Umrah Pilgrims: ಉಮ್ರಾ ಯಾತ್ರಿಕರು ತೆರಳುತ್ತಿದ್ದ ಬಸ್ ಅಪಘಾತ, 42 ಜನರು ಬಲಿ?
ಹೈದರಾಬಾದ್: ಉಮ್ರಾ ಯಾತ್ರಿಕರ ಬಸ್ ಅಪಘಾತವಾಗಿ ಭೀಕರ ದುರಂತವೊಂದು ಸಂಭವಿಸಿದೆ. ಇಸ್ಲಾಂ ಧರ್ಮಿಯರ ಪವಿತ್ರ ಕ್ಷೇತ್ರವಾದ ಮಕ್ಕಾದಿಂದ ಮದೀನಾಗೆ ಉಮ್ರಾ ಯಾತ್ರಿಕರು ತೆರಳುವ ಸಮಯದಲ್ಲಿ, ಡೀಸೆಲ್ ಟ್ಯಾಂಕರ್‌ಗೆ ಉಮ್ರಾ ಯಾತ್ರಿಕರ ಬಸ್ ಡಿಕ್ಕಿಯಾಗಿದೆ. ಹೀಗೆ ಸಂಭವಿಸಿದ ಭೀಕರ ದುರಂತದಲ್ಲಿ 42 ಭಾರತೀಯ ಯಾತ್ರಿಕರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ಉಮ್ರಾ ಯಾತ್ರೆಗೆ ಜಗತ್ತಿನ ಮೂಲೆ ಮೂಲೆಯಿಂದ ಜನರು ಬರುತ್ತಾರೆ, ಹೀಗೆ ಹತ್ತಾರು ಲಕ್ಷ ಜನ ಯಾತ್ರಿಕರು ಉಮ್ರಾ ಯಾತ್ರೆ ಮಾಡಿ ಧನ್ಯರಾಗುತ್ತಾರೆ. ಇದೇ ರೀತಿಯಾಗಿ ಭಾರತದಿಂದ ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ ಉಮ್ರಾ ಯಾತ್ರೆಗೆ ಜನ ತೆರಳುತ್ತಾರೆ. ಆದರೆ ಹೀಗೆ ಯಾತ್ರೆಗೆ ತೆರಳಿರುವಾಗ ಡೀಸೆಲ್ ಟ್ಯಾಂಕರ್‌ಗೆ ಉಮ್ರಾ ಯಾತ್ರಿಕರ ಬಸ್ ಡಿಕ್ಕಿಯಾಗಿದೆ. ಆ ಕೂಡಲೇ ಬಸ್‌ಗೆ ಬೆಂಕಿ ಕೂಡ ಹೊತ್ತಿದೆ ಎಂದು ಹೇಳಲಾಗುತ್ತಿದ್ದು, ಈ ಭೀಕರ ಘಟನೆಯಲ್ಲಿ ಭಾರತ ಮೂಲದ 42 ಜನ ಸೇರಿ ಹತ್ತಾರು ಜನರ ಪ್ರಾಣಪಕ್ಷಿಯೇ ಹಾರಿ ಹೋಗಿದೆ ಎಂದು ಆರೋಪಿಸಲಾಗಿದೆ.

ಯಾತ್ರೆಗೆ ತೆರಳಿದ್ದಾಗ ಭೀಕರ ದುರಂತ
ಹೀಗೆ ಮೃತಪಟ್ಟಿರುವ 42 ಜನರ ಪೈಕಿ ಎಲ್ಲರೂ ಹೈದರಾಬಾದ್ ಮೂಲದ ಪ್ರಜೆಗಳು ಎನ್ನಲಾಗಿದೆ. ದುರಂತ ನಡೆದ ಸಮಯದಲ್ಲಿ, ಆ ಬಸ್‌ನಲ್ಲಿ 20 ಮಹಿಳೆಯರು ಸೇರಿ 11 ಮಕ್ಕಳು ಇದ್ದರೆಂದು ಹೇಳಲಾಗಿದ್ದು, ತನಿಖೆ ಮುಂದುವರಿದಿದೆ. ಮಕ್ಕಾದಲ್ಲಿ ಉಮ್ರಾ ಯಾತ್ರೆ ವಿಧಿ ನೆರವೇರಿಸಿ ನಂತರ ಇವರೆಲ್ಲರೂ ಮದೀನಾಗೆ ತೆರಳುತ್ತಿದ್ದರು. ಆದರೆ ಈ ಸಮಯದಲ್ಲಿ ಎಲ್ಲರೂ ಸುಸ್ತಾಗಿದ್ದ ಕಾರಣ ನಿದ್ದೆ ಮಾಡುತ್ತಿದ್ದರು, ಹೀಗೆ ಯಾತ್ರಿಕರೆಲ್ಲಾ ವಿಶ್ರಾಂತಿ ಪಡೆಯುವ ಸಮಯದಲ್ಲೇ ಭೀಕರ ಘಟನೆ ಸಂಭವಿಸಿಬಿಟ್ಟಿದೆ. ಹೀಗೆ ದುರ್ಘಟನೆಯಲ್ಲಿ ಭಾರತ ಮೂಲದ 42 ಜನರು ಬಲಿಯಾಗಿದ್ದಾರೆ. ಜಗತ್ತಿನಾದ್ಯಂತ ಈ ಭೀಕರ ಘಟನೆಗೆ ಜನರು ಕಂಬನಿ ಮಿಡಿದಿದ್ದಾರೆ.
ಅಪಘಾತದ ಬಗ್ಗೆ ತನಿಖೆ ಆರಂಭ
ಸುದ್ದಿ ತಿಳಿದ ತಕ್ಷಣ ರಕ್ಷಣಾ ತಂಡಗಳು ಕಾರ್ಯಾಚರಣೆ ಶುರು ಮಾಡಿದ್ದು, ದುರ್ಘಟನೆ ಹೇಗೆ ಸಂಭವಿಸಿದೆ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಅಲ್ಲದೆ ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಗಳಲ್ಲಿ ಟ್ರೀಟ್‌ಮೆಂಟ್ ಮುಂದುವರಿದಿದೆ. ಗಾಯಾಳುಗಳ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕ ಕಾಡುತ್ತಿದೆ. ಹಾಗೇ ಈ ಘಟನೆ ನಂತರ ಕೇಂದ್ರ ಸರ್ಕಾರ ಕೂಡ ಸತತ ಸಂಪರ್ಕದಲ್ಲಿ ಇದ್ದು, ಮೃತರ ಕುಟುಂಬಗಳಿಗೆ ಇದೀಗ ನೆರವಾಗುತ್ತಿದೆ. ಭಾರತ ಮೂಲದ ಯಾತ್ರಿಕರ ದುರಂತ ಅಂತ್ಯ ಇದೀಗ ದೇಶಾದ್ಯಂತ ಭಾರಿ ನೋವು ತರಿಸಿದೆ...












Click it and Unblock the Notifications