"Zero Tolerance": ಬಾಲ್ಯವಿವಾಹದ ಮೇಲೆ ಅಸ್ಸಾಂನಾದ್ಯಂತ 1,800 ಕ್ಕೂ ಹೆಚ್ಚು ಬಂಧನ!
ಬಾಲ್ಯವಿವಾಹದಿಂದಾಗಿ ಅಸ್ಸಾಂನಲ್ಲಿ ಹೆಚ್ಚುತ್ತಿರುವ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಅಸ್ಸಾಂ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.
ಗುವಾಹಟಿ ಫೆಬ್ರವರಿ 3: ಅಸ್ಸಾಂನಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣ ಹೆಚ್ಚಾಗಿದ್ದು ಇದಕ್ಕೆ ಬಾಲ್ಯ ವಿವಾಹ ಪ್ರಾಥಮಿಕ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಬಾಲ್ಯ ವಿವಾಹ ತಡೆಗೆ ಅಸ್ಸಾಂ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ.
ಅಸ್ಸಾಂನಲ್ಲಿ ಇದುವರೆಗೆ ಬಾಲ್ಯ ವಿವಾಹ ತಡೆಗೆ 1,800 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇಂದು ತಿಳಿಸಿದ್ದಾರೆ. ಹದಿನೈದು ದಿನಗಳೊಳಗೆ ಅಸ್ಸಾಂನಾದ್ಯಂತ ದಾಖಲಾದ 4,000 ಕ್ಕೂ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ನಿನ್ನೆ ತಿಳಿಸಿದ್ದರು, ಶುಕ್ರವಾರದಿಂದ ಶಿಸ್ತುಕ್ರಮ ಪ್ರಾರಂಭವಾಗಲಿದೆ ಎಂದು ಘೋಷಿಸಿದರು.

ಸ್ಸಾಂನಾದ್ಯಂತ 1,800 ಕ್ಕೂ ಹೆಚ್ಚು ಬಂಧನ
"ಬಾಲ್ಯ ವಿವಾಹ ನಿಷೇಧ ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸುವವರ ವಿರುದ್ಧ ಪ್ರಸ್ತುತ ರಾಜ್ಯಾದ್ಯಂತ ಬಂಧನಗಳು ನಡೆಯುತ್ತಿವೆ. 1800 ಕ್ಕೂ ಹೆಚ್ಚು ಜನರನ್ನು ಇಲ್ಲಿಯವರೆಗೆ ಅಸ್ಸಾಂನಲ್ಲಿ ಬಂಧಿಸಲಾಗಿದೆ. ಮಹಿಳೆಯರ ಮೇಲಿನ ಅಕ್ಷಮ್ಯ ಮತ್ತು ಘೋರ ಅಪರಾಧದ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ಅಸ್ಸಾಂ ಪೊಲೀಸರಿಗೆ ಕೇಳಿದ್ದೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಬಾಲ್ಯ ವಿವಾಹ (2006) ನಿಷೇಧ ಕಾಯ್ದೆ ಅಡಿ ಕ್ರಮ
'ರಾಜ್ಯದಲ್ಲಿ ಬಾಲ್ಯವಿವಾಹದ ಬೆದರಿಕೆಯನ್ನು ಕೊನೆಗೊಳಿಸುವ ಸಂಕಲ್ಪದಲ್ಲಿ ಅಸ್ಸಾಂ ಸರ್ಕಾರ ದೃಢವಾಗಿದೆ. ಇದುವರೆಗೆ ಅಸ್ಸಾಂ ಪೊಲೀಸರು ರಾಜ್ಯಾದ್ಯಂತ 4,004 ಪ್ರಕರಣಗಳನ್ನು ದಾಖಲಿಸಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ. ಪ್ರಕರಣಗಳ ಮೇಲಿನ ಕ್ರಮವು ಫೆಬ್ರವರಿ 3 ರಿಂದ ಪ್ರಾರಂಭವಾಗಲಿದೆ. ಎಲ್ಲರೂ ಸಹಕರಿಸುವಂತೆ ವಿನಂತಿಸುತ್ತೇನೆ' ಎಂದು ಅವರು ನಿನ್ನೆ ಟ್ವೀಟ್ ಮಾಡಿದ್ದರು.

ಧರ್ಮಗುರುಗಳು, ಪುರೋಹಿತರ ವಿರುದ್ಧ ಕ್ರಮ
ಅಸ್ಸಾಂ ಕ್ಯಾಬಿನೆಟ್ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ಮದುವೆಯಾಗುವ ಪುರುಷರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಅಥವಾ ಪೋಕ್ಸೊ ಕಾಯ್ದೆಯಡಿ ಪ್ರಕರಣ ವಿಧಿಸಲು ನಿರ್ಧರಿಸಿದೆ. 14-18 ವರ್ಷ ವಯಸ್ಸಿನ ಹದಿಹರೆಯದ ಹುಡುಗಿಯರನ್ನು ಮದುವೆಯಾದ ಪುರುಷರ ವಿರುದ್ಧ ಬಾಲ್ಯ ವಿವಾಹ (2006) ನಿಷೇಧ ಕಾಯ್ದೆ ಅಡಿಯಲ್ಲಿ ಆರೋಪ ಹೊರಿಸಲಾಗುವುದು ಎಂದು ನಿರ್ಧರಿಸಲಾಗಿದೆ. ಧರ್ಮಗುರುಗಳು, ಪುರೋಹಿತರಂತೆ ಇಂತಹ ಮದುವೆಗೆ ಅನುಕೂಲ ಮಾಡಿಕೊಡುವವರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಸಿಎಂ ಎಂದರು.

ನಿಷೇಧಿತ ವಯಸ್ಸಿನಲ್ಲಿ ವಿವಾಹ
ಅಸ್ಸಾಂನಲ್ಲಿ ಹೆಚ್ಚಿನ ತಾಯಿ ಮತ್ತು ಶಿಶು ಮರಣ ಪ್ರಮಾಣಗಳು ದಾಖಲಾಗುತ್ತಿದೆ. ಇದಕ್ಕೆ ಬಾಲ್ಯ ವಿವಾಹ ಪ್ರಾಥಮಿಕ ಕಾರಣವಾಗಿದೆ. "ಹೆಚ್ಚಿನ ಶಿಶು ಮರಣ ಪ್ರಮಾಣ ಮತ್ತು ತಾಯಂದಿರ ಮರಣ ಅನುಪಾತಕ್ಕೆ (MMR) ಮುಖ್ಯ ಕಾರಣವೆಂದರೆ ಬಾಲ್ಯವಿವಾಹ. ರಾಜ್ಯದಲ್ಲಿ ಸರಾಸರಿ 31 ಪ್ರತಿಶತದಷ್ಟು ವಿವಾಹಗಳು ನಿಷೇಧಿತ ವಯಸ್ಸಿನಲ್ಲೇ ನಡೆಯುತ್ತಿವೆ" ಎಂದು ಶ್ರೀ ಶರ್ಮಾ ಹೇಳಿದರು. "ಶೂನ್ಯ ಸಹಿಷ್ಣುತೆಯ ಮನೋಭಾವ" ಮೂಲಕ ಈ ಬೆದರಿಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಸ್ಸಾಂ ಪೊಲೀಸರನ್ನು ತಿಳಿಸಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ












Click it and Unblock the Notifications