ಮಗಳು ಹಲ್ಲುಜ್ಜಿಲ್ಲ ಎಂದು ಆ ಮಹಾತಾಯಿ ಒದ್ದು ಕೊಂದೇಬಿಟ್ಟಳು!

Posted By:
Subscribe to Oneindia Kannada

ವಾಷಿಂಗ್ಟನ್, ಫೆಬ್ರವರಿ 6: ನಾಲ್ಕು ವರ್ಷದ ಮಗಳು ಹಲ್ಲುಜ್ಜಲಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಇಪ್ಪತ್ತು ವರ್ಷದ ತಾಯಿ ಹೊಟ್ಟೆಗೆ ಒದ್ದಿದ್ದರಿಂದ ಆ ಬಾಲಕಿ ಮೃತಪಟ್ಟ ಘಟನೆ ಅಮೆರಿಕದಲ್ಲಿ ನಡೆದಿದೆ. ಐರಿಸ್ ಹರ್ನಾಂಡೆಜ್ ರಿವಾಸ್ ಮಗುವನ್ನು ಕೊಂದ ತಾಯಿ. ನೋಹ್ಲೆ ಅಲೆಕ್ಸಾಂಡ್ರಾ ಮಾರ್ಟಿನೆಜ್ ಮೃತ ಬಾಲಕಿ.

ಮೇರಿಲ್ಯಾಂಡ್ ನ ಗೈಥರ್ಸ್ ಬರ್ಗ್ ಮನೆಯಲ್ಲಿ ಅಲೆಕ್ಸಾಂಡ್ರಾ ಸ್ನಾನ ಮಾಡಲು ತೆರಳಿದಳು. ಹದಿನೈದು ನಿಮಿಷದ ನಂತರ ಬಾತ್ ಟಬ್ ನಲ್ಲಿ ಮುಳುಗಿದ್ದ ಮಗುವನ್ನು ರಿವಾಸ್ ನೋಡಿದ್ದಾಳೆ. ಆದರೆ ಆಸ್ಪತ್ರೆಗೆ ಕರೆ ಮಾಡುವುದಕ್ಕೆ ಒಂದು ಗಂಟೆ ಸಮಯ ತೆಗೆದುಕೊಂಡಿದ್ದಾಳೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.[ಅಡಿ ದೂರದಲ್ಲಿದೆ ಅಪಾಯ, ಬದುಕಿಗೆ ಇಲ್ಲ ಬೇರೆ ಉಪಾಯ!]

4 Year Old Dies After Mom, Kicks Her For Not Brushing Teeth

ಬಾಲಕಿಯನ್ನು ಆಸ್ಪತ್ರೆಗೆ ಕರೆತಂದಾಗ ಸ್ಥಿತಿ ಗಂಭೀರವಾಗಿತ್ತು. ಅಲ್ಲಿ ವೈದ್ಯರು ಬಾಲಕಿಗೆ ಗಾಯಗಳಾಗಿದ್ದನ್ನು, ತಲೆಗೆ ಬಲವಾದ ಹೊಡೆತ ಬಿದ್ದಿದ್ದನ್ನು ಗಮನಿಸಿದ್ದರು. ಆಕೆಯನ್ನು ವಾಷಿಂಗ್ಟನ್ ನಲ್ಲಿರುವ ಮಕ್ಕಳ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಚಿಕಿತ್ಸೆಗೆ ತಕ್ಷಣ ಕರೆದೊಯ್ಯಲಾಯಿತು. ಆ ನಂತರ ಬಾಲಕಿ ಮೃತಪಟ್ಟಿದ್ದಾಳೆ.[ಸಾಮಾಜಿಕ ಜಾಲತಾಣವೇ ಪುಣೆಯ ದಂಪತಿಗೆ ಆಯಿತು ನೇಣಿನ ಕುಣಿಕೆ]

ನೋಹ್ಲೆ ಹಲ್ಲುಜ್ಜಿಲ್ಲ ಎಂಬ ಕಾರಣಕ್ಕೆ ಸಿಟ್ಟಾಗಿ ಹೊಟ್ಟೆಗೆ ಒದ್ದಿದ್ದಾಗೆ ಹರ್ನಾಂಡೆಜ್ ರಿವಾಸ್ ಪೊಲೀಸರ ಬಳಿ ತಪ್ಪೊಪ್ಪೊಕೊಂಡಿದ್ದಾಳೆ ಎಂದು ವರದಿಯಾಗಿದೆ. ಒದ್ದಾಗ ಬಾಲಕಿಯ ತಲೆ ಗೋಡೆಗೆ ಬಡಿಯಿತು ಎಂದು ರಿವಾಸ್ ಹೇಳಿದ್ದಾಳೆ. ಕೆಲ ದಿನಗಳ ಹಿಂದೆ ಮಗಳಿಗೆ ಬೆಲ್ಟ್ ನಿಂದ ಹೊಡೆದಾಗ ಆಕೆ ದೇಹದ ಮೇಲೆ ಗಾಯಗಳಾಗಿದ್ದವು ಎಂದು ಕೂಡ ಹೇಳಿದ್ದಾಳೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A four-year-old girl in the US has died after her mother allegedly kicked her in the stomach for not brushing teeth.
Please Wait while comments are loading...