699 ರೂಪಾಯಿಗೆ ಪಿವಿಆರ್‌ನಲ್ಲಿ ತಿಂಗಳಿಗೆ 10 ಸಿನಿಮಾ ನೋಡಿ, ವಿವರ
ಬೆಂಗಳೂರು, ಅಕ್ಟೋಬರ್ 16: ಓಟಿಟಿ ವೇದಿಕೆಗಳಿಂದ ತಮ್ಮ ಚಿತ್ರಮಂದಿರಗಳಿಗೆ ಬರುತ್ತಿದ್ದ ಜನರನ್ನು ಕಳೆದುಕೊಂಡಿದ್ದ ಪಿವಿಆರ್ ಐನಾಕ್ಸ್ ಮತ್ತೆ ಜನರನ್ನು ಸೆಳೆಯಲು ಚಂದದಾರಿಕೆ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಅದರ ವಿವರ ಇಂತಿದೆ.
ಮಲ್ಟಿಪ್ಲೆಕ್ಸ್ ಕಂಪನಿ ಪಿವಿಆರ್ ಐನಾಕ್ಸ್ ಲಿಮಿಡೆಟ್ ಗ್ರಾಹಕರನ್ನು ಥಿಯೇಟರ್‌ಗಳಿಗೆ ಭೇಟಿ ನೀಡುವಂತೆ ಪ್ರೇರೇಪಿಸುವ ಉದ್ದೇಶದಿಂದ ಕೇವಲ ₹699 ಕ್ಕೆ ಚಲನಚಿತ್ರ ಚಂದಾದಾರಿಕೆ ಪಾಸ್ ಅನ್ನು ಬಿಡುಗಡೆ ಮಾಡಿದೆ. ಈ ಮಾಸಿಕ ಚಂದಾದಾರಿಕೆ ಪಾಸ್ ಅಕ್ಟೋಬರ್ 16 ರಿಂದ ಲಭ್ಯವಿರುತ್ತದೆ. ಸಿನಿಮಾ ಪ್ರೇಕ್ಷಕರು ಕೇವಲ 699 ರೂಪಾಯಿಗಳಿಗೆ ತಿಂಗಳಿಗೆ 10 ಚಲನಚಿತ್ರಗಳನ್ನು ನೋಡಬಹುದಾಗಿರುತ್ತದೆ.

ಈ ಆಫರ್ ಸೋಮವಾರದಿಂದ ಗುರುವಾರದವರೆಗೆ ಅನ್ವಯಿಸಲಿದ್ದು, ಐಮ್ಯಾಕ್ಸ್, ಗೋಲ್ಡ್, ಲುಕ್ಸ್ ಮತ್ತು ಡೈರೆಕ್ಟರ್ಸ್ ಕಟ್‌ನಂತಹ ಪ್ರೀಮಿಯಂ ಕೊಡುಗೆಗಳನ್ನು ಹೊರತುಪಡಿಸುತ್ತದೆ. ಚಲನಚಿತ್ರ ಚಂದಾದಾರಿಕೆ ಯೋಜನೆ 'ಪಿವಿಆರ್ ಐನಾಕ್ಸ್ ಪಾಸ್‌ಪೋರ್ಟ್' ಅನ್ನು ಕಂಪನಿಯ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಿಂದ ಕನಿಷ್ಠ 3 ತಿಂಗಳ ಚಂದಾದಾರಿಕೆ ಅವಧಿಗೆ ಖರೀದಿಸಬಹುದಾಗಿದೆ.
ಪಿವಿಆರ್ ಐನಾಕ್ಸ್ ಲಿಮಿಡೆಟ್ ಕಂಪನಿಯು ತಮ್ಮ ಚಲನಚಿತ್ರ ವೀಕ್ಷಣೆಯ ಯೋಜನೆ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಗ್ರಾಹಕರೊಂದಿಗೆ ತೊಡಗಿಸಿಕೊಂಡಿದೆ ಎಂದು ಸಹ ಸಿಇಒ ಗೌತಮ್ ದತ್ತಾ ಅವರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಕೋವಿಡ್ ಬಳಿಕ ಗ್ರಾಹಕರು ನಾವು ಚಲನಚಿತ್ರವನ್ನು ಥಿಯೇಟರ್‌ಗಳಲ್ಲಿ ನೋಡಲು ಇಷ್ಟಪಡುತ್ತೇವೆ. ನಾವು ಚಿತ್ರಮಂದಿರಕ್ಕೆ ಬರಲು ಇಷ್ಟಪಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ನಾವು ಎಲ್ಲ ಕಡೆ ಈ ಸೌಲಭ್ಯ ಕೊಡಲು ಬರಲ್ಲ. ಇವೆಂಟ್ ಫಿಲ್ಮ್‌ಗಳು ಯಾವುವು ಮತ್ತು ಟಿವಿ, ಐಪ್ಯಾಡ್ ಮತ್ತು ಮೊಬೈಲ್‌ನಲ್ಲಿ ನೋಡಬಹುದಾದ ಚಲನಚಿತ್ರಗಳು ಯಾವುವು ಎಂದು ನಾವು ಸ್ಲಾಟ್ ಮಾಡುತ್ತಲೇ ಇರುತ್ತೇವೆ ಎಂದು ಗೌತಮ್ ದತ್ತಾ ಹೇಳಿದ್ದಾರೆ.
ಗ್ರಾಹಕರ ಮನಸ್ಸಿನಲ್ಲಿ ಪಠಾಣ್, ಜವಾನ್, ಸಲಾರ್, ಲಿಯೋ ಇನ್ನು ಕೆಲವು ದೊಡ್ಡ ಸಿನಿಮಾ ಚಿತ್ರಗಳು ತದನಂತರ ಅವರು ನಿಜವಾಗಿಯೂ ವೀಕ್ಷಿಸಲು ಬಯಸುವ ಕೆಲವು ಚಲನಚಿತ್ರಗಳಿವೆ. ಆದರೆ ಸ್ವಲ್ಪ ಸಮಯ ಕಾಯಲು ಮನಸ್ಸಿಲ್ಲ. ಆದ್ದರಿಂದ ನಾವು ಈ ಬಗ್ಗೆ ಅವಲೋಕಿಸಿ ಹೇಳಿದಾಗ ನೀವು ಪ್ರತಿ ವಾರ ಚಿತ್ರಮಂದಿರಕ್ಕೆ ಏಕೆ ಬರಬಾರದು? ಎಂದು ಅವರು ಹೇಳಿದರು.
ಇವೆಂಟ್ ಚಲನಚಿತ್ರಗಳು ದೊಡ್ಡದಾಗುತ್ತಿವೆ. ಸಣ್ಣ ಮಧ್ಯಮ ಗಾತ್ರದ ಚಿತ್ರಗಳು ಕ್ಷೀಣಿಸುತ್ತಿವೆ. ಹಾಗಾಗಿ ನಾವು ಗ್ರಾಹಕರ ಭಾವನೆಯೊಂದಿಗೆ ಕೆಲಸ ಮಾಡುವ ಒಂದು ರೀತಿಯ ಉತ್ಪನ್ನವನ್ನು ಹೊಂದಿರಬೇಕು. ಅದು ಅವರನ್ನು ಮತ್ತೆ ಚಿತ್ರರಂಗಕ್ಕೆ ಮರಳಿ ತರುತ್ತದೆ ಮತ್ತು ಇದು ಉತ್ತಮವಾದ ಸಣ್ಣ ಚಲನಚಿತ್ರಗಳನ್ನು ಮುಂದೂಡುತ್ತದೆ. ಏಕೆಂದರೆ ನಮ್ಮಲ್ಲಿ ಸುಮಾರು 13 ರಿಂದ 16 ಚಿತ್ರಗಳಿವೆ, ಅದು ಪ್ರತಿ ವಾರ ಬಿಡುಗಡೆಯಾಗುತ್ತದೆ ಎಂದು ದತ್ತಾ ಹೇಳಿದರು.
ಚಲನಚಿತ್ರ ಚಂದಾದಾರಿಕೆ ಯೋಜನೆಯು ಸಕಾರಾತ್ಮಕ ಪರಿಣಾಮ ಬೀರುವ ಮತ್ತೊಂದು ಹೆಜ್ಜೆಯಾಗಿದೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ಸಮಯದಲ್ಲಿ ವೀಕ್ಷಕರಲ್ಲಿ ಜನಪ್ರಿಯತೆಯನ್ನು ಗಳಿಸಿದ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಂದ ಥಿಯೇಟರ್‌ಗೆ ಬಂದು ಸಿನೆಮ ನೋಡುವವರ ಸಂಖ್ಯೆ ಕ್ಷೀಣಿಸಿತ್ತು. ಇತ್ತೀಚೆಗೆ ಕಂಪೆನಿಗಲ್ಲಿ ಉದ್ಯೋಗಿಗಳನ್ನು ಕಚೇರಿ ಕೆಲಸಕ್ಕೆ ಮರಳಿ ಕರೆಸಿಕೊಳ್ಳುವುದರೊಂದಿಗೆ ಸಾಂಕ್ರಾಮಿಕ ನಂತರದ ಟಿವಿ ಸೆಟ್‌ಗಳಿಗೆ ವೀಕ್ಷಕರನ್ನು ಸೆಳೆಯಲು ಓಟಿಟಿ ಪ್ಲಾಟ್‌ಫಾರ್ಮ್‌ಗಳು ಹೆಣಗಾಡುತ್ತಿವೆ.












Click it and Unblock the Notifications