ಗೋರಖನಾಥ ದೇವಸ್ಥಾನದಲ್ಲಿ ಯೋಗಿ ಆದಿತ್ಯನಾಥ್ ವಿಶೇಷ ಪೂಜೆ
ಗೋರಖನಾಥ ದೇವಾಲಯದ ಗೋಶಾಲೆಯ ಬಳಿ ಮಾತಾ ಕಾಳಿ, ಭಗವಾನ್ ಗಣೇಶ, ಕಾಲಭೈರವ ಸೇರಿದಂತೆ ಅನೇಕ ವಿಗ್ರಹಗಳನ್ನು ನಿರ್ಮಿಸಲಾಯಿತು.
ಲಕ್ನೋ, ಮಾರ್ಚ್ 10: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖನಾಥ ದೇವಸ್ಥಾನದಲ್ಲಿ ಹೊಸದಾಗಿ ನಿರ್ಮಿಸಲಾದ ಕಾಳಿ ಮಾತಾ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ ಹಲವಾರು ವಿಗ್ರಹಗಳ ಪ್ರತಿಷ್ಠಾಪನೆ ಮಾಡಿದರು.
ಗೋರಖನಾಥ ದೇವಾಲಯದ ಗೋಶಾಲೆಯ ಬಳಿ ಮಾತಾ ಕಾಳಿ, ಭಗವಾನ್ ಗಣೇಶ, ಕಾಲಭೈರವ ಸೇರಿದಂತೆ ಅನೇಕ ವಿಗ್ರಹಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಗುರುವಾರ ಶಾಸ್ತ್ರೋಕ್ತ ಪೂಜೆಯ ನಂತರ ಪ್ರಾಣಪ್ರತಿಷ್ಠೆ ನೆರವೇರಿಸಲಾಯಿತು. ಯೋಗಿ ಆದಿತ್ಯನಾಥ್ ಅವರು ವೈದಿಕ ವಿಧಿವಿಧಾನಗಳೊಂದಿಗೆ ತ್ರಿಮೂರ್ತಿಗಳ ಪ್ರಾಣ ಪ್ರತಿಷ್ಠಾ ವಿಧಿಗಳನ್ನು ನೆರವೇರಿಸಿದರು.

ಈ ಸಮಾರಂಭದಲ್ಲಿ 13 ಪುರೋಹಿತರು ಭಾಗಿಯಾಗಿದ್ದರು. ಪ್ರಧಾನ ಪೂಜಾರಿ ಯೋಗಿ ಕಮಲ್ ನಾಥ್ ಅವರ ಉಪಸ್ಥಿತಿಯಲ್ಲಿ ಮಠ ಪುರೋಹಿತ ಆಚಾರ್ಯ ರಾಮಾನುಜ ವೈದಿಕ ರೋಹಿತ್ ಮಿಶ್ರಾ, ಡಾ. ಅರವಿಂದ ಚತುರ್ವೇದಿ, ಅಶ್ವಿನಿ ತ್ರಿಪಾಠಿ, ಪುರುಷೋತ್ತಮ್ ಚೌಬೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಹೊರತಾಗಿ ಭಂಡಾರ ಏರ್ಪಡಿಸಿ ನೆರೆದಿದ್ದ ಎಲ್ಲರಿಗೂ ಪ್ರಸಾದ ವಿತರಿಸಲಾಯಿತು. ಈ ವೇಳೆ ಕಾಶಿಯ ಮಹಾಮಂಡಲೇಶ್ವರ ಸಾತುವಾ ಬಾಬಾ, ಮುಖ್ಯ ಅತಿಥಿ ಅಮರ್ ತುಳಸ್ಯಾನ್, ಅವರ ಪತ್ನಿ ಪಾಯಲ್ ತುಳಸ್ಯಾನ್, ಅನೂಪ್ ಸರಾಫ್, ದ್ವಾರಿಕಾ ತಿವಾರಿ, ದುರ್ಗೇಶ್ ಬಜಾಜ್, ವಿನಯ್ ಗೌತಮ್, ಬ್ರಜೇಶ್ ಮಣಿ ಮಿಶ್ರಾ ಉಪಸ್ಥಿತರಿದ್ದರು.
ನಾಲ್ಕು ದಿನಗಳ ಭೇಟಿಗಾಗಿ ಸಿಎಂ ಯೋಗಿ ಆದಿತ್ಯನಾಥ್ ಸೋಮವಾರ ಗೋರಖ್‌ಪುರ ತಲುಪಿದ್ದಾರೆ. ನಂತರ ಹೋಳಿ ಹಬ್ಬದ ಪ್ರಯುಕ್ತ ಆಯೋಜಿಸಲಾದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಸಿಎಂ ಯೋಗಿ ಆದಿತ್ಯನಾಥ್ ಬುಧವಾರ ಹೋಳಿ ಮೆರವಣಿಗೆಗೆ ಚಾಲನೆ ನೀಡಿದರು.











Click it and Unblock the Notifications