ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಿಷ್ಕ್ರಿಯವಾಗಿರೋ ಅಕೌಂಟಿಗೂ ಬಡ್ಡಿದರ ಸಿಗಲಿದೆ'

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 24: ಅತ್ಯಂತ ಸುರಕ್ಷಿತ ಹೂಡಿಕೆಗಳಲ್ಲಿ ಒಂದೆನಿಸಿದ ನೌಕರರ ಭವಿಷ್ಯ ನಿಧಿ(EPFO)ಗೆ ಒಳ್ಳೆ ಬಡ್ಡಿ ಜೊತೆಗೆ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ. ಆದರೆ, ನಿಷ್ಕ್ರಿಯವಾದ ಖಾತೆಗೆ ಇಲ್ಲಿ ತನಕ ಬಡ್ಡಿದರ ಸಿಗುತ್ತಿರಲಿಲ್ಲ. ಆದರೆ, ಈಗ ನಿಷ್ಕ್ರಿಯವಾಗಿರೋ ಅಕೌಂಟ್ ಗಳಿಗೆ ಬಡ್ಡಿ ನೀಡಲು ಸರ್ಕಾರ ಮುಂದಾಗಿದೆ

4 ಕೋಟಿ ಸದಸ್ಯರಿಗೆ ಶುಭ ಸುದ್ದಿ ಕೊಟ್ಟ ಸಚಿವ ಬಂಡಾರು!4 ಕೋಟಿ ಸದಸ್ಯರಿಗೆ ಶುಭ ಸುದ್ದಿ ಕೊಟ್ಟ ಸಚಿವ ಬಂಡಾರು!

ನಿಷ್ಕ್ರಿಯವಾಗಿರುವ ಖಾತೆಗಳಿಗೂ ಮೂರು ವರ್ಷಗಳವರೆಗೆ ಬಡ್ಡಿ ನೀಡಲು ನಿರ್ಧರಿಸಿದೆ. ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಲು ಉದ್ಯೋಗಿಗಳನ್ನು ಸೆಳೆಯುವ ಉದ್ದೇಶದಿಂದ ಹೊಸ ಯೋಜನೆ ಜಾರಿ ಮಾಡಲಾಗುತ್ತಿದೆ.

You get interest even on inoperative account in the EPFO

ನಿವೃತ್ತಿಯ ನಂತರ ಮೂರು ವರ್ಷಗಳವರೆಗೆ ಹಣವನ್ನು ಹಿಂಪಡೆಯದೇ ಇದ್ದಲ್ಲಿ ಬಡ್ಡಿ ದೊರೆಯುವುದಿಲ್ಲ. ಅವಧಿಗೂ ಮುನ್ನವೇ ಹಣ ವಾಪಸ್ ಪಡೆಯಲು ಷರತ್ತುಬದ್ಧ ಅನುಮತಿ ನೀಡಲಾಗುತ್ತದೆ. ಉದ್ಯೋಗಿಗಳು ಕಂಪನಿ ಬದಲಾಯಿಸಿದಾಗ ಪಿಎಫ್ ಖಾತೆಯನ್ನೂ ಬದಲಾಯಿಸಬೇಕಾಗುತ್ತಿತ್ತು.

ಪಿಎಫ್ ಪಿಂಚಣಿ ಪಡೆಯಲು ಆಧಾರ್ ಕಾರ್ಡ್ ಬೇಕಿಲ್ಲ!ಪಿಎಫ್ ಪಿಂಚಣಿ ಪಡೆಯಲು ಆಧಾರ್ ಕಾರ್ಡ್ ಬೇಕಿಲ್ಲ!

ಈ ಮುಂಚೆ ಹಳೆಯ ಖಾತೆಗಳ ಮೇಲೆ ಎಪಿಎಫ್ಓ ಬಡ್ಡಿ ನೀಡುತ್ತಿರಲಿಲ್ಲ. ಒಂದು ವೇಳೆ, ಈಗ ಕೆಲಸ ಬದಲಾಯಿಸಿದ ಬಳಿಕ ಹೊಸ ಪಿಎಫ್ ಖಾತೆ ತೆರೆಯಬೇಕಾದ ಅಗತ್ಯವಿಲ್ಲ. ಹಳೆ ಖಾತೆಯಲ್ಲಿರುವ ಹಣವನ್ನು UAN ಸಂಖ್ಯೆಯ ಮೂಲಕ ಪೋರ್ಟ್ ಮಾಡಬಹುದು.

ನಿವೃತ್ತಿ ದಿನವೇ ಉದ್ಯೋಗಿಗಳ ಕೈಗೆ ಪಿಂಚಣಿ ಮೊತ್ತನಿವೃತ್ತಿ ದಿನವೇ ಉದ್ಯೋಗಿಗಳ ಕೈಗೆ ಪಿಂಚಣಿ ಮೊತ್ತ

ಈ ಕುರಿತು ಮಾಹಿತಿ ನೀಡಿದ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ, ನಿಷ್ಕ್ರಿಯ ಖಾತೆಗಳಲ್ಲಿರುವ ಠೇವಣಿಗಳಿಗೆ ಶೇ.8.8 ರಷ್ಟು ಬಡ್ಡಿ ನೀಡುವ ಚಿಂತನೆ ಇದೆ ಎಂದಿದ್ದಾರೆ. ಇದಲ್ಲದೆ, ''ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಯೋಜನೆ 1952 ಮತ್ತು ಪಿಂಚಣಿ ಯೋಜನೆ 1995ರ ಹಣ ಪಾವತಿ ಮತ್ತು ಪಿಂಚಣಿ ಸೌಲಭ್ಯಗಳನ್ನು ನಿವೃತ್ತರಾಗುವ ದಿನವೇ ಇತ್ಯರ್ಥಪಡಿಸಲು ಸೂಚಿಸಲಾಗಿದೆ. ಸುಮಾರು 48.85 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 55.51 ಲಕ್ಷ ಪಿಂಚಣಿದಾರರಿದ್ದಾರೆ.

English summary
EPFO decided to pay interest even on inoperative account. Now even if your account is lying dormant, or has been inoperative for more than 3 years, it will continue to earn interest like it did earlier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X