ವೈರಲ್ ವಿಡಿಯೋ: ನಡು ರಸ್ತೆ, ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಯುವತಿ ಡ್ಯಾನ್ಸ್
ದೆಹಲಿ ಅಕ್ಟೋಬರ್ 16: ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಲು ಜನ ಹೊಸದಾದ ಯೋಜನೆಗಳನ್ನು ಹುಡುಕುತ್ತಲೇ ಇರುತ್ತಾರೆ. ಕೆಲವರು ಕೆಲ ಸವಾಲುಗಳನ್ನು ನೀಡುವ ಮೂಲಕ ವೈರಲ್ ಆದ್ರೆ, ಇನ್ನೂ ಕೆಲವರು ಕಠಿಣ ಸ್ಥಳಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುವ ಮೂಲಕ ವೈರಲ್ ಆಗುತ್ತಾರೆ. ಕಳೆದ ತಿಂಗಳಷ್ಟೇ ಯುವತಿಯೊಬ್ಬಳು ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈಲರ್ ಆಗಿದ್ದಳು. ಸದ್ಯ ಮತ್ತೋರ್ವ ಯುವತಿ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ನೃತ್ಯ ಮಾಡುವ ಮೂಲಕ ಟ್ರೋಲ್ ಆಗಿದ್ದಾಳೆ.
ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ 'ಸಾತ್ ಸಮುಂದರ್ ಪಾರ್' ಹಾಡಿಗೆ ಯುವತಿ ಮೈ ಚಳಿಬಿಟ್ಟು ಕುಣಿದಿದ್ದಾಳೆ. ಹುಡುಗಿಯ ಡ್ಯಾನ್ಸ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಸಹೇಲಿ ರುದ್ರ ಎನ್ನುವ ಯುವತಿ ಇನ್‌ಸ್ಟಾಗ್ರಾಮ್ ನಲ್ಲಿ ವೈರಲ್ ಆಗಲು ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ 'ಸಾತ್ ಸಮುಂದರ್ ಪರ್' ರೀಮಿಕ್ಸ್ ಟ್ರ್ಯಾಕ್‌ಗೆ ನೃತ್ಯ ಮಾಡುವುದನ್ನು ನೋಡಬಹುದು. ಈ ವಿಡಿಯೋ 25 ಮಿಲಿಯನ್ ವೀಕ್ಷಣೆಗಳನ್ನು, 1.5 ಮಿಲಿಯನ್ ಲೈಕ್ಸ್ ಮತ್ತು 18.8K ಕಾಮೆಂಟ್‌ಗಳನ್ನು ಹೊಂದಿದೆ.
ಸಹೇಲಿ ರುದ್ರ ತನ್ನ ಲವಲವಿಕೆಯ ನೃತ್ಯ
ಸಹೇಲಿ ರುದ್ರ ತನ್ನ ಲವಲವಿಕೆಯ ನೃತ್ಯದ ಮೂಲಕ ನೋಡುಗರನ್ನು ಸೆಳೆದಿದ್ದಾಳೆ. ವಿಡಿಯೋದಲ್ಲಿ ಮುಖವಾಡವನ್ನು ಧರಿಸಿದ್ದ ಸಹೇಲಿಯಾಳ ಅದ್ಭುತ ನೃತ್ಯ ಕೌಶಲ್ಯವನ್ನು ನೋಡಲು ಸುತ್ತಮುತ್ತಲಿನ ಜನರು ಸೇರಿರುವುದು ಕಾಣಬಹುದು. ಸಾತ್ ಸಮುಂದರ್ ಪಾರ್ ಹಾಡು ವಿಶ್ವಾತ್ಮ ಚಿತ್ರದ್ದು. ಇದರಲ್ಲಿ ನಟಿ ದಿವ್ಯಾ ಭಾರತಿ ನಟಿಸಿದ್ದಾರೆ.
ಯುವತಿ ಡ್ಯಾನ್ಸ್ ಗೆ ಆಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಆಕೆಯ ನೃತ್ಯ ಕೌಶಲ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರೆ, ಇನ್ನೂ ಕೆಲೆವರು ಬೇಜವಾಬ್ದಾರಿತನ ಎಂದು ಹೇಳಿದ್ದಾರೆ.
ನಡು ರಸ್ತೆಯಲ್ಲಿ ನೃತ್ಯ
ಒಂದು ತಿಂಗಳ ಹಿಂದೆಯಷ್ಟೇ ಇನ್ಸ್ಟಾಗ್ರಾಂ ಫಾಲೋವರ್ ಶ್ರೇಯಾ ಕುಲ್ರಾ ವಾಹನ ಚಲಿಸುತ್ತಿರುವ ರಸ್ತೆ ಮಧ್ಯೆದಲ್ಲಿ ನಿಂತು ಡ್ಯಾನ್ಸ್ ಮಾಡುವ ಮೂಲಕ ವಿಡಿಯೋ ಹರಿಬಿಟ್ಟಿದ್ದಳು. ಸೋಷಿಯಲ್ ಮಿಡಿಯಾದಲ್ಲಿ ಚಾಲೆಂಜ್ ಸ್ವೀಕರಿಸಿದ ಯುವತಿ ಮಧ್ಯಪ್ರದೇಶದ ಇಂದೋರ್ ರಸ್ತೆಯಲ್ಲಿ ನೃತ್ಯ ಮಾಡಿದ್ದಳು. ವಿಡಿಯೋದಲ್ಲಿ ಶ್ರೇಯಾ ಟ್ರಾಫಿಕ್ ಸಿಗ್ನಲ್ ಬಿದ್ದಾಕ್ಷಣ ರಸ್ತೆಯ ಮಧ್ಯೆದಲ್ಲಿ ನಿಂತು ನೃತ್ಯ ಮಾಡುತ್ತಿರುವುದನ್ನು ಕಾಣಬಹುದು.

ಟ್ರಾಫಿಕ್ ನಿಯಮ ಉಲ್ಲಂಘನೆ ಆರೋಪ
ಶ್ರೇಯಾ ವಿಡಿಯೋ ವೈರಲ್ ಆಗುತ್ತಿದ್ದಂತೆ ಟ್ರಾಫಿಕ್ ಪೊಲೀಸರು ಆಕೆಯ ವಿರುದ್ಧ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ನೋಟಿಸ್ ಜಾರಿ ಮಾಡಿದ್ದರು. ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಘಟನೆಯ ಕುರಿತಾಗಿ ನಿರಾಶೆ ವ್ಯಕ್ತಪಡಿಸಿ ಸೂಕ್ತ ಕ್ರಮಕ್ಕೆ ಆದೇಶಿದ್ದರು. ಯುವತಿಯ ಉದ್ದೇಶ ಏನೇ ಇದ್ದರೂ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಆಕೆಯ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು.
ಫ್ಲೈಓವರ್ ಮೇಲೆ ಡ್ಯಾನ್ಸ್
ಕೋಲ್ಕತ್ತಾದ ಸಾಮಾಜಿಕ ಮಾಧ್ಯಮ ಪ್ರಭಾವಿ ಸ್ಯಾಂಡಿ ಸಾಹಾ ಅವರು ಫ್ಲೈಓವರ್ ನಲ್ಲಿ ನೃತ್ಯ ಮಾಡಿ ಈ ಹಿಂದೆ ವಿಡಿಯೋ ಹರಿಬಿಟ್ಟಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿತ್ತು. 3 ನಿಮಿಷ 38 ಸೆಕೆಂಡುಗಳ ಕ್ಲಿಪ್ ನಲ್ಲಿ ಸಾಹಾ 'ಮೇನ್ ಆಯೂ ಹೂನ್ ಯುಪಿ ಬಿಹಾರ್ ಲೂಟ್ನೆ' ಹಾಡಿಗೆ ನೃತ್ಯ ಮಾಡಿದ್ದರು.
-
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್












Click it and Unblock the Notifications