ಕೈದಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಕ್ಕಾಗಿ ಒಂದೇ ಜೈಲಿನ 18 ಮಹಿಳಾ ಅಧಿಕಾರಿಗಳು ವಜಾ- ಇಲ್ಲಿದೆ ಸಂಪೂರ್ಣ ಮಾಹಿತಿ
England, Londen, Sex, Prison, Breaking News, Great Britain, International News, ಇಂಗ್ಲೆಂಡ್, ಲಂಡನ್, ಸೆಕ್ಸ್, ಜೈಲು, ಬ್ರೇಕಿಂಗ್ ನ್ಯೂಸ್, ಗ್ರೇಟ್ ಬ್ರಿಟನ್, ಇಂಟರ್ನ್ಯಾಷನಲ್ ನ್ಯೂಸ್
ಕೈದಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಹದಿನೆಂಟು ಮಹಿಳಾ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಜೈಲಿನೊಳಗೆ ನಡೆದಿರುವ ಈ ಅನುಚಿತ ಸಂಬಂಧಗಳನ್ನು ಡೈಲಿ ಮಿರರ್ ಬಹಿರಂಗ ಪಡಿಸಿದೆ. ಇದು ಬ್ರಿಟನ್ ದೇಶದ ವ್ರೆಕ್ಸ್‌ಹ್ಯಾಮ್‌ನ ಎಚ್‌ಎಂಪಿ ಬರ್ವಿನ್ ಜೈಲಿನಲ್ಲಿ ನಡೆದಿದೆ. ಖಾಸಗಿಯಾಗಿ ನಡೆಸುವ ಜೈಲಿನಲ್ಲಿ ಆರು ವರ್ಷಗಳ ಅವಧಿಯಲ್ಲಿ ನಡೆದ ಲೈಂಗಿಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಮೂವರು ಮಹಿಳಾ ಅಧಿಕಾರಿಗಳನ್ನು ನ್ಯಾಯಾಲಯವು ವಿಚಾರಣೆಗೆ ಒಳಪಡಿಸಿತ್ತು
ಕಾವಲುಗಾರರಲ್ಲಿ ಒಬ್ಬರಾದ ಜೆನ್ನಿಫರ್ ಗವಾನ್, ದರೋಡೆಕೋರ ಅಲೆಕ್ಸ್ ಕಾಕ್ಸನ್‌ಗಾಗಿ ಜೈಲಿಗೆ ಫೋನ್ ಕಳ್ಳಸಾಗಣೆ ಮಾಡಲು 150 ಪೌಂಡ್ ಲಂಚ ಪಡೆದಿದ್ದಾರೆ. ಬಳಿಕ ವಾಟ್ಸಾಪ್‌ನಲ್ಲಿ ಪರಸ್ಪರ ಚೆಲ್ಲಾಟದ ಸಂದೇಶಗಳನ್ನು ಕಳುಹಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

ಜೆನ್ನಿಫರ್ ಗವಾನ್ ಅವರು ದುರ್ವರ್ತನೆ ಕುರಿತು ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಆಕೆ ಎಂಟು ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಆಕೆಯ ಸಹೋದ್ಯೋಗಿಗಳಾದ ಎಮಿಲಿ ವ್ಯಾಟ್ಸನ್ ಮತ್ತು ಆಯ್ಶಿಯಾ ಗನ್ ಕೂಡ ಕೈದಿಗಳೊಂದಿಗಿನ ಅಕ್ರಮ ಸಂಬಂಧಗಳಿಗಾಗಿ ಜೈಲು ಪಾಲಾಗಿದ್ದಾರೆ.
ವ್ಯಾಟ್ಸನ್ ಮಾದಕವಸ್ತು ವ್ಯಾಪಾರಿ ಜಾನ್ ಮೆಕ್‌ಗೀ ಅವರೊಂದಿಗೆ ಲೈಂಗಿಕ ಸಂಬಂಧದಲ್ಲಿ ತೊಡಗಿದ್ದಾರೆ ಎಂದು ಸಾಬೀತಾಗಿದೆ. ಮೆಕ್‌ಗೀ ಎಂಬಾತ ಅಪಾಯಕಾರಿ ಡ್ರೈವಿಂಗ್‌ನಿಂದ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದ್ದಾನೆ. ಆತನಿಗೆ ಎಂಟು ವರ್ಷಗಳ ಕಾಲ ಜೈಲು ಶಿಕ್ಷೆಯಾಗಿದೆ.

ಸಶಸ್ತ್ರ ದರೋಡೆ ಹಿನ್ನೆಲೆಯಲ್ಲಿ ಜೈಲಿನಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಖುರಾಮ್ ರಜಾಕ್ ಜೊತೆ ಗನ್ ಸಂಬಂಧ ಹೊಂದಿದ್ದರು. ಆಕೆ 'ಹೆಚ್ಚು ನಗ್ನ ಹಾಗೂ ಉನ್ಮಾದ'ದ ಫೋಟೋಗಳು ಮತ್ತು ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.
ಪ್ರಿಸನ್ ಆಫೀಸರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಮಾರ್ಕ್ ಫೇರ್‌ಹರ್ಸ್ಟ್ ಮಾತನಾಡಿ,'ವೃತ್ತಿಪರತೆ ಇಲ್ಲದ ಮಹಿಳೆಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ನೇಮಕಾತಿಯಾಗುತ್ತಿರುವ ಸಿಬ್ಬಂದಿಗೆ ಮುಖಾಮುಖಿ ಸಂದರ್ಶನಗಳಿಲ್ಲ. ಎಲ್ಲವನ್ನೂ ಜೂಮ್ ಮೀಟಿಂಗ್‌ನಲ್ಲಿ ಮಾಡಲಾಗುತ್ತದೆ' ಎಂದು ಆರೋಪಿಸಿದ್ದಾರೆ.
'ಈ ಉದ್ಯೋಗಗಳನ್ನು ಪಡೆಯುವ ಬಹಳಷ್ಟು ಜನರು ಸಾಕಷ್ಟು ಜೀವನ ಅನುಭವವನ್ನು ಹೊಂದಿಲ್ಲ' ಎಂದೂ ತಿಳಿಸಿದ್ದಾರೆ.
ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ, 2019 ರಿಂದ 31 ಮಹಿಳಾ ಜೈಲು ಅಧಿಕಾರಿಗಳನ್ನು ಕೈದಿಗಳೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ವಜಾ ಮಾಡಲಾಗಿದೆ. ಈ ಅಂಕಿಅಂಶಗಳು ನ್ಯಾಯ ಸಚಿವಾಲಯದಿಂದ ಹೊರಬಂದಿವೆ.
ಒಂದು ಪ್ರಕರಣದಲ್ಲಿ, ಜೈಲು ಅಧಿಕಾರಿಯೊಬ್ಬರು ಕೈದಿಯಿಂದ ಮಗುವೊಂದನ್ನೂ ಪಡೆದಿದ್ದಾರೆ.
ಎಚ್‌ಎಂಪಿ ಬರ್ವಿನ್ ಯುಕೆಯ ಅತಿದೊಡ್ಡ ಜೈಲು, ಆದರೆ ಅಲ್ಲಿ ಉತ್ತಮ ಗುಣಮಟ್ಟದ ವಸತಿ ಸೌಕರ್ಯಗಳ ಕಾರಣದಿಂದಾಗಿ ಇದು ದೇಶದ 'ಕುಶಿಯೆಸ್ಟ್' ಜೈಲು ಎಂದು ಬ್ರಾಂಡ್ ಮಾಡಲಾಗಿದೆ.
ಇಲ್ಲಿ ಕೈದಿಗಳಿಗೆ ಟಿವಿಗಳು, ಲ್ಯಾಪ್‌ಟಾಪ್‌ಗಳು ಮತ್ತು ಫೋನ್‌ಗಳಿಗೂ ಪ್ರವೇಶವಿದೆ.
ಕಾರಾಗೃಹ ಸೇವೆಯ ವಕ್ತಾರ ಮಾತನಾಡಿ, 'ಬಹುಪಾಲು ಸಿಬ್ಬಂದಿ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕರಾಗಿದ್ದಾರೆ. ಸ್ಪಲ್ಪ ಜನರಿಂದಲಷ್ಟೇ ದುರ್ವತನೆಗಳು ನಡೆದಿವೆ' ಎಂದು ಹೇಳಿದ್ದಾರೆ.












Click it and Unblock the Notifications