Warren Buffett: ಒಂದಲ್ಲ ಎರಡಲ್ಲ 9,300 ಕೋಟಿ ರೂ. ದೇಣಿಗೆ ಕೊಟ್ಟ ಅಗರ್ಭ ಶ್ರೀಮಂತ, ಯಾಕೆ ಗೊತ್ತಾ ?
Warren Buffett: ವಿಶ್ವದ ಅಗರ್ಭ ಶ್ರೀಮಂತ ಹಾಗೂ ಬರ್ಕ್‌ಷೈರ್ ಹ್ಯಾಥ್‌ವೇ ಕಂಪನಿಯ ಷೇರುದಾರರಾದ ವಾರೆನ್ ಬಫೆಟ್ ಅವರು ಒಂದಲ್ಲ.. ಎರಡಲ್ಲ ಬರೋಬ್ಬರಿ 9,300 ಕೋಟಿ ರೂಪಾಯಿಗೂ ಹೆಚ್ಚು (1.1 ಬಿಲಿಯನ್ - ಶತಕೋಟಿ ಡಾಲರ್) ದೇಣಿಗೆ ಕೊಟ್ಟಿದ್ದಾರೆ. ಬಫೆಟ್ ಸಾವಿನ ನಂತರ ಆಸ್ತಿ ಹಾಗೂ ಅವರಿಗೆ ಇರುವ ಸಂಪತ್ತು ಹೇಗೆ ಹಂಚಿಕೆಯಾಗಬೇಕು ಹಾಗೂ ಯಾರಿಗೆ ಕೋಟ್ಯಾಂತರ ರೂಪಾಯಿ ಸೇರಬೇಕು ಎನ್ನುವ ಬಗ್ಗೆ ಪತ್ರ ಬರೆದಿದ್ದಾರೆ. 94 ವರ್ಷ ವಯಸ್ಸಿನ ವಾರೆನ್ ಬಫೆಟ್ ಅವರ ಕಾಲವಾದ (ಸತ್ತ ಮೇಲೆ) ಆಸ್ತಿ ಯಾವ ರೀತಿ ಅವರ ಕುಟುಂಬದಲ್ಲಿ ಹಂಚಿಕೆಯಾಗಬೇಕು ಹಾಗೂ ಫ್ಯಾಮಿಲಿ ಫೌಂಡೇಷನ್‌ಗೆ ನೀಡಬೇಕು ಎಂದು ಈಗಲೇ ತೀರ್ಮಾನ ಮಾಡಿದ್ದಾರೆ. ಬಲಗೈಯಿಂದ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುವ ಕನ್ನಡ ನಾಣ್ಣುಡಿಯಂತೆ ಬದುಕಿದ್ದ ವಾರೆನ್ ಬಫೆಟ್..
ನಾನು ಸಾಯುವುದಕ್ಕೂ ಮೊದಲು ಈ ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಪಣ ತೊಟ್ಟಿದ್ದ ವಾರೆನ್ ಬಫೆಟ್ ಅವರು ಅವರ ಜೀವಮಾನದ ಪೂರ್ತಿ ಕೋಟ್ಯಾಂತರ ರೂಪಾಯಿಯನ್ನು ದೇಣಿಗೆ ಕೊಟ್ಟಿದ್ದಾರೆ. ಬಫೆಟ್ ನಿಧನದ ನಂತರ ಕೋಟ್ಯಾಂತರ ರೂಪಾಯಿ ಹಣ ಹೇಗೆ ಬಳಸಬೇಕು ಎಂದು ಈಗಲೇ ಅವರು ಮಾತನಾಡಿದ್ದಾರೆ. ಕೊನೆಯ ಹಂತದಲ್ಲೂ ಅವರು ಬರೋಬ್ಬರಿ 1.1 ಬಿಲಿಯನ್ ಮೊತ್ತವನ್ನು ವಿವಿಧ ಫೌಂಡೇಷನ್‌ಗಳಿಗೆ (ಸಮಾಜ ಸೇವೆ ಮಾಡುವ ಅವರ ಕುಟುಂಬ ಸಂಸ್ಥೆಗಳಿಗೆ) ಕೋಟ್ಯಾಂತರ ರೂಪಾಯಿ ದುಡ್ಡು ಕೊಟ್ಟಿದ್ದಾರೆ. ಬಫೆಟ್ ಅವರು ಅವರ ಜೀವಮಾನದಲ್ಲಿ ಬರೋಬ್ಬರಿ 150 ಬಿಲಿಯನ್ ಮೊತ್ತವನ್ನು ದೇಣಿಗೆಯಾಗಿಯೇ ನೀಡಿದ್ದಾರೆ. ಇದು ಭಾರತದ ರೂಪಾಯಿ ಬೆಲೆಯಲ್ಲಿ ಕೋಟ್ಯಾಂತರ ರೂಪಾಯಿಗೆ ಸಮನಾಗಿದೆ.

ವಿಶ್ವದಲ್ಲಿ ಹಲವು ಶ್ರೀಮಂತರು ಇದ್ದಾರೆ. ಆದರೆ, ಕೆಲವೇ ಕೆಲವರು ಮಾತ್ರ ಬಡವರಿಗೆ ಹಾಗೂ ಸಮಾಜಕ್ಕೆ ಕೊಡಬೇಕು ಅಂತ ಆಸೆ ಪಡ್ತಾರೆ. ಅಂತ ವಿರಳಾತಿ ವಿರಳ ಶ್ರೀಮಂತರಲ್ಲಿ ಬಫೆಟ್ ಅವರೂ ಒಬ್ಬರಾಗಿದ್ದಾರೆ. ಅವರ ಸಾವಿನ ನಂತರ ಹಣ ಹೇಗೆ ವೆಚ್ಚವಾಗಬೇಕು ಎಂದು ಅವರು ಬದುಕಿದ್ದಾಗಲೇ ಗಟ್ಟಿ ನಿರ್ಧಾರ ಪ್ರಕಟಿಸಿದ್ದಾರೆ.
ಬಫೆಟ್‌ರಿಂದ ನಾಲ್ಕು ಫೌಂಡೇಶನ್‌ಗೆ ದೇಣಿಗೆ
ಇನ್ನು ಬಫೆಟ್ ಅವರು ಅವರ ಪ್ರಮುಖ ಬರ್ಕ್‌ಷೈರ್ ಹ್ಯಾಥ್‌ವೇಯ 1,600 ಕ್ಲಾಸ್ ಎ ಷೇರುಗಳನ್ನು 2,400,000 ಕ್ಲಾಸ್ ಬಿ ಷೇರುಗಳಾನ್ನಾಗಿ ಬದಲಾಯಿಸುವುದಾಗಿ ಹೇಳಿದ್ದಾರೆ. ಅಂದರೆ ಮುಂದಿನ ದಿನಗಳಲ್ಲಿ ಕೋಟ್ಯಾಂತರ ರೂಪಾಯಿ ಹಣವು ನಾಲ್ಕು ಪ್ರಮುಖ ಫೌಂಡೇಷನ್‌ಗಳಿಗೆ ವಿಭಜನೆಯಾಗಲಿದೆ. ಅವರ ಕುಟುಂಬದ ಸುಸಾನ್ ಥಾಂಪ್ಸನ್ ಬಫೆಟ್ ಫೌಂಡೇಶನ್, ಶೆರ್ವುಡ್ ಫೌಂಡೇಶನ್, ಹೊವಾರ್ಡ್ ಬಫೆಟ್ ಫೌಂಡೇಶನ್ ಹಾಗೂ ನೊವೊ ಫೌಂಡೇಶನ್‌ಗಳಿಗೆ ಷೇರು (ಹಣ) ಹಂಚಿಕೆ ಮಾಡುವುದಕ್ಕೆ ನಿರ್ಧರಿಸಲಾಗಿದೆ.

ಶೇ 57% ದೇಣಿಗೆ: ನನ್ನ ಸಂಪತ್ತಿನ ಮೊತ್ತವನ್ನು ನಾನು ದೇಣಿಗೆ ನೀಡುತ್ತೇನೆ ಎಂದು ಅವರು 2006ರಲ್ಲೇ ಹೇಳಿದ್ದರು. ಈ ಮಾತಿಗೆ ಬದ್ಧರಾಗಿ ಅವರು ಕಳೆದ 18 ವರ್ಷಗಳ ಅವಧಿಯಲ್ಲಿ ಕೋಟ್ಯಾಂತರ ರೂಪಾಯಿ ಮೊತ್ತವನ್ನು ವಿವಿಧ ಸಮಾಜ ಸೇವೆ ಮಾಡುವ ಹಾಗೂ ಜನಪರ ಫೌಂಡೇಷನ್‌ಗಳಿಗೆ ದೇಣಿಗೆಯಾಗಿ ಕೊಟ್ಟಿದ್ದಾರೆ. ಷೇರುಗಳನ್ನು ಹಂಚಿಕೆ ಮಾಡುವ ಮೂಲಕ ಫೌಂಡೇಷನ್‌ಗಳಿಗೆ ನೆರವಾಗಿದ್ದು, ಲಕ್ಷಾಂತರ ಜನ ಹೊಸ ಬದುಕು ಕಟ್ಟಿಕೊಳ್ಳುವುದಕ್ಕೆ ದಾರಿ ದೀಪವಾಗಿದ್ದಾರೆ.
ಬಫೆಟ್ ಜೀವಮಾನದಲ್ಲಿ ಜಗತ್ತಿನ ಯಾವುದೇ ಶ್ರೀಮಂತ ಮಾಡದ ಸಾಧನೆಯನ್ನು ಮಾಡಿದ್ದಾರೆ ಎಂದೇ ಹೇಳಬಹುದು ಅವರು ಇದೀಗ ಅವರ ಸಂಪತ್ತಿನ ಬರೋಬ್ಬರಿ ಶೇ 57% ಮೊತ್ತವನ್ನು ದೇಣಿಗೆಯಾಗಿಯೇ ಕೊಟ್ಟಿದ್ದಾರೆ. ತನ್ನ ಉಳಿದ ಸಂಪತ್ತಿನ ಹಂಚಿಕೆಯ ಬಗ್ಗೆ ಅವರು ಈಗಲೇ ಕೆಲವೊಂದು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಬದುಕಿರುವಾಗಲೇ ಕೆಲವು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿರುವುದು ವರದಿಯಾಗಿದೆ.
ಆಸ್ತಿ ಹಂಚಿಕೆ ಸುದೀರ್ಘ ಪತ್ರ: ಆಸ್ತಿ ಹಂಚಿಗೆ ಸಂಬಂಧಿಸಿದಂತೆ ಬಫೆಟ್ ಅವರು ಸುದೀರ್ಘ ಪತ್ರವನ್ನು ಬರೆದಿದ್ದು, ಅದರಲ್ಲಿ ಶ್ರೀಮಂತರಿಗೆ ಕೆಲವೊಂದು ಸಲಹೆಗಳನ್ನು ಕೊಟ್ಟಿದ್ದಾರೆ. ನಿಮ್ಮ ಆಸ್ತಿಯನ್ನು ನೀವು ಇರುವಾಗಲೇ ನಿಮ್ಮ ಮಕ್ಕಳೊಂದಿಗೆ ಕುಳಿತು ಮುಂದಿನ ದಿನಗಳಲ್ಲಿ ಅದನ್ನು ಹೇಗೆ ಬಳಸಿಕೊಳ್ಳಬೇಕು ಅಥವಾ ನಿಮ್ಮ ಇಚ್ಛೆ ಏನು ಎನ್ನುವ ಬಗ್ಗೆ ಮಕ್ಕಳೊಂದಿಗೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳು ಎಂದು ಸಲಹೆ ನೀಡಿದ್ದಾರೆ.












Click it and Unblock the Notifications