ಮೌಂಟ್ ಎವರೆಸ್ಟ್ ನಲ್ಲಿ ದಟ್ಟಣೆಯಿಂದ ಮೂವರು ಭಾರತೀಯರು ಸಾವು
ಕಟ್ಮಂಡು, ಮೇ 24 : ಇಬ್ಬರು ಮಹಿಳೆಯರು ಸೇರಿ ಮೂವರು ಭಾರತೀಯ ಪರ್ವತಾರೋಹಿಗಳು ಮೌಂಟ್ ಎವರೆಸ್ಟ್ ನ ಇಳಿಜಾರಿನಲ್ಲಿ ಬಳಲಿಕೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ನೇಪಾಳದ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಈ ವರ್ಷ ಹದಿನೈದು ಮಂದಿ ಸಾವನ್ನಪ್ಪಿದ ಅಥವಾ ನಾಪತ್ತೆಯಾದ ಬಗ್ಗೆ ವರದಿ ಆಗಿದೆ ಎಂದು ತಿಳಿಸಿದ್ದಾರೆ.
ಜಗತ್ತಿನ ಅತಿ ದೊಡ್ಡ ಶಿಖರವನ್ನು ಗುರುವಾರ ನೂರಿಪ್ಪತ್ತಕ್ಕೂ ಹೆಚ್ಚು ಪರ್ವತಾರೋಹಿಗಳು ಮೌಂಟ್ ಎವರೆಸ್ಟ್ ಏರುತ್ತಿದ್ದರು. ಆ ಪೈಕಿ ಕೆಲವರು ಜನ ಜಂಗುಳಿ ಇದ್ದ ಇಳಿಜಾರಿನಲ್ಲಿ ಸಿಲುಕಿಕೊಂಡು, ಬಳಲಿ, ಅತಿಸಾರವಾಗಿ ಆ ನಂತರ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪುಣೆಯ ನಿಹಾಲ್ ಅಶ್ಪಕ್, ಮುಂಬೈನ ಅಂಜಲಿ ಶರದ್ ಕುಲಕರ್ಣಿ ಶಿಖರದಿಂದ ಇಳಿಯುವಾಗ ಸಾವನ್ನಪ್ಪಿದ್ದಾರೆ. ಭಗವಾನ್ ಎಂಬುವವರು ಅತಿಸಾರ, ಬಳಲಿಕೆ ಹಾಗೂ ಸುಸ್ತಿನಿಂದ ಸಾವನ್ನಪ್ಪಿದ್ದಾರೆ. ಪರ್ವತಾರೋಹಿಗಳ ಸಂಖ್ಯೆ ಹೆಚ್ಚಾಗಿ, ದಟ್ಟಣೆ ಸಂಭವಿಸಿ ಇಂಥ ಅನಾಹುತ ಆಗಿದೆ.

ಅಂಜಲಿ ಶರದ್ ಕುಲಕರ್ಣಿ ಅವರು ಕ್ಯಾಂಪ್ ಗೆ ಹಿಂತಿರುಗುವ ವೇಳೆ ನಿಶ್ಶಕ್ತಿಯಿಂದ ಸಾವನ್ನಪ್ಪಿದ್ದಾರೆ. ಒಡಿಶಾದ ಕಲ್ಪನಾ ಆಚಾರ್ಯ ಎಂಬುವವರು ಗುರುವಾರ ಸಾವನ್ನಪ್ಪಿದ್ದಾರೆ. ಆದರೆ ಸಾವಿಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಅಧಿಕಾರಿಗಳು ತಿಳಿಸುವ ಪ್ರಕಾರ, ಪ್ರತಿ ವರ್ಷ ಐದರಿಂದ ಹತ್ತು ಮಂದಿ ಪರ್ವತಾರೋಹಿಗಳು ಸರಾಸರಿಯಾಗಿ ಸಾವನ್ನಪ್ಪುತ್ತಾರೆ.












Click it and Unblock the Notifications