ಮನಿಲಾ ಬಂದರಿನ ಪಕ್ಕದಲ್ಲಿನ ಮನೆಗಳಿಗೆ ಬೆಂಕಿ, 15 ಸಾವಿರ ನಿರಾಶ್ರಿತರು

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮನಿಲಾ, ಫೆಬ್ರವರಿ 8: ಫಿಲಿಪೈನ್ಸ್ ನ ರಾಜಧಾನಿ ಮನಿಲಾದ ಬಂದರಿನ ಪಕ್ಕಕ್ಕೆ ಇರುವ ಶ್ಯಾಂಟಿಟೌನ್ ನಲ್ಲಿ ಮಂಗಳವಾರ ಹೊತ್ತಿಕೊಂಡ ಬೆಂಕಿಗೆ ಹದಿನೈದು ಸಾವಿರ ಮಂದಿ ಮನೆ ಕಳೆದುಕೊಂಡಿದ್ದಾರೆ. ಅಗ್ನಿಶಾಮಕ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ಪರೋಲಾ ಕಾಂಪೌಂಡ್ ನಲ್ಲಿದ್ದ ಒಂದು ಸಾವಿರ ಮನೆಗಳಿಗೆ ಬೆಂಕಿಯಿಂದ ಹಾನಿಯಾಗಿದೆ.

ಅಗ್ನಿ ಅವಘಡದಲ್ಲಿ ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮಂಗಳವಾರ ರಾತ್ರಿ ಕಾಣಿಸಿಕೊಂಡ ಬೆಂಕಿ ಶೀಘ್ರವಾಗಿ ಹಬ್ಬಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬ ಬಗ್ಗೆ ತನಿಖೆ ಪ್ರಗತಿಯಲ್ಲಿದೆ.

ಅಲ್ಲಿನ ಸಮಾಜ ಕಲ್ಯಾಣ ಅಧಿಕಾರಿ ರೆಜಿನಾ ಜೇನ್ ಮಾತಾ ಮಾತನಾಡಿ, ಮೂರು ನಿರಾಶ್ರಿತರ ಕೇಂದ್ರ ತೆರೆಯಲಾಗಿದೆ. ಈ ಅಗ್ನಿ ಅವಘಡದಲ್ಲಿ ಮನೆ ಕಳೆದುಕೊಂಡ ಮೂರು ಸಾವಿರ ಕುಟುಂಬಗಳಿಗೆ ಆಹಾರ ಮತ್ತು ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದ್ದಾರೆ.[ಫಿಲಿಪೈನ್ಸ್ ಮಾರುಕಟ್ಟೆಯಲ್ಲಿ ಸ್ಫೋಟ, 12ಕ್ಕೂ ಹೆಚ್ಚು ಸಾವು]

15,000 residents lose homes in Manila shantytown fire

ಹಲವು ಮಂದಿ ಸಮೀಪದ ರಸ್ತೆಯಲ್ಲೇ ತಮ್ಮ ವಸ್ತುಗಳ ಜೊತೆಗೆ ವಾಸ್ತವ್ಯ ಹೂಡಿದ್ದಾರೆ. ಅದರಲ್ಲಿ ಬಟ್ಟೆ, ವಾಷಿಂಗ್ ಮಷೀನ್ ಹಾಗೂ ಎಲೆಕ್ಟ್ರಿಕ್ ಫ್ಯಾನ್ ಕೂಡ ಇದೆ. ಅವಘಡದಲ್ಲಿ ಏಳು ಮಂದಿಗೆ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
15,000 residents of a shantytown beside Manila’s port have lost their homes in a fire that raged overnight before being put out on Wednesday morning.
Please Wait while comments are loading...