ಪಾಕ್ ಪ್ರವಾಹಗಳಿಗೆ 1,000 ಸಾವು: ಹೆಲಿಕಾಪ್ಟರ್ ಲ್ಯಾಂಡಿಂಗ್‌ಗೆ ಸಿಗದ ಒಣ ಪ್ರದೇಶ
ಮೂರು ದಶಕಗಳಿಂದ ಈ ಬಾರಿ ಅತಿ ಹೆಚ್ಚು ಮಳೆ ಹಾನಿಯನ್ನು ಪಾಕಿಸ್ತಾನ ಅನುಭವಿಸಿದೆ. ಪಾಕಿಸ್ತಾನದಲ್ಲಿ ಪ್ರವಾಹ ಉಂಟಾಗಿ ಜೂನ್‌ನಿಂದ ಈವರೆಗೆ 1,000 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 10 ಶತಕೋಟಿಗೂ ಹೆಚ್ಚು ಮೌಲ್ಯದ ಹಾನಿ ಉಂಟಾಗಿದೆ. ಹವಾಮಾನ ವೈಪರೀತ್ಯವನ್ನು "ಹವಾಮಾನ ದುರಂತ" ಎಂದು ಪಾಕಿಸ್ತಾನದ ಹವಾಮಾನ ಬದಲಾವಣೆಯ ಸಚಿವ ಶೆರ್ರಿ ರೆಹಮಾನ್ ತಮ್ಮ ಟ್ವಿಟರ್ ಫೀಡ್‌ನಲ್ಲಿ ಪೋಸ್ಟ್ ಮಾಡಿದ ಸುದ್ದಿ ಸಂದರ್ಶನದಲ್ಲಿ ತಿಳಿಸಿದ್ದಾರೆ.
"ಅನೇಕ ಜಿಲ್ಲೆಗಳು ಸಾಗರದ ಭಾಗವಾಗಿ ಕಾಣಲಾರಂಭಿಸಿವೆ. ನಮ್ಮ ಹೆಲಿಕಾಪ್ಟರ್ ಒಣ ಭೂಮಿಯನ್ನು ಕಂಡುಹಿಡಿಯುತ್ತಿಲ್ಲ" ಎಂದು ರೆಹಮಾನ್ ಜರ್ಮನ್ ತಿಳಿಸಿದ್ದಾರೆ. ವಿಶ್ವದ ಐದನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪಾಕಿಸ್ತಾನದಾದ್ಯಂತ 30 ಮಿಲಿಯನ್‌ಗಿಂತಲೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ನೌಕಾಪಡೆಯನ್ನು ಮೊದಲ ಬಾರಿಗೆ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಅವರು ಮಳೆ ಪ್ರವಾಹ ವಿವಿಧ ಕ್ಷೇತ್ರಗಳ ಮೇಲೆ ಎಷ್ಟು ಕೆಟ್ಟದಾಗಿ ಪರಿಣಾಮ ಬೀರಿವೆ ಎಂಬುದರ ಕುರಿತು ತಕ್ಷಣದ ಮೌಲ್ಯಮಾಪನವಿಲ್ಲ. ಆದರೆ ಹಾನಿಯು $ 10 ಬಿಲಿಯನ್ ಸಂಖ್ಯೆಯನ್ನು ಮೀರಬಹುದು ಎಂದು ಹೇಳಿದ್ದಾರೆ. "ಪಾಕಿಸ್ತಾನ ಮುಳುಗುತ್ತಿದೆ. ಎಲ್ಲೆಡೆ ತುಂಬಾ ಹಾನಿಯಾಗಿದೆ. ನನ್ನ ಬಳಿ ಹಣವಿಲ್ಲ. ಆದರೆ ಆಶಾದಾಯಕವಾಗಿ ಏನಾದರೂ ದಾರಿ ಕಂಡುಕೊಳ್ಳಬಹುದು" ಎಂದು ಇಸ್ಮಾಯಿಲ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಪ್ರವಾಹದ ಕಾರಣ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯನ್ನು ತಡೆಯಲು ಪಾಕಿಸ್ತಾನವು ತರಕಾರಿಗಳ ಸುಂಕ ರಹಿತ ಆಮದುಗಳನ್ನು ಅನುಮತಿಸಲಿದೆ ಮತ್ತು ಈ ಉದ್ದೇಶಕ್ಕಾಗಿ ಭಾರತದೊಂದಿಗೆ ತಾತ್ಕಾಲಿಕ ಭೂ ಮಾರ್ಗವನ್ನು ತೆರೆಯಲು ನಿರ್ಧರಿಸಿದೆ ಎಂದು ಸಚಿವರು ಹೇಳಿದ್ದಾರೆ.
ಇತ್ತೀಚೆಗೆ ಸಿಮೆಂಟ್, ಉಕ್ಕು ಮತ್ತು ಆಟೋಮೊಬೈಲ್‌ನಂತಹ ದೊಡ್ಡ ಪ್ರಮಾಣದ ಕೈಗಾರಿಕೆಗಳ ಮೇಲೆ ಶೇಕಡಾ 10 ರಷ್ಟು "ಸೂಪರ್ ಟ್ಯಾಕ್ಸ್" ವಿಧಿಸುವುದಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಘೋಷಿಸಿದರು. ಹೆಚ್ಚುತ್ತಿರುವ ಹಣದುಬ್ಬರ, ವಿದೇಶಿ ಮೀಸಲು ನಿಧಿಯ ಕೊರತೆ ಮತ್ತು ಸಾಲದ ಹೊರೆ ತಗ್ಗಿಸುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.
ದಿವಾಳಿಯಾಗಿರುವ ಪಾಕಿಸ್ತಾನವನ್ನು ಅಪಾಯದಿಂದ ಪಾರು ಮಾಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಹೆಚ್ಚಿನ ನಿವ್ವಳ ಲಾಭ ಹೊಂದಿರುವ ವ್ಯಕ್ತಿಗಳು "ಬಡತನ ನಿರ್ಮೂಲನೆ ತೆರಿಗೆ"ಗೆ ಒಳಪಟ್ಟಿರುತ್ತಾರೆ ಎಂದು 2022-23ರ ಮುಂದಿನ ಹಣಕಾಸು ವರ್ಷದ ಫೆಡರಲ್ ಬಜೆಟ್‌ನ ಆರ್ಥಿಕ ತಂಡದ ಸಭೆಯ ನಂತರ ಷರೀಫ್ ತಿಳಿಸಿದ್ದಾರೆ












Click it and Unblock the Notifications