೂ ಪುರಾವೆಗಳೊಂದಿಗೆ ಹೊರ ಬಂದಿಲ್ಲ ಎಂಬುದು ಸತ್ಯ. ಆದರೆ ಈ ಭೂಮಿಯ ಮೇಲೆ ಎಲ್ಲೋ ಯಾವುದೋ ಒಂದು ಘಟನೆಯ ಪುರಾವೆಗಳು ಯಾವುದೋ ರೂಪದಲ್ಲಿ ಮತ್ಸ್ಯಕನ್ಯೆ ಇರಬಹುದು ಎಂಬುದಕ್ಕೆ ಪುಷ್ಠಿ ನೀಡುತ್ತವೆ. ಅಂದಹಾಗೆ, ಮತ್ಸ್ಯಕನ್ಯೆಯರ ಕುರಿತಾದ ಎಲ್ಲಾ ಪುರಾಣಗಳು ನಿಜವೆಂದು ಸಾಬೀತುಪಡಿಸಲು 'ಮಮ್ಮಿ ಆಫ್ ದಿ ಮತ್ಸ್ಯ' ಸಾಕ್ಷಿಯಾಗಿದೆ. ಮತ್ಸ್ಯಕನ್ಯೆಯರು ಎಂಬ ಪದವನ್ನು ನೀವು ಕೇಳಿದಾಗ ನಿಮ್ಮ ಮನಸ್ಸಿಗೆ ಹಲವಾರು ವಿಚಾರಗಳು ಬರುತ್ತವೆ. ಸುಂದರವಾದ ದೇಹದ ವಕ್ರಾಕೃತಿಗಳುಳ್ಳ ಉದ್ದನೆಯ ಕೂದಲು, ಕೆಳಭಾಗ ಮಾತ್ರ ಮೀನಿನಂತಿರುವ ದೇಹ ಇರುವ ಸುಂದರ ಆಕೃತಿ ನಿಮ್ಮ ಕಣ್ಣಿಗೆ ಬಂದಿರುತ್ತದೆ. ಆದರೆ ನೀವು ಈಗ ನೋಡುತ್ತಿರುವ ಮತ್ಸ್ಯಕನ್ಯೆಯ ಈ ಸಂಸ್ಕರಿಸಿದ ಭೌತಿಕ ಸಾಕ್ಷ್ಯವು ಹಾಗಲ್ಲ ಎಂಬುದು ಸತ್ಯ. ಇದು ಸಂಪೂರ್ಣವಾಗಿ ಕಲ್ಪನೆಯನ್ನು ಮೀರಿದೆ.

ಜಪಾನಿನ ವಿಜ್ಞಾನಿಗಳು ಈಗ 1736 ಮತ್ತು 1741 ರ ನಡುವೆ ಜಪಾನಿನ ದ್ವೀಪವಾದ ಶಿಕೋಕುದಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಸಿಕ್ಕ 12 ಇಂಚಿನ ನಿಗೂಢ ಜೀವಿಯನ್ನು ಅಧ್ಯಯನ ಮಾಡುತ್ತಿದ್ದಾರೆ. ಬೆರಗುಗೊಳಿಸುವ ರಕ್ಷಿತ ಈ ಜೀವಿಯು ಈಗ ಅಸಕುಚಿ ನಗರದ ದೇವಾಲಯದಲ್ಲಿ ನೆಲೆಗೊಂಡಿದೆ. ಈ ಜೀವಿಯು ಕೂದಲು, ಹಲ್ಲುಗಳು, ಉಗುರುಗಳು ಮತ್ತು ವಿಚಿತ್ರವಾದ ದೇಹವನ್ನು ಹೊಂದಿದೆ.

ದೇಹದ ಅರ್ಧ ಭಾಗ ಮನುಷ್ಯನಂತೆ

ದೇಹದ ಅರ್ಧ ಭಾಗ ಮನುಷ್ಯನಂತೆ

ಮತ್ಸ್ಯಕನ್ಯೆಯರು ಸುಂದರವಾಗಿರುತ್ತಾರೆ ಎಂದು ನೀವು ಎಂದಾದರೂ ಭಾವಿಸಿದ್ದರೆ, ಈ ಮಮ್ಮಿ ಮತ್ಸ್ಯಕನ್ಯೆಯ ಮುಖವು ನಿಮ್ಮನ್ನು ನಂಬಲಾಗದಷ್ಟು ಆಶ್ಚರ್ಯಗೊಳಿಸುತ್ತದೆ. ಚೂಪಾದ ಹಲ್ಲುಗಳು, ಎರಡೂ ಕೈಗಳಲ್ಲಿ 5 ಪ್ರತ್ಯೇಕ ಬೆರಳುಗಳು, ತಲೆ ಮತ್ತು ಹುಬ್ಬುಗಳ ಮೇಲೆ ಕೂದಲು ಹೊಂದಿರುವ ಈ ಮತ್ಸ್ಯಕನ್ಯೆಯ ಆಕೃತಿ. ಇದು ವಿಚಿತ್ರವಾದ ಮಾನವ ನೋಟವನ್ನು ಹೊಂದಿದೆ.

ಅದರ ಕೆಳಗಿನ ಅರ್ಧ ಭಾಗ ಮೀನಿನಂತಿದೆ. ಉಳಿದ ಅಂಗಗಳು ಮನುಷ್ಯರಿಗೆ ಹೋಲುತ್ತವೆ ಎಂಬುದು ಗಮನಾರ್ಹವಾಗಿದೆ. ಮತ್ಸ್ಯಕನ್ಯೆಯರೆಲ್ಲ ಸುಂದರವಾಗಿರುತ್ತಾರೆ ಎಂದು ಹೇಳುವವರ ಬಾಯಿ ಮುಚ್ಚಿಸುವ ಹಾಗೆ ಇದರ ಚಿತ್ರವಿದೆ. ಇದೀಗ ಜಪಾನ್ ಈ ಮತ್ಸ್ಯಕನ್ಯೆಯ ದೇಹವನ್ನು ಸಂಶೋಧಿಸಲು ಹೊರಟಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈ ದೇಹವು 300 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ.

ಮತ್ಸ್ಯಕನ್ಯೆಯ ಮಾಂಸ ತಿಂದರೆ ಸಾವಿಲ್ಲವೇ?

ಮತ್ಸ್ಯಕನ್ಯೆಯ ಮಾಂಸ ತಿಂದರೆ ಸಾವಿಲ್ಲವೇ?

ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಕುರಾವೊದಲ್ಲಿನ ವಿಜ್ಞಾನ ಮತ್ತು ಕಲೆಗಳ ವಿಶ್ವವಿದ್ಯಾಲಯದ ಸಂಶೋಧಕರು ಮಮ್ಮಿಯ ರಹಸ್ಯಗಳನ್ನು ಬಹಿರಂಗಪಡಿಸುವ ಪ್ರಯತ್ನದಲ್ಲಿ CT ಸ್ಕ್ಯಾನಿಂಗ್ ಅನ್ನು ತೆಗೆದುಕೊಂಡಿದ್ದಾರೆ. ಪರೀಕ್ಷಿಸುತ್ತಿರುವ ಒಕಯಾಮಾ ಫೋಕ್ಲೋರ್ ಸೊಸೈಟಿಯ ಹಿರೋಶಿ ಕಿನೋಶಿತಾ, ಈ ವಿಚಿತ್ರ ಜೀವಿ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿರಬಹುದು ಎಂದು NYT ಗೆ ತಿಳಿಸಿದರು. "ಜಪಾನಿನ ಮತ್ಸ್ಯಕನ್ಯೆ ದೇವತೆಗಳ ಬಗ್ಗೆ ಒಂದು ಪುರಾಣವಿದೆ, ಅದು ಅಮರವಾಗಿದೆ" ಎಂದು ಅವರು ಹೇಳಿದರು.

ಮತ್ಸ್ಯಕನ್ಯೆಯ ಮಾಂಸವನ್ನು ತಿಂದರೆ ನೀವು ಎಂದಿಗೂ ಸಾಯುವುದಿಲ್ಲ ಎಂದು ಆ ಪುರಾಣಗಳಲ್ಲಿ ಹೇಳಲಾಗಿದೆ. ಜಪಾನಿನ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಹಿಳೆ ಆಕಸ್ಮಿಕವಾಗಿ ಮತ್ಸ್ಯಕನ್ಯೆಯ ಮಾಂಸವನ್ನು ತಿಂದು ಸುಮಾರು 800 ವರ್ಷಗಳ ಕಾಲ ಬದುಕಿದ್ದಳು ಎಂಬ ದಂತಕಥೆಯೂ ಇದೆ. ಮತ್ಸ್ಯಕನ್ಯೆಯ ಮಮ್ಮಿ ಪತ್ತೆಯಾದ ದೇವಾಲಯದ ಬಳಿ ಈ 'ಯಾವೋ-ಬಿಕುನಿ' ಅನ್ನು ಸಂರಕ್ಷಿಸಲಾಗಿದೆ. ಪುರಾಣವನ್ನು ನಂಬಿದ ಕೆಲವರು ಮತ್ಸ್ಯಕನ್ಯೆಯ ಮಮ್ಮಿಯನ್ನು ತಿಂದಿದ್ದಾರೆ ಎಂದು ಹೇಳಲಾಗಿದೆ ಎಂದು ಅವರು ಹೇಳಿದರು.

ಕುಟುಂಬದ ನಿಧಿಯಾಗಿ ಸಂರಕ್ಷಿಸಲ್ಪಟ್ಟ ಮತ್ಸ್ಯಕನ್ಯೆಯ ದೇಹ

ಕುಟುಂಬದ ನಿಧಿಯಾಗಿ ಸಂರಕ್ಷಿಸಲ್ಪಟ್ಟ ಮತ್ಸ್ಯಕನ್ಯೆಯ ದೇಹ

ಅಲ್ಲದೆ 1903 ರ ಐತಿಹಾಸಿಕ ಪತ್ರದಲ್ಲಿ ಮತ್ಸ್ಯಕನ್ಯೆಯನ್ನು ಕಂಡ ಮೀನುಗಾರ ಸ್ಪಷ್ಟವಾಗಿ ಬರೆದಿದ್ದಾರೆ ಎಂಬುದು ಗಮನಾರ್ಹ. ಪತ್ರದಲ್ಲಿ ಮತ್ಸ್ಯಕನ್ಯೆ ಮಮ್ಮಿ ಪತ್ತೆಯಾಗಿತ್ತು ಎಂದು ಬರೆದಿರುವುದು ಕಂಡು ಬಂದಿದೆ. ಕೊಚ್ಚಿನ್ ಕರಾವಳಿಯ ಸಮುದ್ರದಲ್ಲಿ ಮೀನುಗಾರಿಕೆ ಬಲೆಯಲ್ಲಿ ಮತ್ಸ್ಯಕನ್ಯೆ ಸಿಕ್ಕಿಬಿದ್ದಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಅದರೆ ಮೀನುಗಾರರಿಗೆ ಇದು ಮತ್ಸ್ಯಕನ್ಯೆ ಎಂದು ತಿಳಿದಿರಲಿಲ್ಲ.

ಮೀನುಗಾರರು ಮತ್ಸ್ಯಕನ್ಯೆಯ ದೇಹವನ್ನು ಒಸಾಕಾಗೆ ತೆಗೆದುಕೊಂಡು ಹೋಗಿ ಅದನ್ನು ಅಸಾಮಾನ್ಯ ಮೀನು ಎಂದು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಈ ಮತ್ಸ್ಯಕನ್ಯೆಯ ದೇಹವನ್ನು ಸುರಕ್ಷಿತವಾಗಿ ಇರಿಸಿರುವ ಕುಟುಂಬದ ಪೂರ್ವಜರು ಅದನ್ನು ಖರೀದಿಸಿ ಕುಟುಂಬದ ಸಂಪತ್ತಾಗಿ ಉಳಿಸಿಕೊಂಡಿದ್ದಾರೆ ಎಂಬುದು ಗಮನಾರ್ಹ. ಆದರೆ ಈ ಮತ್ಸ್ಯಕನ್ಯೆಯ ಮಮ್ಮಿ ಅಸಕುಚಿಯ ನ್ಗುಯೆನ್ ದೇವಾಲಯಕ್ಕೆ ಹೇಗೆ ಅಥವಾ ಯಾವಾಗ ಬಂದಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ವಿಜ್ಞಾನಿಗಳ ಸಂಶೋಧನೆ

ವಿಜ್ಞಾನಿಗಳ ಸಂಶೋಧನೆ

ಆದಾಗ್ಯೂ, ಆರ್ಚ್‌ಬಿಷಪ್ ಕೊಜೆನ್ ಗೈಡಾ ಅವರು ಇದನ್ನು ಸುಮಾರು 40 ವರ್ಷಗಳ ಹಿಂದೆ ಗಾಜಿನ ಪೆಟ್ಟಿಗೆಯಲ್ಲಿ ಪ್ರದರ್ಶಿಸಲಾಯಿತು ಎಂದಿದ್ದಾರೆ. 'ಈ ದೇವತೆ ಕೊರೋನವೈರಸ್ ಸೋಂಕನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ ಮತ್ತು ನಾವು ಅದನ್ನು ಆತ್ಮವಿಶ್ವಾಸದಿಂದ ಪೂಜಿಸುತ್ತೇವೆ' ಎಂದು ಅವರು ಜಪಾನಿನ ಪತ್ರಿಕೆ ದಿ ಅಸಾಹಿ ಶಿಂಬುಗೆ ತಿಳಿಸಿದ್ದಾರೆ.

ಸುದ್ದಿ ಪ್ರಕಟವಾದಾಗಲೆಲ್ಲ ಅದರ ಬಗ್ಗೆ ನಾನಾ ಅಭಿಪ್ರಾಯಗಳು ಮೂಡುತ್ತವೆ. ಆ ಅರ್ಥದಲ್ಲಿ ಕೆಲವರು ಈ ಮತ್ಸ್ಯಕನ್ಯೆಯ ನೋಟವು ಸುಳ್ಳುಸುದ್ದಿ ಎಂದು ಹೇಳಿಕೊಳ್ಳುತ್ತಾರೆ. ಇನ್ನೊಂದು ವರದಿಯ ಪ್ರಕಾರ, ಈ ಜೀವಿ ಯುರೋಪ್‌ಗೆ ರಫ್ತು ಮಾಡುವ ನಿಧಿಯಾಗಿರಬಹುದು ಎನ್ನಲಾಗುತ್ತದೆ. ಆದರೆ ವಿಜ್ಞಾನಿಗಳ ಸಂಶೋಧನೆಗಳು 2022 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಲ್ಲಿಯವರೆಗೆ ನಾವು ಸತ್ಯಕ್ಕಾಗಿ ಕಾಯಬೇಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+