ಸಾಮಾಜಿಕ ಜಾಲತಾಣಗಳಿಗೆ ಮೋದಿ ಖರ್ಚು ಮಾಡಿದ್ದು ಇಷ್ಟೆನಾ?

Subscribe to Oneindia Kannada

ನವದೆಹಲಿ, ಮಾರ್ಚ್ 17: ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಮೀರಿಸುವ ನಾಯಕರು ವಿಶ್ವದಲ್ಲೇ ಇಲ್ಲ. ಆದರೆ ಇದಕ್ಕೆ ಮೋದಿ ಖರ್ಚು ಮಾಡುವ ಹಣ ಮಾತ್ರ ಶೂನ್ಯ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಹೇಳಿದೆ.

ಮೇ 2014ರಿಂದ ಇಲ್ಲಿಯ ವರೆಗೆ ಎರಡು ವರ್ಷಗಳ ಅವಧಿಯಲ್ಲಿ ಒಂದೇ ಒಂದು ರೂಪಾಯಿಯನ್ನೂ ಸಾಮಾಜಿಕ ಜಾಲತಾಣಗಳ ಮೇಲೆ ಸುರಿದಿಲ್ಲ. ದಾನಿಗಳ ನೆರವಿನಿಂದ ಪ್ರಧಾನ ಮಂತ್ರಿಗಳ ಸಾಮಾಜಿಕ ಜಾಲತಾಣಗಳ ನಿರ್ಮಾಣ ಮತ್ತು ನಿರ್ವಹಣೆ ನಡೆಸಲಾಗುತ್ತಿದೆ. ಹೀಗಂತ ಎಎಪಿ ನಾಯಕ ಹಾಗೂ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಆರ್ಟಿಐ ಮೂಲಕ ಕೇಳಿದ ಪ್ರಶ್ನೆಗೆ ಪ್ರಧಾನಮಂತ್ರಿ ಕಾರ್ಯಾಲಯ ಉತ್ತರ ನೀಡಿದೆ.[ಇವಿಎಂ ತಿರುಚುವ 'ಆರೋಪ'ಕ್ಕೆ EC ಮಸಿ]

 Zero cost for PM Narendra Modi's Social Media campaign

ಫೇಸ್ಬುಕ್, ಟ್ವಿಟ್ಟರ್, ಯೂಟ್ಯೂಬ್ ಮತ್ತು ಗೂಗಲ್ ಖಾತೆಗಳಲ್ಲಿ ನಡೆಸಿದ ಯಾವುದೇ ಅಭಿಯಾನಕ್ಕೂ ಪ್ರಧಾನಿ ಮಂತ್ರಿ ಕಾರ್ಯಾಲಯದಿಂದ ಹಣ ಪಾವತಿ ಮಾಡಿಲ್ಲ. ಪ್ರಧಾನ ಮಂತ್ರಿಗಳ ಅಧಿಕೃತ 'ಪಿಎಂಒ ಇಂಡಿಯಾ' ಆ್ಯಪನ್ನು ಮೈಗವರ್ನಮೆಂಟ್ ಮತ್ತು ಗೂಗಲ್ ನಡೆಸಿದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳೇ ರೂಪಿಸಿದ್ದಾರೆ.

"ಪ್ರೈಜ್ ಹಣ ಬಿಟ್ಟು ಆ್ಯಪಿಗೆ ಬೇರಾವುದೇ ಹಣ ಖರ್ಚು ಮಾಡಿಲ್ಲ. ಈ ಪ್ರೈಜ್ ಹಣವನ್ನೂ ಗೂಗಲ್ ನೀಡಿದೆ," ಎಂದು ಆರ್ಟಿಐ ಉತ್ತರದಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ ಸ್ಪಷ್ಟಪಡಿಸಿದೆ.[ಅನಾರೋಗ್ಯ ಪೀಡಿತ ಅಮ್ಮನಿಗಾಗಿ ರಾಹುಲ್ ವಿದೇಶಕ್ಕೆ]

ಇನ್ನು 'ನರೇಂದ್ರ ಮೋದಿ ಆ್ಯಪ್'ನ್ನೂ ಪ್ರಧಾನಿ ಮಂತ್ರಿ ಕಾರ್ಯಾಲಯವಾಗಲಿ, ಭಾರತ ಸರಕಾರವಾಗಲಿ ತಯಾರಿಸಿಲ್ಲ ಮತ್ತು ನಿರ್ವಹಿಸುತ್ತಿಲ್ಲ ಎಂದು ಆರ್ಟಿಐ ಉತ್ತರದಲ್ಲಿ ಹೇಳಲಾಗಿದೆ. ನರೇಂದ್ರ ಮೋದಿ ಆ್ಯಪನ್ನು ಬಿಜೆಪಿಯ ಐಟಿ ವಿಭಾಗ ತಯಾರಿಸಿದೆ ಮತ್ತು ನಿರ್ವಹಿಸುತ್ತಿದೆ ಎಂದು ಆ್ಯಪಿನ ಡೆವಲಪರ್ ಪೇಜಿನಲ್ಲೇ ಹೇಳಲಾಗಿದೆ.

ಇನ್ನು ಇತ್ತೀಚೆಗೆ ಹಿರಿಯ ಆಲ್ ಇಂಡಿಯಾ ರೇಡಿಯೋ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿ ಆರಂಭಿಕ ಮನ್ ಕೀ ಬಾತ್ ಕಾರ್ಯಕ್ರಮಗಳಿಗೆ ಜಾಹೀರಾತು ನೀಡಿದ್ದರ ವಿರುದ್ಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಸಮಧಾನಗೊಂಡಿದ್ದರು ಎಂದು ಹೇಳಿದ್ದರು.

ಮೂಲಗಳ ಪ್ರಕಾರ ಮನ್ ಕೀ ಬಾತ್ ಕಾರ್ಯಕ್ರಮಕ್ಕೂ ಆಲ್ ಇಂಡಿಯಾ ರೇಡಿಯೋ ಯಾವುದೇ ಹಣ ವ್ಯಯಿಸುತ್ತಿಲ್ಲ. ಬದಲಿಗೆ ಇದರಿಂದ ಸಂಸ್ಥೆಗೆ 2015-16ರಲ್ಲಿ 4.78 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a reply by the Prime Minister's Office (PMO) to an RTI application filed by AAP leader and Delhi Deputy Chief Minister Manish Sisodia says that Narendra Modi's presence on multiple social media platforms has not cost the exchequer a single rupee since May 2014.
Please Wait while comments are loading...