ಕಾರ್ ಬಾಂಬ್ ಸ್ಫೋಟದಿಂದ 8 ಸಾವು, 30 ಮಂದಿಗೆ ಗಾಯ

ಕಾಬೂಲ್, ಜುಲೈ.30: ಅಫ್ಘಾನಿಸ್ತಾನದ ಲೋಗರ್ ಪ್ರದೇಶದಲ್ಲಿ ಸಂಭವಿಸಿದ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಎಂಟು ಮಂದಿ ಪ್ರಾಣ ಬಿಟ್ಟಿದ್ದು, 30ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.

ಲೋಗರ್ ಪ್ರದೇಶದ ಪುಲ್-ಇ-ಅಲಂ ಪ್ರದೇಶದಲ್ಲಿ ಉಗ್ರರು ಕಾರ್ ಬಾಂಬ್ ಸ್ಫೋಟಿಸಿದ್ದಾರೆ. ಇದರಿಂದ 30 ಮಂದಿ ಪ್ರಜೆಗಳು ಗಾಯಗೊಂಡಿದ್ದು, ಎಂಟು ಜನರು ಉಗ್ರರ ದಾಳಿಯಲ್ಲಿ ಬಲಿಯಾಗಿದ್ದಾರೆ ಎಂದು ಅಫ್ಘನ್ ಸಚಿವಾಲಯವು ಮಾಹಿತಿ ನೀಡಿದೆ.

ತಾಲಿಬಾನ್ ಸಂಘಟನೆಗೂ ಈ ಬಾಂಬ್ ಸ್ಫೋಟಕ್ಕೂ ಯಾವುದೇ ನಂಟು ಇಲ್ಲ ಎಂದು ಹೇಳಿದ್ದು, ತನ್ನ ಪಾಲುದಾರಿಕೆಯನ್ನು ತಳ್ಳಿ ಹಾಕಿದೆ. ಬಾಂಬ್ ಸ್ಫೋಟದ ಬಗ್ಗೆ ಇದುವರೆಗೂ ಯಾವುದೇ ಉಗ್ರ ಸಂಘಟನೆಗಳು ಹೊಣೆಯನ್ನು ಹೊತ್ತುಕೊಂಡಿಲ್ಲ ಎಂದು ತಿಳಿದು ಬಂದಿದೆ.

8 Killed, 30 Injured In Car Bomb Blast At Logar Province In Afghanistan

ಈದ್-ಅಲ್-ಅದಾ ಹಬ್ಬದ ಮೇಲೆ ಕಣ್ಣು:

ಆಗಸ್ಟ್.03ರಂದು ಈದ್-ಅಲ್-ಅದಾ ಹಬ್ಬವು ನಡೆಯಲಿದ್ದು, ಅಂದು ಶಾಂತಿ ಕದಡುವ ನಿಟ್ಟಿನಲ್ಲಿ ತಾಲಿಬಾನ್ ಉಗ್ರ ಸಂಘಟನೆಯು ಸಂಚು ರೂಪಿಸಿತ್ತು ಎಂದು ಹೇಳಲಾಗುತ್ತಿತ್ತು. ಈ ಶಂಕೆಯ ನಡುವೆಯೇ ಉಗ್ರರು ದಾಳಿ ನಡೆಸಿದ್ದು, ಅಫ್ಘಾನಿಸ್ತಾನದ ಜನರಲ್ಲಿ ಆತಂಕವನ್ನು ಹುಟ್ಟು ಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+