• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಶತ್ರುಗಳಿಗೂ ಬೇಡ: ನರಕದ ಅನುಭವ ಬಿಚ್ಚಿಟ್ಟ ಯುವತಿ

|

ವಾಷಿಂಗ್ಟನ್, ಮಾರ್ಚ್ 31: 22 ವರ್ಷದ ಅಮೆರಿಕದ ಯುವತಿ ತನ್ನ ಕೊರೊನಾ ವೈರಸ್‌ ಅನುಭವವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಆಕೆಯ ಸ್ಥಿತಿ ಹೇಗೆ ಹದಗೆಡುತ್ತಿದೆ, ಕೊರೊನಾ ಸಮಯದಲ್ಲಿ ಆಕೆಯ ಆರೋಗ್ಯ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತಿಳಿಸಿದ್ದಾರೆ.

ವಿಶ್ವವೇ ಕೊರೊನಾ ವೈರಸ್‌ ವಿರುದ್ಧ ಸಮರ ಸಾರಿದೆ. ಕೋಟಿ ಕೋಟಿ ಜನರು ಈ ಮಹಾಮಾರಿಯನ್ನು ಎದುರಿಸುತ್ತಿದ್ದಾರೆ. ಆಮಿ ಶಿರ್ಸಿಲ್ ಎನ್ನುವ 22 ವರ್ಷದ ಅಮೆರಿಕದ ಯುವತಿಗೆ ಸಹ ಕೊರೊನಾ ಪಾಸಿಟಿವ್‌ ಎಂದು ದೃಢವಾಗಿತ್ತು. ಸದ್ಯ, ಈ ಯುವತಿ ಕೊರೊನಾದಿಂದ ಹೊರ ಬರಲು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೊನಾ ವೈರಸ್ ವೇಷಧಾರಿಯಾದ ಬೆಂಗಳೂರು ಟ್ರಾಫಿಕ್ ಪೊಲೀಸ್

''ನನ್ನ ವಯಸ್ಸು 22 ಮತ್ತು ನನಗೆ ಕೋವಿಡ್ -19 ಧನಾತ್ಮಕ ವರದಿ ಬಂದಿದೆ. ನನ್ನ ಅನುಭವದ ಬಗ್ಗೆ ಕೇಳಿದರೆ, ನೀವು ಮನೆಯಲ್ಲೇ ಇರಬಹುದು'' ಎಂದು ಹೇಳುವ ಮೂಲಕ ತಮ್ಮ ಅನುಭವವನ್ನು ಆ ಯುವತಿ ಹೇಳಿಕೊಂಡಿದ್ದಾರೆ. ತನ್ನ ಕೊರೊನಾದಿಂದ ಅನುಭವಿಸುತ್ತಿರುವ ಹಿಂಸೆಯನ್ನು ತಿಳಿಯುವ ಮೂಲಕ ಇತರರು ಮನೆಯಲ್ಲಿಯೇ ಇರೀ ಎಂದು ತನ್ನ ಸ್ಥಿತಿಯನ್ನು ಈ ರೀತಿ ವಿವರಿಸಿದ್ದಾರೆ.

ಕೊರೊನಾದಿಂದ ತಂದೆ ಸಾವು: ಮೃತ್ಯು ದವಡೆಯಿಂದ ಪಾರಾದ ಮಗಳು

ಜ್ವರ, ಕೆಮ್ಮು, ಶೀತ

ಜ್ವರ, ಕೆಮ್ಮು, ಶೀತ

''ಯುರೋಪಿನ ರಜಾ ದಿನದಿಂದ ನಾನು ಹಿಂದಿರುಗಿದೆ. ಆ ನಂತರ ಮೊದಲ ಎರಡು ದಿನದ ರೋಗಲಕ್ಷಣಗಳು ನಿರ್ವಹಿಸಬಲ್ಲದಾಗಿತ್ತು. ನನಗೆ ಜ್ವರ, ಕೆಮ್ಮು, ಶೀತ, ತಲೆನೋವು ಇತ್ತು. ಮೂಗು ಸೋರುತ್ತಿತು. ನಾನು ಯುರೋಪಿಗೆ ಹೋಗಿದ್ದರಿಂದ, ನನ್ನ ಎರಡನೇ ದಿನದ ರೋಗ ಲಕ್ಷಣಗಳನ್ನು ಪರೀಕ್ಷಿಸಲು ನನಗೆ ಅವಕಾಶ ಮಾಡಿಕೊಟ್ಟರು." ಎಂದು ಆಮಿ ಶಿರ್ಸಿಲ್ ಹೇಳಿದ್ದಾರೆ.

ನನಗೆ ನಿದ್ರೆ ಬರಲಿಲ್ಲ

ನನಗೆ ನಿದ್ರೆ ಬರಲಿಲ್ಲ

''ದಿನದಿಂದ ದಿನಕ್ಕೆ ಅನಾರೋಗ್ಯ ಹೆಚ್ಚಾಯಿತು. ಮೂರನೇ ದಿನದ ಹೊತ್ತಿಗೆ, ಕಡಿಮೆ ಆಗಲಿಲ್ಲ. ಜ್ವರ, ಶೀತದ ಜೊತೆಗೆ, ನಾನು ನಿರಂತರವಾಗಿ ವಾಂತಿ ಮಾಡುತ್ತಿದ್ದೆ. ನನಗೆ ನಿದ್ರೆ ಬರಲಿಲ್ಲ, ನನಗೆ ಸರಿಯಾಗಿ ತಿನ್ನಲು ಸಾಧ್ಯವಾಗಲಿಲ್ಲ. ಈ ಸಮಯದಲ್ಲಿ, ನನ್ನ ಪರೀಕ್ಷಾ ಫಲಿತಾಂಶಗಳನ್ನು ನಾನು ಇನ್ನೂ ಪಡೆದಿರಲಿಲ್ಲ. ಆ ನಂತರ ನಾಲ್ಕನೇ ದಿನ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂತು.'' - ಆಮಿ ಶಿರ್ಸಿಲ್

ಸಾಯುತ್ತೇನೆ ಎಂಬ ಭಯ ಬಂತು

ಸಾಯುತ್ತೇನೆ ಎಂಬ ಭಯ ಬಂತು

''ನನಗೆ ಉಸಿರಾಟದ ತೊಂದರೆ ಉಂಟಾಯಿತು. ಶ್ವಾಸಕೋಶವು ಆಳವಿಲ್ಲದಂತಿದೆ ಮತ್ತು ನನಗೆ ಸರಿಯಾದ ಉಸಿರು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಇದು ಭಯಾನಕವಾಗಿದೆ ಎನಿಸಿತು. ನಾನು ದುರ್ಬಲವಾಗಿದ್ದೆ. ಜ್ವರ ಹೆಚ್ಚಾಗುತ್ತಿತ್ತು. 102 ಡಿಗ್ರಿ ಜ್ವರ ಏರಿತು. ಐದನೇ ದಿನ ಆರೋಗ್ಯ ಇನ್ನಷ್ಟು ಹದಗೆಟ್ಟಿತು. ನನ್ನ ಇಡೀ ಜೀವನದಲ್ಲಿ ನಾನು ಅನಾರೋಗ್ಯಕ್ಕೆ ಒಳಗಾಗಲಿಲ್ಲ. ಆದರೆ, ಈಗ ನಾನು ಸಾಯುತ್ತೇನೆ ಎಂದು ಭಯ ಬಂತು.''- ಆಮಿ ಶಿರ್ಸಿಲ್

ನಡೆಯಲು ಸಹ ಆಗುತ್ತಿರಲಿಲ್ಲ

ನಡೆಯಲು ಸಹ ಆಗುತ್ತಿರಲಿಲ್ಲ

''6ನೇ ದಿನದ ಹೊತ್ತಿಗೆ, ನಾನು ತುಂಬಾ ಸುಸ್ತಾಗಿದ್ದೆ. ನನಗೆ ನಡೆಯಲು ಸಹ ಸಾಧ್ಯವಾಗಲಿಲ್ಲ. ನಾನು ವಾಂತಿ ಮಾಡಲು ಬಾತ್‌ರೂಮ್‌ಗೆ ತೆವಳುತ್ತಿದೆ. ಆಗ 911 ಗೆ ಕರೆ ಮಾಡಿದೆ. ಅವರು ನನ್ನನ್ನು ಆಂಬುಲೆನ್ಸ್ ನಲ್ಲಿ ತುರ್ತು ವಾರ್ಡ್‌ಗೆ ಕರೆದುಕೊಂಡು ಹೋದರು. ಏಳನೇ ದಿನದಲ್ಲಿ ಇನ್ನು ಸುಸ್ತು ಹೆಚ್ಚಾಯ್ತು. ನನ್ನ ಜೀವನದಲ್ಲಿಯೇ ನಾನು ಅಷ್ಟೊಂದು ಆಯಾಸಗೊಂಡಿರಲಿಲ್ಲ .''- ಆಮಿ ಶಿರ್ಸಿಲ್

ಶತ್ರುಗಳಿಗೂ ಬೇಡ

ಶತ್ರುಗಳಿಗೂ ಬೇಡ

''ನಾನು 9 ದಿನಗಳವರೆಗೆ ತಿನ್ನಲು ಸಾಧ್ಯವಾಗಲಿಲ್ಲ. ನಾನು ಪರಿಸ್ಥಿತಿ ಸಂಪೂರ್ಣವಾಗಿ ಶೋಚನೀಯವಾಗಿತ್ತು. ಈಗ ನಾನು 12ನೇ ದಿನವನ್ನು ಕಳೆಯುತ್ತಿದ್ದೇನೆ. ಈಗಲೂ ನನಗೆ ರೋಗದ ಲಕ್ಷಣಗಳು ಇವೆ. ಕೊರೊನಾ ರೋಗ ಅಮಾನವೀಯವಾಗಿದೆ. ನನ್ನ ಶತ್ರುಗಳಿಗೂ ಈ ಕಾಯಿಲೆ ಬರುವುದು ಬೇಡ.'' ಎಂದು ತನ್ನ ಕೊರೊನಾ ರೋಗದ ಅನುಭವದಿಂದ ಜನರಿಗೆ ಎಚ್ಚರವಾಗಿ ಇರಲು ತಿಳಿಸಿದ್ದಾರೆ.

English summary
Coronavirus In America: Amy Shircel, A 22 year old america girl shares her coronavirus experience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X