Delhi Election; ಬಾಂಗ್ಲಾದೇಶಿಯರಿಗೆ, ರೋಹಿಂಗ್ಯಾಗಳಿಗೆ ಎಎಪಿ ನೆಲೆ ನೀಡಿದೆ: ಯೋಗಿ ಆದಿತ್ಯನಾಥ್
ದೆಹಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಮುಖ ಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪಗಳು ಜೋರಾಗಿವೆ. ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದು ಆಮ್ ಆದ್ಮಿ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷವು ದಕ್ಷಿಣ ದೆಹಕಿಯ ಓಕ್ಲಾದಲ್ಲಿ ಬಾಂಗ್ಲಾದೇಶಿಗರು ಮತ್ತು ರೋಹಿಂಗ್ಯಾಗಳಿಗೆ ಇರಲು ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪ ಮಾಡಿದ್ದಾರೆ.

ದೆಹಲಿಯ ಮಂಗೋಲ್ ಪುರದಲ್ಲಿ ನಡೆದ ರ್ಯಾಲಿಯಲ್ಲಿ ಅವರು, ಓಖ್ಲಾ ಪ್ರದೇಶದಲ್ಲಿ ಅಕ್ರಮವಾಗಿ ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾಗಳಿಗೆ ಇರಲು ಅವಕಾಶ ಮಾಡಿಕೊಡುವ ಮೂಲಕ ಎಎಪಿ ಪಾಪದ ಕೆಲಸ ಮಾಡಿದೆ ಎಂದಿದ್ದಾರೆ.
ದೆಹಲಿಯಲ್ಲಿ ನಾಗರಿಕ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳ ಸಮಸ್ಯೆ ಹೆಚ್ಚಾಗಿದೆ, ದೆಹಲಿಯ ಜನತೆ ಉತ್ತಮ ಸೌಲಭ್ಯಗಳಿಗಾಗಿ ಉತ್ತರ ಪ್ರದೇಶದ ನೊಯ್ಡಾಗೆ ದೆಹಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಮುಖ ಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪಗಳು ಜೋರಾಗಿವೆ. ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದು ಆಮ್ ಆದ್ಮಿ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷವು ದಕ್ಷಿಣ ದೆಹಕಿಯ ಓಕ್ಲಾದಲ್ಲಿ ಬಾಂಗ್ಲಾದೇಶಿಗರು ಮತ್ತು ರೋಹಿಂಗ್ಯಾಗಳಿಗೆ ಇರಲು ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪ ಮಾಡಿದ್ದಾರೆ.
ದೆಹಲಿಯ ಮಂಗೋಲ್ ಪುರದಲ್ಲಿ ನಡೆದ ರ್ಯಾಲಿಯಲ್ಲಿ ಅವರು, ಓಖ್ಲಾ ಪ್ರದೇಶದಲ್ಲಿ ಅಕ್ರಮವಾಗಿ ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾಗಳಿಗೆ ಇರಲು ಅವಕಾಶ ಮಾಡಿಕೊಡುವ ಮೂಲಕ ಎಎಪಿ ಪಾಪದ ಕೆಲಸ ಮಾಡಿದೆ ಎಂದಿದ್ದಾರೆ.
ದೆಹಲಿಯಲ್ಲಿ ನಾಗರಿಕ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳ ಸಮಸ್ಯೆ ಹೆಚ್ಚಾಗಿದೆ, ದೆಹಲಿಯ ಜನತೆ ಉತ್ತಮ ಸೌಲಭ್ಯಗಳಿಗಾಗಿ ಉತ್ತರ ಪ್ರದೇಶದ ನೊಯ್ಡಾಗೆ ಮತ್ತು ಗಾಜಿಯಾಬಾದ್ ಗೆ ತಮ್ಮ ವಾಸಸ್ಥಳವನ್ನು ಬದಲಾಯಿಸುತ್ತಿದ್ದಾರೆ ಎಂದು ಹೇಳಿದರು.
ದೆಹಲಿಯಲ್ಲಿ ಯಮುನಾ ನದಿ ಕಲುಷಿತವಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅವರು, ಅರವಿಂದ್ ಕೇಜ್ರಿವಾಲ್ ಅವರ ವೈಫಲ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.
ನಾನು ಗಾಜಿಯಾಬಾದ್ ನಿಂದ ದೆಹಲಿಗೆ ಬರುತ್ತಿರವಾಗ ನಮ್ಮ ನಂಬಿಕಯ ಸಂಕೇತವಾಗಿರುವ ಯಮುನಾ ನದಿ ಇಂದು ಕಲುಷಿತಗೊಂಡು ದುರ್ವಾಸನೆ ಬರುವಂತಾಗಿದೆ. ಅದು ನದಿಯಲ್ಲ ಚರಂಡಿಯಂತೆ ಬದಲಾಗಿದೆ. ದೆಹಕಿಯಲ್ಲಿ ಆಮ್ ಆದ್ಮಿ ಮಾಡುತ್ತಿರುವ ಪಾಪಗಳಿಂದ ಇಲ್ಲಿನ ಜನ ಶೀಘ್ರದಲ್ಲೇ ಮುಕ್ತವಾಗುತ್ತಾರೆ. ಇದರಿಂದ ಮುಕ್ತರಾರಗಲು ಒಂದು ದಾರಿಯಿದ್ದು ಇಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದ್ದಾರೆ.
ದೆಹಲಿ ವಿಧಾನಸಭಾ ಚುನವಾಣೆಗೆ ಇನ್ನು ಕೆಲವೇ ದಿನ ಬಾಕಿ ಉಳಿದಿದೆ. ಫೆಬ್ರವರಿ 5 ರಂದು ಎಲ್ಲಾ 70 ಕ್ಷೇತ್ರಗಳಲ್ಲಿ ಒಂದೇ ಬಾರಿ ಮತದಾನ ನಡೆಯಲಿದ್ದು, ಫೆಬ್ರವರಿ 8 ರಂದು ಫಲಿತಾಂಶ ಘೋಷಣೆಯಾಗಲಿದೆ.
ಸತತ ಎರಡು ಬಾರಿ ದೆಹಲಿಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಆಮ್ ಆದ್ಮಿ ಪಕ್ಷ ಮೂರನೇ ಬಾರಿ ಸರ್ಕಾರ ರಚಿಸುವ ವಿಶ್ವಾಸದಲ್ಲಿದ್ದರೆ 27 ವರ್ಷಗಳ ಬಳಿಕ ದೆಹಲಿಯಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಎಲ್ಲಾ ಪ್ರಯತ್ನ ನಡೆಸುತ್ತಿದೆ.












Click it and Unblock the Notifications