ಸೊಮಾಲಿಯಾದಲ್ಲಿ ಕಾರ್ ಬಾಂಬ್ ಸ್ಫೋಟ: 18 ಬಲಿ
ಮೊಗಾದಿಶು, ಫೆಬ್ರವರಿ 24: ಸೊಮಾಲಿಯಾ ದೇಶದ ಮೊಗಾದಿಶು ಎಂಬಲ್ಲಿ ನಡೆದ ಕಾರ್ ಬಾಂಬ್ ದಾಳಿಯಲ್ಲಿ 18 ಜನ ಮೃತರಾಗಿದ್ದು, 20 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಇಲ್ಲಿನ ಪ್ರೆಸಿಡೆನ್ಶಿಯಲ್ ಪ್ಯಾಲೆಸ್ ಮತ್ತು ಇಲ್ಲಿನ ಪ್ರಖ್ಯಾತ ಹೊಟೇಲ್ ವೊಂದರ ಬಳಿ ಈ ಆತ್ಮಹತ್ಯಾದಾಳಿ ಸಂಭವಿಸಿದೆ. ಇಲ್ಲಿನ ಸರ್ಕಾರ ಸ್ಫೋಟಕ್ಕೂ ಒಂದು ದಿನ ಹಿಂದಷ್ಟೇ ಸಂಭಾವ್ಯ ಭಯೋತ್ಪಾದಕ ದಾಳಿಯ ಎಚ್ಚರಿಕೆ ನೀಡಿತ್ತು.

ಅಲ್ ಶಬಾಬ್ ಎಂಬ ಭಯೋತ್ಪಾದಕ ಸಂಘಟನೆ ಸ್ಫೋಟದ ಹೊಣೆ ಹೊತ್ತಿದ್ದು, ಇತ್ತೀಚೆಗಷ್ಟೇ ಈ ಉಗ್ರ ಸಂಘಟನೆ ಸೊಮಾಲಿಯಾ ಮತ್ತು ಪೂರ್ವ ಆಫ್ರಿಕಾದ ಕೆಲವೆಡೆ ಬಾಂಬ್ ಸ್ಫೋಟ ನಡೆಸಿದೆ.
ಕಳೆದ ಅಕ್ಟೋಬರ್ 14 ಮತ್ತು 28 ರಂದು ಮೊಗಾದಿಶುವಿನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 350 ಕ್ಕೂ ಹೆಚ್ಚು ಜನ ಅಸುನೀಗಿದ್ದರು.












Click it and Unblock the Notifications