58 ಪಾಕಿಗಳ ಹೆಣ ಕೆಡವಿದ ತಾಲಿಬಾನ್ ಸೈನಿಕರು, ಭಾರತದ ಶತ್ರುಗಳಿಗೆ ತಕ್ಕ ಪಾಠ... Pakistani Soldiers
ಪಾಪಿ ಪಾಕಿಸ್ತಾನ ಕೆಲವು ತಿಂಗಳ ಹಿಂದೆ ಭಾರತೀಯರ ಮೇಲೆ ದಾಳಿ ಮಾಡಿ ಸರಿಯಾದ ಪಾಠ ಕಲಿತು ಸೈಲೆಂಟ್ ಆಗಿತ್ತು. ಆದರೆ ಇದೀಗ ದಿಢೀರ್ ಮತ್ತೆ ಬಾಲ ಬಿಚ್ಚಿರುವ ಪಾಪಿ ಪಾಕಿಸ್ತಾನ, ಮತ್ತೊಂದು ನೆರೆಯ ದೇಶ ಅಫ್ಘಾನಿಸ್ತಾನ ಮೇಲೆ ಭೀಕರ ದಾಳಿ ಮಾಡಿದೆ. ಈ ದಾಳಿಗೆ ಸರಿಯಾದ ಉತ್ತರವನ್ನೂ ನೀಡಿರುವ ತಾಲಿಬಾನ್ ಸೈನಿಕರು, ಪಾಕಿಸ್ತಾನ ಸೇನೆ ಮುಟ್ಟಿ ಮುಟ್ಟಿ ನೋಡುಕೊಳ್ಳುವಂತೆ ಇದೀಗ ಉತ್ತರ ಕೊಟ್ಟಿದ್ದಾರೆ. 58 ಪಾಕಿಗಳ ಹೆಣ ಕೆಡವಿದ ತಾಲಿಬಾನ್ ಸೈನಿಕರು ಭಾರತದ ಶತ್ರುಗಳಿಗೆ ತಕ್ಕ ಪಾಠ ಕಲಿಸಿದ್ದಾರೆ.
ಪಾಕಿಸ್ತಾನಕ್ಕೆ ಈ ಜನ್ಮದಲ್ಲಿ ಬುದ್ಧಿ ಬರೋದಿಲ್ಲ ಅನ್ನೋ ಮಾತು ಪದೇ ಪದೇ ಪ್ರೂವ್ ಆಗುತ್ತಿದೆ. ಹೀಗೆ ತನ್ನ ಅಕ್ಕಪಕ್ಕದ ದೇಶಗಳ ಜೊತೆಗೆ ನಿರಂತರವಾಗಿ ಕಿರಿಕ್ ಮಾಡುತ್ತಿರುವ ಪಾಕಿಸ್ತಾನ ಈಗ ಮತ್ತೊಂದು ಚಪ್ಪಡಿ ಕಲ್ಲು ತಲೆ ಮೇಲೆ ಹಾಕಿಕೊಂಡಿದೆ. ಅಫ್ಘಾನ್ ಇಸ್ಲಾಮಿಕ್ ಎಮಿರೇಟ್ ಪಡೆಗಳು ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಿವೆ.

ವಿವಾದಿತ ಪ್ರದೇಶವಾದ ಡ್ಯುರಾಂಡ್ ರೇಖೆಯ ಉದ್ದಕ್ಕೂ ದಿಢೀರ್ ಪಾಕಿಸ್ತಾನ ಸೇನೆಯ ವಿರುದ್ಧ ಭೀಕರ ದಾಳಿ ನಡೆಸಿದೆ ತಾಲಿಬಾನ್. ಈ ದಾಳಿ ಬಗ್ಗೆ ತಾಲಿಬಾನ್ ಸರ್ಕಾರದ ವಕ್ತಾರ, ಜಬೀವುಲ್ಲಾ ಮುಜಾಹಿದ್ ಮಾಹಿತಿ ನೀಡಿದ್ದು, ಮತ್ತಷ್ಟು ಕಠಿಣ ಕ್ರಮದ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಭಾರತದ ಜೊತೆಯಲ್ಲಿ ಅಫ್ಘಾನಿಸ್ತಾನ ಸಂಬಂಧ ಗಟ್ಟಿ ಆಗುತ್ತಿರುವ ಈ ಸಮಯದಲ್ಲೇ ಈ ರೀತಿಯ ಕಿರಿಕ್ ಆಗಿದೆ. ಹೀಗಾಗಿ 58 ಪಾಕಿಗಳ ಹೆಣ ಕೆಡವಿದ ತಾಲಿಬಾನ್...
58 ಪಾಕಿಗಳ ಹೆಣ ಕೆಡವಿದ ತಾಲಿಬಾನ್...
ತಾಲಿಬಾನ್ ಪಡೆಗಳು ಪಾಕಿಸ್ತಾನದ ವಿರುದ್ಧ ಎಷ್ಟು ರೊಚ್ಚಿಗೆದ್ದಿವೆ ಅಂದ್ರೆ ಈಗ ಘೋರ ಯುದ್ಧವೇ ಶುರು ಆಗಿ ಹೋಗಿದೆ. ಏನು ತಪ್ಪೇ ಮಾಡದಿದ್ದರೂ ಸುಮ್ ಸುಮ್ನೆ ಮೇಲೆ ಬಂದಿರುವ ಪಾಪಿ ಪಾಕ್ ಸೇನೆಗೆ ಓಡಾಡಿಸಿಕೊಂಡು ಬಾರಿಸುತ್ತಿದೆ ಅಫ್ಘಾನಿಸ್ತಾನ. ಹೀಗೆ ತಾಲಿಬಾನ್ ಪಡೆಗಳು ಅಫ್ಘಾನಿಸ್ತಾನದ ರಕ್ಷಣೆಗಾಗಿ ನಡೆಸಿದ ಕಾರ್ಯಾಚರಣೆ ವೇಳೆ 58 ಪಾಕ್ ಸೈನಿಕರು ಜೀವ ಬಿಟ್ಟಿದ್ದಾರೆ, 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
20 ಪಾಕ್ ಭದ್ರತಾ ಶಿಬಿರಗಳು ಉಡೀಸ್!
ತಾಲಿಬಾನ್ ಸರ್ಕಾರದ ವಕ್ತಾರ ಜಬೀವುಲ್ಲಾ ಮುಜಾಹಿದ್ ಇದೀಗ ಪಾಕಿಸ್ತಾನ ಸೇನೆ & ಅಲ್ಲಿನ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದು, ಅಫ್ಘಾನಿಸ್ತಾನದ ಸಾರ್ವಭೌಮತ್ವದ ರಕ್ಷಣೆಗೆ ನಾವು ಎಲ್ಲಾ ರೀತಿ ಕ್ರಮ ಜರುಗಿಸಲು ಸಿದ್ಧ. ಅಫ್ಘಾನಿಸ್ತಾನದ ಸಾರ್ವಭೌಮತ್ವದ ಯಾವುದೇ ರೀತಿಯ ಉಲ್ಲಂಘನೆಗೆ ಉತ್ತರವನ್ನು ನೀಡದೆ ಸುಮ್ಮನೆ ಇರೋದಿಲ್ಲ ಅನ್ನೋ ಖಡಕ್ ಸಂದೇಶವನ್ನು ಕೂಡ ಪಾಕಿಸ್ತಾನದ ನಾಯಕರಿಗೆ & ಸೇನಾಧಿಕಾರಿಗಳಿಗೆ ರವಾನಿಸಲಾಗಿದೆ. ಅಫ್ಘಾನ್ ನಡೆಸಿದ ದಾಳಿಯಲ್ಲಿ 20 ಪಾಕ್ ಭದ್ರತಾ ಶಿಬಿರಗಳನ್ನು ನಾಶ ಮಾಡಲಾಗಿದ್ದು, ಅಫ್ಘಾನ್ ಕೂಡ 9 ಸೈನಿಕರನ್ನು ಕಳೆದುಕೊಂಡಿದೆ. ಕತಾರ್ ಮತ್ತು ಸೌದಿಯ ಮನವಿ ಬೆನ್ನಲ್ಲೇ ಕಾರ್ಯಾಚರಣೆ ನಿಲ್ಲಿಸಿದ್ದೇವೆ ಎಂದು ಅಫ್ಘಾನಿಸ್ತಾನ ತಿಳಿಸಿದೆ.












Click it and Unblock the Notifications