ಟ್ರಂಪ್ ಲೈಂಗಿಕ ಪುರಾಣವನ್ನು ಬಿಚ್ಚಿಟ್ಟ ಮಹಿಳಾಮಣಿಗಳು!

Posted By:
Subscribe to Oneindia Kannada

ನ್ಯೂಯಾರ್ಕ್, ಅಕ್ಟೋಬರ್, 14 : ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ವಿರುದ್ಧ ದಿನೇ ದಿನೇ ಟೀಕೆಗಳು ಮತ್ತು ಆರೋಪಗಳು ಹೆಚ್ಚಾಗುತ್ತಲೇ ಇವೆ.

ಡೋನಾಲ್ಡ್ ಟ್ರಂಪ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಹಲವು ಮಹಿಳೆಯರು ದೂರಿರುವ ಬೆನ್ನಲ್ಲೇ ಈಗ ಹೊಸದಾಗಿ ಮತ್ತೆ ಐವರು ಮಹಿಳೆಯರು ಡೊನಾಲ್ಡ್ ಟ್ರಂಪ್ ನಮ್ಮ ಜತೆ ಅಶ್ಲೀಲವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಟ್ರಂಪ್ ಅವರು 2005ರಲ್ಲಿ ಮಹಿಳೆಯರ ವಿರುದ್ಧ ಅಶ್ಲೀಲ ಮತ್ತು ಅವಾಚ್ಯ ಪದಗಳನ್ನು ಬಳಸಿದ್ದ ವಿಡಿಯೋವನ್ನು ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಮಾಡಲಾಗಿತ್ತು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಡೋನಾಲ್ಡ್ ಟ್ರಂಪ್ ಹೆಚ್ಚು ಟೀಕೆಗೆ ಗುರಿಯಾಗಿದ್ದರು. ಈ ವಿಡಿಯೋ ಬಿಡುಗಡೆಯಾದ ಬೆನ್ನಲ್ಲೇ ಅವರ ವಿರುದ್ಧ ಮಹಿಳೆಯರು ಈ ರೀತಿ ಹೇಳಿಕೆ ನೀಡಿರುವುದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. [ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ : ಹಿಲರಿ vs ಟ್ರಂಪ್ ಚರ್ಚೆ ಮುಖ್ಯಾಂಶ]

ಮಹಿಳೆಯರನ್ನು ನೇವರಿಸಿದ ಡೊನಾಲ್ಡ್ ಟ್ರಂಪ್:

ಮಹಿಳೆಯರನ್ನು ನೇವರಿಸಿದ ಡೊನಾಲ್ಡ್ ಟ್ರಂಪ್:

ಟ್ರಂಪ್ ತಮ್ಮ ಜನಾಂಗವನ್ನು ನೇವರಿಸಿದ್ದರು ಎಂದು ಇಬ್ಬರು ಮಹಿಳೆಯರು ಆರೋಪಿಸಿರುವ ವರದಿಯನ್ನು 'ದಿನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

ಮತ್ತೊಬ್ಬ ಮಹಿಳೆ ಕೂಡ ಟ್ರಂಪ್ ವಿರುದ್ಧ ಆರೋಪಿಸಿರುವ ವರದಿಯನ್ನು 'ಪಾಮ್ ಬೀಚ್ ಪೋಸ್ಟ್' ಪತ್ರಿಕೆ ವರದಿ ಮಾಡಿದೆ.

ವಿಮಾನದಲ್ಲಿ ಕಿರುಕುಳ:

ವಿಮಾನದಲ್ಲಿ ಕಿರುಕುಳ:

13 ವರ್ಷಗಳ ಹಿಂದೆ ಫ್ಲಾರಿಡಾದ ಮಾರ್-ಎ- ಲಾಗೋ ಕ್ಲಬ್ ನಲ್ಲಿ ಟ್ರಂಪ್ ಅವರು ತಮ್ಮ ಜನಾಂಗದ ಮಹಿಳೆಯರನ್ನು ಸವರಿ ಮಾತನಾಡಿಸಿದ್ದರು ಎಂದು ಮಿಕ್ ಗಿಲ್ಲವ್ರೆ(36) ಹಾಗೂ ಮೂರು ದಶಕದ ಹಿಂದೆ ವಿಮಾನದಲ್ಲಿ ಅಕ್ಕ ಪಕ್ಕ ಕುಳಿತಿದ್ದಾಗ ಟ್ರಂಪ್ ತಮ್ಮ ಜನಾಂಗವನ್ನು ಸವರಿದ್ದರು ಎಂದು ಜೆಸ್ಸಿಕಾ ಲೀಡ್ಸ್(74) ದೂರಿದ್ದಾರೆ.

ನಟಿ-ಲೇಖಕಿಯರಿಗೂ ಕಿರುಕುಳ:

ನಟಿ-ಲೇಖಕಿಯರಿಗೂ ಕಿರುಕುಳ:

ಇನ್ನು ನಟಿ ಜೆನ್ನಿಫರ್ ಮರ್ಫಿ ಮತ್ತು 'ಪೀಪಲ್' ನಿಯತಕಾಲಿಕೆ ಲೇಖಕಿ ನತಾಶಾ ಸ್ಟೋಯ್ನೊಫ್ ಅವರೂ ಸಹ ಡೊನಾಲ್ಡ್ ಟ್ರಂಪ್ ವಿರುದ್ಧ ಲೈಂಗಿಕ ಕಿರುಕುಳ ಆಪಾದನೆ ಮಾಡಿದ್ದಾರೆ. 2005ರಲ್ಲಿ ಸಂದರ್ಶನದ ವೇಳೆ ಟ್ರಂಪ್ ತಮ್ಮ ತುಟಿಗಳಿಗೆ ಚುಂಬಿಸಿದ್ದರು ಎಂದು ಜೆನ್ನಿಫರ್ ಮಾರ್ಫಿ ನೀಡಿರುವ ಹೇಳಿಕೆ 'ಗ್ರಾಜಿಯಾ'ದಲ್ಲಿ ವರದಿಯಾಗಿದೆ.

ಲಿಫ್ಟ್ ನಲ್ಲಿ ಲಿಪ್ ಕಿಸ್:

ಲಿಫ್ಟ್ ನಲ್ಲಿ ಲಿಪ್ ಕಿಸ್:

"ಟ್ರಂಪ್ ಅವರನ್ನ ಲಿಫ್ಟ್ ನಲ್ಲಿ ಕಂಡು ಕೈ ಕುಲುಕಿ ಮಾತನಾಡಿಸಲು ಹೋದಾಗ ಟ್ರಂಪ್ ಅವರು ನೇರವಾಗಿ ನನ್ನ ತುಟಿಗಳನ್ನು ಚುಂಬಿಸಿದ್ದರು'' ಎಂದು ಟ್ರಂಪ್ ಟವರ್ ನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ 22 ವರ್ಷದ ರಚೇಲ್ ಕ್ರೂಕ್ಸ್ ನೀಡಿರುವ ಹೇಳಿಕೆಯನ್ನು 'ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

ಪತ್ರಕರ್ತೆ ಕತ್ತಿಗೆ ಮುತ್ತಿಕ್ಕಿದ ಟ್ರಂಪ್:

ಪತ್ರಕರ್ತೆ ಕತ್ತಿಗೆ ಮುತ್ತಿಕ್ಕಿದ ಟ್ರಂಪ್:

ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಅವರನ್ನು ಸಂದರ್ಶಿಸುವ ಸಲುವಾಗಿ 2005ರಲ್ಲಿ ಮಾರ್-ಎ-ಲಾ ಕ್ಕೆ ತೆರಳಿದ್ದೆ, ಆಗ ಟ್ರಂಪ್ ನನ್ನನ್ನು ತಮ್ಮ ಖಾಸಗಿ ಕೋಣೆಗೆ ಕರೆದೊಯ್ದು, ಕ್ಷಣ ಮಾತ್ರದಲ್ಲಿ ನನನ್ನು ಗೋಡೆಗೆ ತಳ್ಳಿ ಬಲವಂತವಾಗಿ ತನ್ನ ನಾಲಿಗೆಯನ್ನು ನನ್ನ ಕತ್ತಿನ ಕೆಳಗೆ ಸ್ಪರ್ಶಿಸಿದ್ದರು ಎಂದು ಲೇಖಕಿ ಸ್ಟೊಯ್ನೊಫ್ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ರಂಪ್ ಬೆಂಬಲಿಗರು ' ದಿ ನ್ಯೂಯಾರ್ಕ್ ಟೈಮ್ಸ್' ಪತ್ರಿಕೆ ವರದಿ ಕಲ್ಪಿತವಾಗಿದ್ದು, ಅದು ಸಂಪೂರ್ಣ ಸುಳ್ಳು ಮತ್ತು ಅವರ ಚಾರಿತ್ರ್ಯ ವಧೆಯ ವ್ಯವಸ್ಥಿತ ಸಂಚು ಎಂದು ಆರೋಪಿಸಿದೆ.

ಹಿಲರಿ ಕ್ಲಿಂಟನ್ ಬೆಂಬಲಿಗರ ಖಂಡನೆ:

ಹಿಲರಿ ಕ್ಲಿಂಟನ್ ಬೆಂಬಲಿಗರ ಖಂಡನೆ:

ಟ್ರಂಪ್ ಕುರಿತು ಈ ವರದಿಗಳು ಟ್ರಂಪ್ ಅವರು ಮಹಿಳೆಯರೊಂದಿಗೆ ಯಾವ ರೀತಿ ವರ್ತಿಸುತ್ತಾರೆ ಎಂದು ಪ್ರಪಂಚಕ್ಕೇ ಗೊತ್ತಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಸುತ್ತಿರುವ ವ್ಯಕ್ತಿಯ ವ್ಯಕ್ತಿತ್ವಕ್ಕೆ ಶೋಭೇ ತರುವಂಥದಲ್ಲ ಎಂದು ಹಿಲರಿ ಕ್ಲಿಂಟ್ ಅವರ ಪ್ರಚಾರ ತಂಡದ ಸಂವಹನ ನಿರ್ದೇಶಕ ಜೆನ್ನಿಫರ್ ಪಾಲ್ಮೈರಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The allegations against Donald Trump of inappropriate sexual behavior gatherd momentum, with multiple womens making new allegations about the republic presidential nominee.
Please Wait while comments are loading...