ಪ್ರಧಾನ ಮಂತ್ರಿ "ಉಜ್ವಲ" ಯೋಜನೆ ಎಂದರೇನು?
ಪ್ರಧಾನಿ ನರೇಂದ್ರ ಮೋದಿ ಗ್ರಾಮೀಣ ಮಹಿಳೆಯರಿಗೆ "ಉಜ್ವಲ" ಯೋಜನೆಯನ್ನು ಕೊಡಮಾಡಿದ್ದಾರೆ. 2019 ರೊಳಗೆ 5 ಕೋಟಿ ಕುಟುಂಬಗಳು ಯೋಜನೆಯ ಲಾಭ ಪಡೆದುಕೊಳ್ಳಲಿವೆ ಎಂದು ತಿಳಿಸಿದ್ದಾರೆ.
ಬಡತನ ರೇಖೆಗಿಂತ ಕೆಳಗೆ ಇರುವವರನ್ನು ಗಮನದಲ್ಲಿ ಇರಿಸಿಕೊಂಡು ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ. ಯೋಜನೆ ಕುಟುಂಬದ ವೆಚ್ಚವನ್ನು ಕಡಿಮೆ ಮಾಡುವುದು ಅಲ್ಲದೇ ಮಹಿಳೆಯರ ಆರೋಗ್ಯ ಸುಧಾರಣೆಯಲ್ಲಿ ಮಹತ್ತರ ಪಾತ್ರ ನಿರ್ವಹಣೆ ಮಾಡಲಿದೆ. ಜನಧನ ಖಾತೆಯ ಆಧಾರಲ್ಲಿ ಕುಟುಂಬದ ಮಹಿಳೆ ಸಬ್ಸಿಡಿ ಪಡೆದುಕೊಳ್ಳಲಿದ್ದಾಳೆ.[ನಮ್ಮ ಮೆಟ್ರೋ ಸುರಂಗ ಮಾರ್ಗದ ವಿಶೇಷಗಳು]

ಯೋಜನೆಯ ಲಾಭಗಳು ಏನು?
* ದೇಶದ ಎಲ್ಲ ನಾಗರಿಕರಿಗೂ ಎಲ್ ಪಿಜಿ ಸಂಪರ್ಕ ಸಿಕ್ಕಿದಂತೆ ಆಗುತ್ತದೆ.
* ಮಹಿಳೆಯರ ಆರೋಗ್ಯ ಸೂಧಾರಣೆಯಲ್ಲಿ ಪ್ರಮುಖ ಪಾತ್ರ
* ಮಾಲಿನ್ಯ ನಿಯಂತ್ರಣ
* ಅಡುಗೆ ಮಾಡಲು ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಕಡಿತ
* ಗ್ರಾಮೀಣ ಯುವಕರಿಗೆ ಹೊಸ ಉದ್ಯೋಗ ಅವಕಾಶ[ದುಬಾರಿ ವಜ್ರ 'ಕೊಹಿನೂರು' ಏನಿದರ ತಕರಾರು]
* ಬಿಪಿಎಲ್ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ 1600 ರು. ಆಡಳಿತಾತ್ಮಕ ಸಹಾಯ ಧನವನ್ನು ಕೇಂದ್ರ ಸರ್ಕಾರ ನೀಡಲಿದೆ.
* ಬಿಪಿಎಲ್ ಫಲಾನುಭವಿಗಳಿಗೆ ಉಚಿತ ಸಿಲಿಂಡರ್ ನೀಡಿಕೆ ಇಲ್ಲ.
* ಸಾಮಾನ್ಯ ಗ್ರಾಹಕರಂತೆ ಬಿಪಿಎಲ್ ಕುಟುಂಬದವರು ಸಿಲಿಂಡರ್ ಖರೀದಿ ಮಾಡಿಕೊಳ್ಳಬೇಕಾಗುತ್ತದೆ.
* 1.5 ಕೋಟಿ ಕುಟುಂಬಗಳಿಗೆ ಉಚಿತ ಸಂಪರ್ಕ ನೀಡುವ ಗುರುಯನ್ನು ಈ ವರ್ಷ ಹೊಂದಲಾಗಿದೆ.
* ಉಳ್ಳವರು ತ್ಯಜಿಸಿದ ಎಲ್ ಪಿಜಿ ಸಬ್ಸಿಡಿಯನ್ನು ಬಳಸಿಕೊಂಡು ಕೇಂದ್ರ ಸರ್ಕಾರ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸಿದೆ.
* ನರೇಂದ್ರ ಮೋದಿ ಅವರ ಮಾತಿಗೆ ಬೆಲೆ ನೀಡಿ 1.13 ಕೋಟಿ ಜನ ಎಲ್ ಪಿಜಿ ಸಬ್ಸಡಿ ತ್ಯಜಿಸಿದ್ದರು.












Click it and Unblock the Notifications