ಭಿಕ್ಷುಕನಾಗಿ ನಟಿಸಿದ ಸೋಷಿಯಲ್ ಮೀಡಿಯಾ ಇನ್‌ಫ್ಲುಯನ್ಸರ್, ಐಟಿ ಜಾಬ್‌ಗಿಂತ ಬೆಸ್ಟ್ ಅನ್ಸಿದ್ದೇಕೆ?

ಭಿಕ್ಷುಕರು ಅಂದರೆ ನಾವಂದುಕೊಳ್ಳುವುದು ಅವರಲ್ಲಿ ಏನೂ ಇಲ್ಲ ಎಂದು. ಆದ್ರೆ ಭಿಕ್ಷುಕರು ಭಿಕ್ಷೆ ಬೇಡಿಯೇ ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸುತ್ತಾರೆ. ಸರ್ಕಲ್‌ಗಳಲ್ಲಿ, ದೇವಸ್ಥಾನಗಳ ಮುಂದೆ ಕುಳಿತು ಭಿಕ್ಷೆ ಬೇಡುವವರು ಎಷ್ಟು ಹಣವನ್ನು ಸಂಪಾದಿಸುತ್ತಾರೆ ಎನ್ನುವುದನ್ನು ಊಹಿಸಿಕೊಳ್ಳುವುದು ಕೂಡಾ ಸಾಧ್ಯವಿಲ್ಲ. ಎಲ್ಲರೂ ಕೊಡುವ ಚಿಲ್ಲರೆ ಹಣವನ್ನು ಜೋಡಿಸಿಯೇ ಅವರು ಲಕ್ಷಾಂತರ ಹಣವನ್ನು ಕೂಡಿಡುತ್ತಾರೆ. ಕೆಲವೊಮ್ಮೆ ಭಿಕ್ಷೆ ನೀಡುವವರಲ್ಲಿಯೂ ಅಷ್ಟು ದುಡ್ಡು ಇರುತ್ತದೋ ಇಲ್ಲವೋ ಆದರೆ ಭಿಕ್ಷೆ ಎತ್ತುವವರು ಮಾತ್ರ ಲಕ್ಷಾಧಿಪತಿಗಳಾಗಿರುತ್ತಾರೆ ಎನ್ನುವುದು ಅನೇಕ ಕಡೆಗಳಲ್ಲಿ ಸಾಬೀತಾಗಿದೆ.

ಭಿಕ್ಷೆಯಿಂದಲೇ 8.40 ಲಕ್ಷ ಸಂಪಾದನೆ

ಮಂಡ್ಯದಲ್ಲಿಯೂ ಇಂಥದ್ದೇ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಮಂಡ್ಯದ ಸಬ್ದರಿಯಾಬಾದ್ ಮೊಹಲ್ಲಾದಲ್ಲಿ ವಾಸಿಸುತ್ತಿದ್ದ ನೂರ್ ಎಂಬ ಭಿಕ್ಷುಕಿ ಮೃತಪಟ್ಟ ನಂತರ ಅವರ ಕೈಯ್ಯಲ್ಲಿ ಮತ್ತು ಬ್ಯಾಂಕ್ ಖಾತೆಯಲ್ಲಿ ಒಟ್ಟು 8.40 ಲಕ್ಷ ಇರುವುದು ಪತ್ತೆಯಾಗಿದೆ. ಇದೀಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.

Youtubers Dressed His Friend Like Begger In Haridwar nad Earned 4 Thousand Rupees in 8 Hour

ಭಿಕ್ಷೆ ಬೇಡಿ ಸಂಪಾದಿಸುವ ಪ್ರಯೋಗ

ಇದರ ಬೆನ್ನಲ್ಲೇ ಹರಿದ್ವಾರದ ಕವಡ್ ಮೇಳದಲ್ಲಿ ಯೂಟ್ಯೂಬರ್ ಒಬ್ಬರು ಭಿಕ್ಷೆ ಬೇಡಿ ಎಷ್ಟು ಹಣ ಸಂಪಾದಿಸಬಹುದು ಎನ್ನುವುದನ್ನು ಪ್ರಾಕ್ಟಿಕಲ್‌ ಆಗಿ ಕಂಡು ಹಿಡಿಯಲು ಹೊರಟಿದ್ದಾರೆ. ಧಾರ್ಮಿಕ ಸ್ಥಳದಲ್ಲಿ ಭಿಕ್ಷೆ ಬೇಡಿದರೆ ದಿನಕ್ಕೆ ಎಷ್ಟು ಹಣ ಸಂಪಾದಿಸಬಹುದು, ತಿಂಗಳಿಗೆ ಎಷ್ಟು ಹಣವನ್ನು ಸೇರಿಸಬಹುದು ಎನ್ನುವ ಲೆಕ್ಕಾಚಾರಕ್ಕೆ ಇಳಿದಿದ್ದಾರೆ. ಅವರು ತಮ್ಮ ಅನುಭವದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್‌ ಮಾಡಿದ್ದಾರೆ.

ಭಿಕ್ಷುಕರಂತೆ ವೇಷ ಹಾಕಿ ಭಿಕ್ಷಾಟನೆ

ಯೂಟ್ಯೂಬರ್ ಪುರುಷೋತ್ತಮ ವಶಿಷ್ಠ ಮತ್ತು ಅವರ ಸ್ನೇಹಿತ ಸಚಿನ್ ಸೇರಿ ಭಿಕ್ಷೆಯಿಂದ ಎಷ್ಟು ಹಣ ಗಳಿಸಬಹುದು ಎನ್ನುವ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಇಲ್ಲಿ ಸಚಿನ್ ಭಿಕ್ಷುಕರಂತೆ ವೇಷ ಹಾಕಿ ಭಿಕ್ಷಾಟನೆಗೆ ಕುಳಿತಿದ್ದಾರೆ. ಇದಕ್ಕಾಗಿ ಸಚಿನ್ ತನ್ನ ಲುಕ್‌ ಅನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ. ಹರಿದ ಬಟ್ಟೆಗಳನ್ನು ಧರಿಸಿ, ಮುಖದ ಮೇಲೆ ಮಣ್ಣು ಮೆತ್ತಿಕೊಂಡು ಭಿಕ್ಷುಕನಂತೆ ಕಾಣಲು ಒಂದು ಸಣ್ಣ ಬಟ್ಟಲನ್ನು ಹಿಡಿದುಕೊಂಡು ಭಿಕ್ಷಾಟನೆಗೆ ಕುಳಿತಿದ್ದಾರೆ. ಜನದಟ್ಟಣೆಯಿಂದ ಕೂಡಿದ ಮೇಳಕ್ಕೆ ಹೋಗುವ ಮೊದಲು ಅವರು ತನ್ನ ಕುತ್ತಿಗೆಗೆ UPI QR ಕೋಡ್ ಅನ್ನು ನೇತುಹಾಕಿದ್ದಾರೆ.

8 ಗಂಟೆಯಲ್ಲಿ4 ಸಾವಿರ ಗಳಿಕೆ

ಈ ಪ್ರಯೋಗದ ಸಮಯದಲ್ಲಿ ಸಚಿನ್ ಸುಮಾರು 1,000 ಅಥವಾ 2,000 ರೂ. ಗಳಿಸಬಹುದು ಎನ್ನುವ ನಿರೀಕ್ಷೆ ಅವರದ್ದಾಗಿತ್ತು. ಆದರೆ, ನಿರೀಕೆಗಿಂತ ಡಬಲ್‌ ಹಣವನ್ನು ಅವರು ಒಂದೇ ದಿನ ಗಳಿಸಿದ್ದಾರೆ.
ಮೊದಲ ಕೆಲವು ಗಂಟೆಗಳ ಕಾಲ, ಗಳಿಕೆ ಸಾಧಾರಣವಾಗಿತ್ತು. ಮೊದಲು ಬರೀ 130 ರೂ.ಗಳಷ್ಟು ಹಣ ಮಾತ್ರ ಕಲೆಕ್ಷನ್‌ ಆಗಿದೆ. ತುಂಬಾ ಮಂದಿ ಹಣ ಇಲ್ಲ ಎಂದು ದೂರ ಕಳುಹಿಸಿದರೆ ಇನ್ನು ಕೆಲವರು ಬಹಳ ದಯೆಯಿಂದ ವರ್ತಿಸಿದ್ದಾರೆ.

ಒಂದು ಹಂತದಲ್ಲಿ, ಸಚಿನ್ ನಿಜವಾದ ಭಿಕ್ಷುಕನ ಪಕ್ಕದಲ್ಲಿ ಕುಳಿತು ಭಿಕ್ಷೆ ಬೇಡುವುದಕ್ಕೂ ಶುರು ಮಾಡಿದ್ದಾನೆ. ದಿನದ ಅಂತ್ಯದ ವೇಳೆಗೆ, ವಶಿಷ್ಠ ಮತ್ತು ಸಚಿನ್ ಸುಮಾರು 4,000 ರೂ.ಗಳನ್ನು ಸಂಗ್ರಹಿಸಿದ್ದಾರೆ.8 ಗಂಟೆಯಲ್ಲಿ 4 ಸಾವಿರ ಅಂದರೆ ತಿಂಗಳಿಗೆ 1.2 ಲಕ್ಷ ರೂ ಸಂಪಾದನೆ. ಇನ್ನು 12 ರಿಂದ 13 ಗಂಟೆಗಳವರೆಗೆ ಇದೇ ಕೆಲಸ ಮುಂದುವರಿದರೆ ಈ ಹಣ 8 ಸಾವಿರದಿಂದ 10 ಸಾವಿರಕ್ಕೆ ಏರುವ ಸಾಧ್ಯತೆ ಇದೆ. ಅಂದರೆ ತಿಂಗಳಿಗೆ ಸರಿ ಸುಮಾರು 2.4ರಿಂದ 3 ಲಕ್ಷ ರೂಪಾಯಿ.

ವೀಡಿಯೊವನ್ನು ಇಲ್ಲಿ ನೋಡಿ

ಈ ವೀಡಿಯೊ ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದ್ದ ಹಾಗೆಯೇ ಬಳಕೆದಾರರು ಇವರ ಗಳಿಕೆಯ ಬಗ್ಗೆ ವಿಧ ವಿಧವಾಗಿ ಪ್ರತಿಕ್ರಿಯಿಸಿದ್ದಾರೆ. ಅನೇಕ ಮಂದಿ ಭಿಕ್ಷೆಯಿಂದ ಗಳಿಸಿರುವ ಹಣದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಈ ಕಾರ್ಯವನ್ನು ಪ್ರಶ್ನಿಸಿದ್ದಾರೆ. ಧಾರ್ಮಿಕ ಮತ್ತು ಪ್ರವಾಸಿ ತಾಣಗಳಲ್ಲಿ ಭಿಕ್ಷಾಟನೆ ಹೆಚ್ಚಾಗಿ ಜೀವನೋಪಾಯವಾಗಿ ಅಥವಾ ಸಂಘಟಿತ ವ್ಯವಹಾರವಾಗಿ ಬದಲಾಗುತ್ತಿದೆಯೇ ಎಂದು ಕೆಲವರು ಪ್ರಶ್ನಿಸಿದ್ಧಾರೆ. ಇನ್ನು ಕೆಲವರು, ಭಿಕ್ಷಾಟನೆಯನ್ನೇ ಅವಲಂಬಿಸಿರುವ ಜನರು ಎದುರಿಸುತ್ತಿರುವ ಕಷ್ಟಗಳನ್ನು ಒಂದು ದಿನದ ಪ್ರಯೋಗವು ಸೆರೆಹಿಡಿಯಲು ಸಾಧ್ಯವಿಲ್ಲ ಎಂದು ಗಮನಸೆಳೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+