ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸೆಗಾರರ ​​ಕಳ್ಳಸಾಗಣೆ ರಹಸ್ಯ: ದಕ್ಷಿಣ ಮೆಕ್ಸಿಕೋದ ಟ್ರಕ್ ಅಪಘಾತದಿಂದ ಬಯಲು

|
Google Oneindia Kannada News

ದಕ್ಷಿಣ ಮೆಕ್ಸಿಕೋದಲ್ಲಿ ಭೀಕರ ಟ್ರಕ್ ಅಪಘಾತ ಸಂಭವಿಸಿದ್ದು 49 ವಲಸಿಗರು ಸಾವನ್ನಪ್ಪಿದ್ದು 58 ಮಂದಿ ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಇದು ವಲಸೆಗಾರರ ​​ಕಳ್ಳಸಾಗಣೆಯ ಟ್ರಕ್ ಆಗಿತ್ತೆಂದು ಶಂಕಿಸಲಾಗಿದೆ. ಗುರುವಾರ ದಕ್ಷಿಣ ಮೆಕ್ಸಿಕೋದ ಹೆದ್ದಾರಿಯಲ್ಲಿ ಮಧ್ಯ ಅಮೇರಿಕನ್ ವಲಸಿಗರಿದ್ದ ಕಾರ್ಗೋ ಟ್ರಕ್ ಉರುಳಿ ಪಾದಚಾರಿ ಸೇತುವೆಗೆ ಅಪ್ಪಳಿಸಿದೆ. ಈ ದುರಂತದಲ್ಲಿ ಕನಿಷ್ಠ 49 ಜನರು ಸಾವನ್ನಪ್ಪಿದ್ದು ಸುಮಾರು 58 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.

ಪ್ರಾಥಮಿಕ ಅಂದಾಜಿನ ಪ್ರಕಾರ, ಸುಮಾರು 40 ಜನರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಚಿಯಾಪಾಸ್ ರಾಜ್ಯ ನಾಗರಿಕ ರಕ್ಷಣಾ ಕಚೇರಿಯ ಮುಖ್ಯಸ್ಥ ಲೂಯಿಸ್ ಮ್ಯಾನುಯೆಲ್ ಮೊರೆನೊ ಹೇಳಿದ್ದಾರೆ.

ದಕ್ಷಿಣ ಮೆಕ್ಸಿಕೋದ ಹೆದ್ದಾರಿಯಲ್ಲಿ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಉರುಳಿದಾಗ ಕನಿಷ್ಠ 49 ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್‌ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಮೆಕ್ಸಿಕನ್ ಅಧಿಕಾರಿಗಳು ಹೇಳಿದ್ದಾರೆ. ಚಿಯಾಪಾಸ್ ರಾಜ್ಯದ ರಾಜಧಾನಿ ಕಡೆಗೆ ಹೋಗುವ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ದೃಶ್ಯದ ಫೋಟೋಗಳು ಬಲಿಪಶುಗಳು ಪಾದಚಾರಿ ಮಾರ್ಗದಲ್ಲಿ ಮತ್ತು ಟ್ರಕ್‌ನ ಒಳಗೆ ಇರುವುದು ತೋರಿಸುತ್ತದೆ.

49 migrants dead, 58 injured in truck crash in south Mexico

ಬಲಿಪಶುಗಳು ಮಧ್ಯ ಅಮೆರಿಕದಿಂದ ವಲಸೆ ಬಂದವರು ಎಂದು ಕಂಡುಬಂದಿದೆ. ಆದರೂ ಅವರ ರಾಷ್ಟ್ರೀಯತೆಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ. ಬದುಕುಳಿದವರಲ್ಲಿ ಕೆಲವರು ನೆರೆಯ ದೇಶವಾದ ಗ್ವಾಟೆಮಾಲಾದಿಂದ ಬಂದವರಾಗಿದ್ದಾರೆ. ಟ್ರಕ್‌ ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಭಾರೀ ತೂಕವನ್ನು ಹೊಂದಿದ್ದ ಟ್ರಕ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಾದಚಾರಿ ಸೇತುವೆಯ ಕೆರಳಗೆ ಅಪ್ಪಳಿಸಿದೆ ಎಂದು ಮೊರೆನೊ ಹೇಳಿದರು.

ಈ ವಾಹನದಲ್ಲಿ ಕನಿಷ್ಠ 107 ಜನ ಪ್ರಯಾಣಿಸುತ್ತಿದ್ದರೆಂದು ತಿಳಿದು ಬಂದಿದೆ. ಮೆಕ್ಸಿಕೋದಲ್ಲಿನ ಈ ಸರಕು ಸಾಗಣೆ ಟ್ರಕ್‌ಗಳು ದಕ್ಷಿಣ ಮೆಕ್ಸಿಕೋದಲ್ಲಿ ಹಲವಾರು ಜನರ ಕಳ್ಳ ಸಾಗಾಣೆ ಮಾಡುತ್ತಿತ್ತು ಎಂದು ಊಹಿಸಲಾಗಿದೆ. ಟ್ರಕ್ ಅಪಘಾತಕ್ಕೀಡಾದಾಗ ಇನ್ನೂ ಹೆಚ್ಚಿನ ವಲಸಿಗರು ಟ್ರಕ್‌ನಲ್ಲಿದ್ದರು ಮತ್ತು ವಲಸೆ ಏಜೆಂಟರಿಂದ ಬಂಧನಕ್ಕೊಳಗಾಗುವ ಭಯದಿಂದ ಓಡಿಹೋದರು ಎಂದು ಮೊರೆನೊ ಹೇಳಿದ್ದಾರೆ.

ಓಡಿಹೋದವರಲ್ಲಿ ಕೆಲವರು ರಕ್ತಸಿಕ್ತ ಅಥವಾ ಮೂಗೇಟಿಗೊಳಗಾಗಿದ್ದರು. ತಪ್ಪಿಸಿಕೊಳ್ಳುವ ಹತಾಶೆಯಲ್ಲಿ ಕುಂಟುತ್ತಾ ಓಡಿಹೋದರು ಎಂದು ಅರೆವೈದ್ಯರು ಹೇಳಿದ್ದಾರೆ. ಟ್ರಕ್ ಮೂಲತಃ ಮಾನವ ಕಳ್ಳಸಾಗಾಣೆಗಾಗಿ ಬಳಸಿದ ರೀತಿಯಲ್ಲಿ ಕಂಡುಬಂದಿದೆ. ಡಿಕ್ಕಿಯ ರಭಸಕ್ಕೆ ಕಂಟೇನರ್ ನಜ್ಜುಗುಜ್ಜಾಗಿದೆ. ಚಾಲಕ ಬದುಕುಳಿದಿದ್ದಾನೆಯೇ ಎಂಬುದು ಸ್ಪಷ್ಟವಾಗಿಲ್ಲ.

ಈ ಟ್ರಕ್ ಗ್ವಾಟೆಮಾಲಾದ ಗಡಿಯ ಸಮೀಪವಿರುವ ಮೆಕ್ಸಿಕೊದಿಂದ ಮೆಕ್ಸಿಕೊದ ಕೇಂದ್ರ ರಾಜ್ಯವಾದ ಪ್ಯೂಬ್ಲಾಗೆ ಸಾಗಿ ಅಲ್ಲಿ USD 2,500 ಮತ್ತು USD 3,500 ನಡುವೆ ಪಾವತಿ ಸಂಗ್ರಹಿಸಬೇಕಿತ್ತು. ಅಲ್ಲಿಗೆ ಬಂದ ನಂತರ, ಅವರು ಯುಎಸ್ ಗಡಿಗೆ ಇವನ್ನು ಕರೆದೊಯ್ಯಲು ಮತ್ತೊಂದು ಗುಂಪಿನ ವಲಸಿಗ ಕಳ್ಳಸಾಗಣೆದಾರರೊಂದಿಗೆ ಒಪ್ಪಂದ ಮಾಡಿಕೊಂಡಿರಬಹುದು ಎನ್ನಲಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ, ಮೆಕ್ಸಿಕನ್ ಅಧಿಕಾರಿಗಳು ವಲಸಿಗರು US ಗಡಿಯ ಕಡೆಗೆ ದೊಡ್ಡ ಗುಂಪುಗಳಲ್ಲಿ ಆಗಮಿಸುತ್ತಿರುವುದನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೂ ವಲಸೆಗಾರರ ​​ಕಳ್ಳಸಾಗಣೆಯ ರಹಸ್ಯ ಮತ್ತು ಅಕ್ರಮ ಹರಿವು ಮುಂದುವರೆದಿದೆ.

ಕಳೆದ ಅಕ್ಟೋಬರ್‌ನಲ್ಲಿ ಅತಿದೊಡ್ಡ ಮಾನವ ಕಳ್ಳಸಾಗಣೆ ಜಾಲ ಪತ್ತೆಯಾಗಿದ್ದನ್ನು ಈ ವೇಳೆ ಸ್ಮರಿಸಬಹುದು. ಉತ್ತರದ ಗಡಿ ರಾಜ್ಯವಾದ ತಮೌಲಿಪಾಸ್‌ನ ಅಧಿಕಾರಿಗಳ ಬೆಂಗಾವಲು ಪಡೆ ಮುಖ್ಯವಾಗಿ 652 ಮಧ್ಯ ಅಮೇರಿಕನ್ ವಲಸಿಗರು US ಗಡಿಯತ್ತ ಸಾಗುತ್ತಿರುವ ಆರು ಸರಕು ಟ್ರಕ್‌ಗಳನ್ನು ವಶಪಡಿಸಿಕೊಂಡಿತ್ತು.

Recommended Video

ಭಾರತ ಸೇನೆಗೆ ಬಿಪಿನ್ ರಾವತ್ ಕೊಟ್ಟ ಕೊಡುಗೆ ಏನೇನು ಗೊತ್ತಾ? | Oneindia Kannada

English summary
A massive truck accident in southern Mexico has left 49 migrants dead and 58 injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X