Get Updates
Get notified of breaking news, exclusive insights, and must-see stories!

53 ಮದುವೆಯಾದ 63ರ ಹರೆಯದ ಅಬ್ದುಲ್ಲಾ: ಕಾರಣ ಕೇಳಿದರೆ ತಲೆ ಕೆಡುತ್ತೆ..

ಮದುವೆ ಆಗುವುದು ಹಲವರಿಗೆ ಕಷ್ಟದ ಕೆಲಸ. ಆದರೆ ಸೌದಿ ಅರೇಬಿಯಾದಲ್ಲಿ ವ್ಯಕ್ತಿಯೊಬ್ಬ ಒಂದಲ್ಲ ಎರಡಲ್ಲ ಬರೋಬ್ಬರಿ 53 ಬಾರಿ ಮದುವೆಯಾಗಿದ್ದಾನೆ. 63 ನೇ ವಯಸ್ಸಿನಲ್ಲಿ 53 ಮಹಿಳೆಯರನ್ನು ಮದುವೆಯಾಗಿ ಜನರಿಗೆ ಆಶ್ಚರ್ಯವನ್ನುಂಟು ಮಾಡಿದ್ದಾನೆ.

53 ಬಾರಿ ಮದುವೆಯಾಗಿರುವ 63 ವರ್ಷದ ಸೌದಿ ವ್ಯಕ್ತಿಯ ಹೆಸರು ಅಬು ಅಬ್ದುಲ್ಲಾ. ಕಳೆದ 43 ವರ್ಷಗಳಲ್ಲಿ 53 ಮಹಿಳೆಯರನ್ನು ಏಕೆ ಮತ್ತು ಏನೆಂದು ಹುಡುಕುತ್ತಾ ಮದುವೆಯಾಗಿದ್ದೇನೆ ಎಂದು ಅಬ್ದುಲ್ಲಾ ಇತ್ತೀಚೆಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

20 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿವಾಹವಾದೆ. ನನ್ನ ಮೊದಲ ಹೆಂಡತಿ ನನಗಿಂತ ಆರು ವರ್ಷ ಚಿಕ್ಕವಳು. ಕಳೆದ 43 ವರ್ಷಗಳಲ್ಲಿ ನಾನು 53 ಮಹಿಳೆಯರನ್ನು ಮದುವೆಯಾಗಿದ್ದೇನೆ ಎಂದು ಅಬ್ದುಲ್ಲಾ ಹೇಳಿದ್ದಾರೆ. ನಾನು ಮೊದಲ ಬಾರಿಗೆ ಮದುವೆಯಾದಾಗ ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗಲು ನನಗೆ ಯಾವುದೇ ಯೋಜನೆ ಇರಲಿಲ್ಲ. ಏಕೆಂದರೆ ನಾನು ಸಂತೋಷ ಮತ್ತು ಆರಾಮದಾಯಕವಾಗಿದ್ದೆ. ನನ್ನ ಮೊದಲ ಹೆಂಡತಿಯಿಂದ ಮಕ್ಕಳನ್ನು ಹೊಂದಿದ್ದೇನೆ ಎಂದು ಅಬು ಅಬ್ದುಲ್ಲಾ ಹೇಳಿದರು.

ಆದರೆ ಅಬು ಅಬ್ದುಲ್ಲಾ ಮತ್ತು ಅವರ ಪತ್ನಿ ನಡುವಿನ ಸಂಬಂಧದಲ್ಲಿ ಸಮಸ್ಯೆಗಳಿದ್ದವು. ಅವರು 23 ವರ್ಷದವರಾಗಿದ್ದಾಗ ಮೊದಲ ಹೆಂಡತಿಯ ಅನುಮತಿಯೊಂದಿಗೆ ಮತ್ತೊಂದು ಹುಡುಗಿಯನ್ನು ವಿವಾಹವಾದರು. ಮೊದಲ ಮತ್ತು ಎರಡನೇ ಹೆಂಡತಿಯರು ಜಗಳವಾಡಲು ಪ್ರಾರಂಭಿಸಿದಾಗ, ಅವರು ಅಸಮಾಧಾನಗೊಂಡರು. ಹೀಗಾಗಿ ಮೂರನೇ ಮದುವೆಯಾಗಲು ನಿರ್ಧರಿಸಿದರು. ಆಗಲೂ ಪತ್ನಿಯರು ಜಗಳವಾಡಲು ಆರಂಭಿಸಿದರು ಬಳಿಕ ನಾಲ್ಕನೇ ಮದುವೆಯಾಗಲು ನಿರ್ಧರಿಸಿದರು. ನಂತರ ಅವರು ತನ್ನ ಮೊದಲ ಇಬ್ಬರು ಹೆಂಡತಿಯರಿಗೆ ವಿಚ್ಛೇದನ ನೀಡಿದರು.

ವಿದೇಶಿ ಪ್ರವಾಸದ ಸಮಯದಲ್ಲಿ ಮದುವೆ

ವಿದೇಶಿ ಪ್ರವಾಸದ ಸಮಯದಲ್ಲಿ ಮದುವೆ

ಅಬ್ದುಲ್ಲಾ ಅವರ ಹೆಚ್ಚಿನ ಮದುವೆಯನ್ನು ಸೌದಿ ದೇಶದ ಮಹಿಳೆಯರೊಂದಿಗೆ ಮಾಡಿಕೊಂಡರು. ಇದಲ್ಲದೇ ವಿದೇಶ ಪ್ರವಾಸದ ವೇಳೆ ಕೆಲವು ವಿದೇಶಿ ಯುವತಿಯರನ್ನು ವಿವಾಹವಾದರು. ಫಾರಿನ್ ಟೂರ್ ವೇಳೆ ಅಲ್ಲಿ ನಡೆದ ದುರ್ವರ್ತನೆಯಿಂದ ಪಾರಾಗಲು ಹೀಗೆ ಮಾಡಿದೆ ಎಂದು ಮದುವೆಯಾದ ಕಾರಣವನ್ನು ಹೇಳಿದ್ದಾರೆ. ಮಾತ್ರವಲ್ಲದೆ ಅವರು ನಾನು ನನ್ನ ಎಲ್ಲಾ ಹೆಂಡತಿಯರಿಗೆ ನ್ಯಾಯಯುತವಾಗಿರಲು ಪ್ರಯತ್ನಿಸಿದೆ ಎಂದೂ ಹೇಳಿಕೊಂಡಿದ್ದಾರೆ.

ಮದುವೆ ಬಳಿಕ ಮೂರ್ನಾಲ್ಕು ತಿಂಗಳಿಗೆ ವಿಚ್ಚೇದನ

ಮದುವೆ ಬಳಿಕ ಮೂರ್ನಾಲ್ಕು ತಿಂಗಳಿಗೆ ವಿಚ್ಚೇದನ

ತನ್ನ ಚಿಕ್ಕ ಮದುವೆ ಕೇವಲ ಒಂದು ರಾತ್ರಿ ಮಾತ್ರ ಇತ್ತು. ಮದುವೆಯಾದ ಎರಡೇ ದಿನದಲ್ಲಿ ನಾನು ಆ ಹೆಂಡತಿಯಿಂದ ವಿಚ್ಛೇದನ ಪಡೆದೆ. ಇದಲ್ಲದೇ ಮೂರ್ನಾಲ್ಕು ತಿಂಗಳು ಬೇರೆ ಪತ್ನಿಯರ ಜೊತೆ ವಾಸವಾಗಿದ್ದ. ದುಷ್ಟರಿಂದ ಪಾರಾಗಲು ನಾನು ಮದುವೆಯಾಗಿದ್ದೇನೆ ಎಂದು ಅಬ್ದುಲ್ಲಾ ಹೇಳಿದರು.

ಯುವತಿಯರಿಗೆ ಬದುಕು ಕಷ್ಟ

ಯುವತಿಯರಿಗೆ ಬದುಕು ಕಷ್ಟ

ಪ್ರತಿಯೊಬ್ಬ ಪುರುಷನು ತನ್ನ ಜೀವನವನ್ನು ಕೇವಲ ಒಬ್ಬ ಹೆಂಡತಿಯೊಂದಿಗೆ ಕಳೆಯಲು ಬಯಸುತ್ತಾನೆ. ಆದರೆ ಈ ಸ್ಥಿತಿಯು ವಯಸ್ಸಾದ ಮಹಿಳೆಯರ ಸುಲಭ. ಯುವತಿಯರಿಗೆ ಇದು ಕಷ್ಟಕರವಾಗುತ್ತದೆ ಎಂದು ಅಬ್ದುಲ್ಲಾ ಹೇಳಿದರು. ಹೀಗಾಗಿ ನನಗೆ ಅವರೊಂದಿಗೆ ಬದುಕು ಕಷ್ಟವಾಗುತ್ತಿತ್ತು. ಅವರ ದುರ್ವರ್ತನೆ ನನಗೆ ಈ ದಾರಿ ಹಿಡಿಸಿತು ಎಂದು ಹೇಳಿಕೊಂಡಿದ್ದಾರೆ.

ಮತ್ತೆ ಮದುವೆ ಯೋಜನೆಯಲ್ಲಿದ್ದಾರಾ ಅಬ್ದುಲ್ಲಾ?

ಮತ್ತೆ ಮದುವೆ ಯೋಜನೆಯಲ್ಲಿದ್ದಾರಾ ಅಬ್ದುಲ್ಲಾ?

ಮದುವೆಯಾಗುವ ಬಗ್ಗೆ ಅಬು ಅಬ್ದುಲ್ಲಾ ಪದೇ ಪದೇ ಹೇಳುತ್ತಿದ್ದ ಕಾರಣ ನಿಜಕ್ಕೂ ಅಚ್ಚರಿ ಮೂಡಿಸಿದೆ. ತಾವು ಪದೇ ಪದೇ ಮದುವೆಯಾಗಿರುವುದು ವೈಯಕ್ತಿಕ ಸಂತೋಷಕ್ಕಾಗಿ ಅಲ್ಲ. ಬದಲಿಗೆ ಮನಸ್ಸಿಗೆ ಶಾಂತಿಯನ್ನು ಕಂಡುಕೊಳ್ಳುವ ಉದ್ದೇಶವಾಗಿತ್ತು. 53 ಬಾರಿ ವಿವಾಹವಾದರು ಅದು ಸಿಗಲಿಲ್ಲ ಎಂದು ಅವರು ಹೇಳಿದ್ದಾರೆ. ಹೀಗೆ ಅನೇಕ ಬಾರಿ ಮದುವೆಯಾಗಲು ಕಾರಣವನ್ನು ಅವರು ತುಂಬಾ ಸರಳವಾಗಿ ಹೇಳಿದ ಅವರು ಅವರನ್ನು ಸಂತೋಷಪಡಿಸುವ ಮಹಿಳೆಯನ್ನು ಹುಡುಕುತ್ತಿದ್ದಾರೆ.

ಈಗ ಹೆಚ್ಚು ಮದುವೆಯಾಗಲು ಬಯಸುತ್ತೀರಾ ಎಂದು ಅಬ್ದುಲ್ಲಾ ಅವರನ್ನು ಕೇಳಿದರೆ, ಅದಕ್ಕೆ ಪ್ರತಿಕ್ರಿಯಿಸಿದ ಅಬ್ದುಲ್ಲಾ, ಈಗ ನನ್ನ ಹುಡುಕಾಟ ಮುಗಿದಿದೆ. ಸಂತೋಷಪಡಿಸುವ ಮಹಿಳೆಯನ್ನು ನಾನು ಹುಡುಕಿದ್ದೇನೆ. ನಾನು ಅಂತಹ ಮಹಿಳೆಯನ್ನು ಮದುವೆಯಾಗಿದ್ದೇನೆ ಮತ್ತು ಮರುಮದುವೆಯಾಗುವ ಯಾವುದೇ ಯೋಜನೆ ಇಲ್ಲ ಎಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+