ಸಿಡ್ನಿಯಲ್ಲಿ ಬೆಂಗಳೂರಿನ ಮಹಿಳಾ ಟೆಕ್ಕಿ ಹತ್ಯೆ
ಸಿಡ್ನಿ, ಮಾ.8: ಬೆಂಗಳೂರು ಮೂಲದ ಮಹಿಳಾ ಐಟಿ ಕನ್ಸಲ್ಟೆಂಟ್ ರೊಬ್ಬರನ್ನು ಅವರ ಮನೆ ಸಮೀಪವೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ. ಪ್ರಭಾ ಅರುಣ್ ಕುಮಾರ್ ಎಂಬ 41 ವರ್ಷ ವಯಸ್ಸಿನ ಮಹಿಳೆಯನ್ನು ದುಷ್ಕರ್ಮಿಗಳು ಅವರ ಮನೆ ಸಮೀಪವೇ ಶನಿವಾರ ರಾತ್ರಿ ಕೊಂದಿದ್ದಾರೆ.
ಪಶ್ಚಿಮ ಸಿಡ್ನಿಯಲ್ಲಿ ನಡೆದಿರುವ ಈ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಮೃತಳ ಕುಟುಂಬದೊಡನೆ ನಿರಂತರ ಸಂಪರ್ಕದಲ್ಲಿದ್ದು, ದುಷ್ಕರ್ಮಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಲಾಗುವುದು ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಪ್ರಭಾ ಅರುಣ್ ಕುಮಾರ್ ಅವರು ಮನೆಯ ಸಮೀಪವಿರುವ ಪರಮಟ್ಟಾ ಪಾರ್ಕಿಗೆ ತೆರಳಿದ್ದ ಪ್ರಭಾ ಅವರು ತಮ್ಮ ಪತಿ ಅರುಣ್ ಅವರ ಜೊತೆ ಮಾತನಾಡುತ್ತಿದ್ದ ವೇಳೆ ಹಲ್ಲೆಗೊಳಲಾಗಿದ್ದರು. 'ತಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ' ಎಂದು ತಮ್ಮ ಪತಿಗೆ ಮಾಹಿತಿ ರವಾನಿಸಿದ್ದಾರೆ. ಆದರೆ, ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು.

'ಪ್ರಭಾ ಅವರು ಕೆಲಸ ಮುಗಿಸಿ ಮನೆಗೆ ಬರುವಾಗ ಈ ಘಟನೆ ನಡೆದಿದ್ದು ಪಾರ್ಕ್ ಸಮೀಪದ ಸಿಸಿಟಿವಿ ದೃಶ್ಯವಾಳಿಯನ್ನು ಪರಿಶೀಲಿಸಲಾಗುತ್ತಿದೆ. ಪ್ರಭಾ ಅವರ ಮೊಬೈಲ್ ಸಂದೇಶ ಹಾಗೂ ಕಾಲ್ ರೆಕಾರ್ಡ್ ಪರೀಕ್ಷೆ ಮಾಡಲಾಗುತ್ತಿದೆ' ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರಿನ ಬಸವೇಶ್ವರ ನಗರ ಮೂಲದ ಪ್ರಭಾ ಅರುಣ್ ಕುಮಾರ್ ಕಳೆದ 4 ವರ್ಷಗಳಿಂದ ಸಿಡ್ನಿಯಲ್ಲಿರುವ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಕಾಲೇಜಿನಿಂದ ಬಿ.ಇ ಕಂಪ್ಯೂಟರ್ ಸೈನ್ ಪದವಿ ಪಡೆದಿದ್ದ ಪ್ರಭಾ ಅವರ ತಾಯಿ ಮನೆ ಕಡೆ ಕುಟುಂಬಸ್ಥರು ಬೆಂಗಳೂರಿನಲ್ಲಿರುವಅರುಣ್ ಅವರ ಮನೆಗೆ ಬಂದಿದ್ದಾರೆ.
ಸಾಯುವ ಮುನ್ನ ನನಗೆ ಯಾರೋ ಇರಿದಿದ್ದಾರೆ ಎಂದು ಪತಿಗೆ ಹೇಳಿದ್ದಾರೆ. ವಿಷ್ಯ ಕೇಳಿಸಿಕೊಂಡ ಪತಿ ಅರುಣ್ ಕೂಡಲೇ ಸಿಡ್ನಿಯತ್ತ ಮುಖ ಮಾಡಿದ್ದಾರೆ. ಭಾರತೀಯ ಧೂತವಾಸದೊಂದಿಗೆ ಅರುಣ್ ಅವರ ಕುಟುಂಬ ಸಂಪರ್ಕದಲ್ಲಿದ್ದು, ಪತ್ನಿಯ ಮೃತ ದೇಹವನ್ನು ತರಲು ಪತಿ ಅರುಣ್ ಕುಮಾರ್ ಆಸ್ಟ್ರೇಲಿಯಾಗೆ ತೆರಳಿದ್ದಾರೆ ಎಂದು ಹೇಳಿದ್ದಾರೆ. (ಪಿಟಿಐ)












Click it and Unblock the Notifications