• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಲಸಿಕೆ 2 ಡೋಸ್‌ಗಳು ಸಾಕಷ್ಟು ಪರಿಣಾಮಕಾರಿ, ಮೂರನೇ ಡೋಸ್ ಅಗತ್ಯವಿಲ್ಲ: ಲ್ಯಾನ್ಸೆಟ್

|
Google Oneindia Kannada News

ಪ್ಯಾರಿಸ್, ಸೆಪ್ಟೆಂಬರ್ 14: ಕೊರೊನಾ ಸೋಂಕನ್ನು ತಡೆಗಟ್ಟಲು ಕೊರೊನಾ ಲಸಿಕೆ ಎರಡು ಡೋಸ್‌ಗಳು ಸಾಕು, ಮೂರನೇ ಡೋಸ್‌ನ ಅಗತ್ಯವಿಲ್ಲ ಎಂದು ಲ್ಯಾನ್ಸೆಟ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಡೆಲ್ಟಾ ಆತಂಕದ ನಡುವೆಯೂ ಸಾಂಕ್ರಾಮಿಕ ರೋಗದ ಈ ಹಂತದಲ್ಲಿ ಸಾಮಾನ್ಯ ಜನಸಂಖ್ಯೆಗೆ ಮೂರನೇ ಡೋಸ್ ಸೂಕ್ತವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ವಿಜ್ಞಾನಿಗಳ ಹೊಸ ವರದಿಯು ತೀರ್ಮಾನಿಸಿದೆ.

ಕೆಲವು ದೇಶಗಳು ಸಾಂಕ್ರಾಮಿಕ ಡೆಲ್ಟಾ ರೂಪಾಂತರದ ಭಯದಿಂದ ಹೆಚ್ಚುವರಿ ಡೋಸ್‌ಗಳನ್ನು ನೀಡಲು ಆರಂಭಿಸಿವೆ. ಇದರಿಂದಾಗಿ ಬಡ ರಾಷ್ಟ್ರಗಳಿಗೆ ಲಸಿಕೆ ಪೂರೈಕೆ ಕೆಂಗಟ್ಟಾಗಿದೆ. ಅಲ್ಲದೆ ಅಲ್ಲಿ ಲಕ್ಷಾಂತರ ಜನರು ತಮ್ಮ ಮೊದಲ ಡೋಸ್ ಅನ್ನು ಸ್ವೀಕರಿಸಿಲ್ಲ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಯು ಮೂರನೇ ಡೋಸ್ ಮೇಲೆ ನಿಷೇಧವನ್ನು ಹೇರಬೇಕಾಯಿತು ಎಂದರು.

ಕೊರೊನಾ ವಿರುದ್ಧ ಹೋರಾಟದಲ್ಲಿ ರಾಮಬಾಣವಾಗಿರುವ ಲಸಿಕೆ ಅಭಿಯಾನವು ವಿಶ್ವಾದ್ಯಂತ ಬಹುತೇಕ ಎಲ್ಲಾ ದೇಶಗಳಲ್ಲಿಯೂ ವೇಗ ಪಡೆದುಕೊಂಡಿದೆ.
ಈ ನಡುವೆ ಇಸ್ರೇಲ್ ನಲ್ಲಿ ಲಸಿಕೆಯ 4ನೇ ಡೋಸ್ ಗೆ ತಯಾರಿ ನಡೆಸಲಾಗ್ತಿದೆ. ಹೌದು ಅಂತಿಮವಾಗಿ ಕರೋನವೈರಸ್ ಲಸಿಕೆಯ ನಾಲ್ಕನೇ ಡೋಸ್ ನೀಡಲು ಇಸ್ರೇಲ್ ಸಿದ್ಧತೆ ನಡೆಸುತ್ತಿದೆ.

ನಾವು ನಾಲ್ಕನೇ ಚುಚ್ಚುಮದ್ದಿಗೆ ಸಿದ್ಧರಾಗಬೇಕು ಎಂದು ಸಲ್ಮಾನ್ ಜರ್ಕಾ ಖಾನ್ ಸಾರ್ವಜನಿಕ ರೇಡಿಯೊಗೆ ತಿಳಿಸಿದ್ದಾರೆ. ಇನ್ನೂ ಲಸಿಕೆಯ ನಾಲ್ಕನೇ ಡೋಸ್ ಯಾವಾಗ ನೀಡುವುದು ಎಂಬುದನ್ನ ಇನ್ನೂವರೆಗೂ ನಿರ್ದಿಷ್ಟವಾಗಿ ನಿರ್ಧಾರ ಮಾಡಲಾಗಿಲ್ಲ. ಹೆಚ್ಚಿನ ಸಾಂಕ್ರಾಮಿಕ ಡೆಲ್ಟಾ ಸ್ಟ್ರೈನ್‌ನಂತಹ COVID-19 ಗೆ ಕಾರಣವಾಗುವ SARS-CoV-2 ವೈರಸ್‌ನ ಹೊಸ ರೂಪಾಂತರಗಳಿಂದ ಉತ್ತಮವಾಗಿ ರಕ್ಷಿಸಲು ಮುಂದಿನ ಬೂಸ್ಟರ್ ಶಾಟ್ ಅನ್ನು ಮಾರ್ಪಡಿಸಬಹುದು ಎಂದು ತಿಳಿಸಿದ್ದಾರೆ.

ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.

ಮತ್ತೊಂದೆಡೆ ಕೆಲಸಗಳಿಲ್ಲದೆ ಅದೆಷ್ಟೋ ಕುಟುಂಬಗಳು ಪರದಾಡಿವೆ.. ಇನ್ನೂ ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ... ಕೂಲಿ ಕಾರ್ಮಿಕರು ಕಷ್ಟ ಪಟ್ಟಿದ್ದಾರೆ ಇದೇ ಪರಿಸ್ಥಿತಿ ಬಾರತದಲ್ಲೂ ಇದೆ ಅದ್ರಲ್ಲೂ ಇಡೀ ವಿಶ್ವಾದ್ಯಂತ ಕೊರೊನಾ 2ನೇ ಹಾವಳಿ ಸಾಕಷ್ಟು ಅವಾಂತರ ಸೃಷ್ಟಿಸಿದೆ.

ಕೊರೊನಾ ಸೋಂಕಿನ ವಿರುದ್ಧ ಸಮರ್ಥ ಹೋರಾಟಕ್ಕೆ ನಾಲ್ಕನೇ ಡೋಸ್ ಲಸಿಕೆ ಅಗತ್ಯಬಿದ್ದರೆ ಸೂಕ್ತ ಲಸಿಕೆ ಪೂರೈಕೆ ಸಂಬಂಧ ಇಸ್ರೇಲ್ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ದೇಶದ ಉನ್ನತ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ಹೆಚ್ಚಳ; ಇಸ್ರೇಲ್‌ನಲ್ಲಿ ನಾಲ್ಕನೇ ಡೋಸ್ ಲಸಿಕೆ ನೀಡಲು ಸಿದ್ಧತೆಕೊರೊನಾ ಹೆಚ್ಚಳ; ಇಸ್ರೇಲ್‌ನಲ್ಲಿ ನಾಲ್ಕನೇ ಡೋಸ್ ಲಸಿಕೆ ನೀಡಲು ಸಿದ್ಧತೆ

ಈ ಬಾರಿಯಂತೆ ಆರು ತಿಂಗಳ ಅವಧಿಯಲ್ಲೇ ಮತ್ತೊಂದು ಡೋಸ್ ಅವಶ್ಯಕತೆ ಬರುವ ಹಾಗೆ ಆಗಬಾರದು. ಮೂರನೇ ಡೋಸ್ ಪರಿಣಾಮ ಹೆಚ್ಚು ಕಾಲ ಉಳಿಯುತ್ತದೆ ಎಂದು ನಾನು ಆಶಿಸುತ್ತೇನೆ' ಎಂದು ಆರೋಗ್ಯ ಸಚಿವಾಲಯದ ವ್ಯವಸ್ಥಾಪನಕ ನಿರ್ದೇಶಕ ನಾಚ್ಮನ್ ಆಶ್ ಹೇಳಿದ್ದಾರೆ.

ಇಸ್ರೇಲ್‌ನಲ್ಲಿ ಮುಖ್ಯವಾಗಿ ಫೈಜರ್ ಮಾಡರ್ನಾ ಲಸಿಕೆಯನ್ನು ನೀಡಲಾಗುತ್ತಿದೆ. ಆಗಸ್ಟ್‌ ತಿಂಗಳಿನಿಂದ ಬೂಸ್ಟರ್ ಲಸಿಕೆಗಳನ್ನು ನೀಡಲು ಆರಂಭಿಸಿದ್ದು, ಇದುವರೆಗೂ 2.8 ಮಿಲಿಯನ್ ಮಂದಿಗೆ ಮೂರನೇ ಡೋಸ್ ಲಸಿಕೆ ನೀಡಿದೆ.

ಲಸಿಕೆ ನೀಡಿದ ಐದು ತಿಂಗಳ ನಂತರ ಲಸಿಕೆಗಳ ಪರಿಣಾಮ ದುರ್ಬಲಗೊಳ್ಳುತ್ತದೆ. ಇದು ಬೂಸ್ಟರ್ ಲಸಿಕೆ ನೀಡುವುದನ್ನು ಅನಿವಾರ್ಯಗೊಳಿಸಿದೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

 ಕೊರೊನಾ ವಿರುದ್ಧ ಲಸಿಕೆಗಳು ಪರಿಣಾಮಕಾರಿ

ಕೊರೊನಾ ವಿರುದ್ಧ ಲಸಿಕೆಗಳು ಪರಿಣಾಮಕಾರಿ

ಕೋವಿಡ್ 19ರ ತೀವ್ರ ರೋಗಲಕ್ಷಣಗಳ ವಿರುದ್ಧ ಲಸಿಕೆಗಳು ಹೆಚ್ಚು ಪರಿಣಾಮಕಾರಿಯಾಗಿರುವುದನ್ನು ಕಂಡುಬಂದಿದೆ. ಡೆಲ್ಟಾ ಸೇರಿದಂತೆ ಎಲ್ಲಾ ಪ್ರಮುಖ ವೈರಸ್ ರೂಪಾಂತರಗಳನ್ನು ತಡೆಗಟ್ಟುವಲ್ಲಿ ಯಶಸ್ಸು ಕಂಡಿದೆ ಎಂದು ಕ್ಲಿನಿಕಲ್ ಪ್ರಯೋಗಗಳನ್ನು ಪರಿಶೀಲಿಸಿದ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

 ಲಸಿಕೆಗಾಗಿ ಕಾಯುತ್ತಿರುವವರಿಗೆ ಆದ್ಯತೆ

ಲಸಿಕೆಗಾಗಿ ಕಾಯುತ್ತಿರುವವರಿಗೆ ಆದ್ಯತೆ

ಪ್ರಪಂಚದಾದ್ಯಂತ ಇನ್ನೂ ಲಸಿಕೆಗಾಗಿ ಕಾಯುತ್ತಿರುವ ಜನರಿಗಾಗಿ ಆದ್ಯತೆ ನೀಡಬೇಕು ಎಂದರು.

ಒಟ್ಟಾರೆಯಾಗಿ, ಪ್ರಸ್ತುತ ಲಭ್ಯವಿರುವ ಅಧ್ಯಯನಗಳು ಗಂಭೀರ ಕಾಯಿಲೆಯ ವಿರುದ್ಧ ಗಣನೀಯವಾಗಿ ಕ್ಷೀಣಿಸುತ್ತಿರುವ ರಕ್ಷಣೆಗೆ ವಿಶ್ವಾಸಾರ್ಹ ಪುರಾವೆಗಳನ್ನು ಒದಗಿಸುವುದಿಲ್ಲ, ಇದು ಲಸಿಕೆಯ ಪ್ರಾಥಮಿಕ ಗುರಿಯಾಗಿದೆ ಎಂದು WHO ನ ಪ್ರಮುಖ ಲೇಖಕ ಅನಾ-ಮರಿಯಾ ಹೆನಾವೊ-ರೆಸ್ಟ್ರೆಪೊ ಹೇಳಿದರು.
 ಕೊರೊನಾ ರೂಪಾಂತರ ತಡೆಯಲಿವೆ ಲಸಿಕೆಗಳು

ಕೊರೊನಾ ರೂಪಾಂತರ ತಡೆಯಲಿವೆ ಲಸಿಕೆಗಳು

"ಲಸಿಕೆಗಳನ್ನು ಬಳಸುವುದರಿಂದ ಅವು ಹೆಚ್ಚು ಒಳ್ಳೆಯದನ್ನು ಮಾಡುತ್ತವೆ. ಅವು ರೂಪಾಂತರಗಳ ಮತ್ತಷ್ಟು ವಿಕಸನವನ್ನು ತಡೆಯುವ ಮೂಲಕ ಸಾಂಕ್ರಾಮಿಕ ರೋಗದ ಅಂತ್ಯವನ್ನು ತ್ವರಿತಗೊಳಿಸಬಹುದು ಎಂದು ಅನಾ-ಮರಿಯಾ ಹೇಳಿದರು.

 ಕೊರೊನಾ ಲಸಿಕೆಯ ಮೂರನೇ ಡೋಸ್

ಕೊರೊನಾ ಲಸಿಕೆಯ ಮೂರನೇ ಡೋಸ್

ಫ್ರಾನ್ಸ್‌ನಂತಹ ದೇಶಗಳು ವಯಸ್ಸಾದವರಿಗೆ ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವ ಜನರಿಗೆ ಮೂರನೇ ಡೋಸ್ ಗಳನ್ನು ವಿತರಿಸಲು ಪ್ರಾರಂಭಿಸಿವೆ. ಇನ್ನು ಒಂದು ಹೆಜ್ಜೆ ಹೋಗಿರುವ ಇಸ್ರೇಲ್ ಎರಡನೇ ಲಸಿಕೆ ಪಡೆದ ಐದು ತಿಂಗಳ ನಂತರ 12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಮೂರನೇ ಡೋಸ್ ನೀಡುತ್ತಿದೆ.

English summary
Vaccines are effective enough at preventing severe cases of Covid-19 that there is no current need for the general population to be given third doses, according to a report in The Lancet published Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X