• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

100ಕ್ಕೂ ಅಧಿಕ ಚುನಾವಣಾ ಪ್ರಚಾರ ಸಭೆಗೆ ಯೋಗಿ ಸಜ್ಜು

|

ನವದೆಹಲಿ, ನವೆಂಬರ್ 16: ಪಂಚರಾಜ್ಯ ಚುನಾವಣೆಗಳ ಸ್ಟಾರ್ ಪ್ರಚಾರಕರಾಗಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಕತ್ ಬೇಡಿಕೆ ಬಂದಿದೆ. ಹಿಂದಿ ಭಾಷಿಕ ರಾಜ್ಯಗಳಾಗಿರುವುದರಿಂದ ಯೋಗಿ ಅವರ ಬೇಡಿಕೆ ಹೆಚ್ಚಿದ್ದು, ಸರಿ ಸುಮಾರು 100ಕ್ಕೂ ಅಧಿಕ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.

ಯೋಗಿ ಆದಿತ್ಯನಾಥ್ ಅವರು ತೆಲಂಗಾಣ ಹಾಗೂ ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲೂ ಯೋಗಿ ಪ್ರಚಾರ ಭಾಷಣ ಮಾಡಲಿದ್ದಾರೆ.

ಛತ್ತೀಸ್ ಗಢ, ರಾಜಸ್ಥಾನದಿಂದ ಮೊದಲಿಗೆ ಬೇಡಿಕೆ ಹೆಚ್ಚು ಕೇಳಿ ಬಂದಿತು. ನಂತರ ಮಧ್ಯಪ್ರದೇಶ, ತೆಲಂಗಾಣ ಹಾಗೂ ಮಿಜೋರಾಂನಿಂದಲೂ ಆಹ್ವಾನ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಂತರ ಜನ ಸಮೂಹವನ್ನು ಆಕರ್ಷಿಸಬಲ್ಲ ಮುಖಂಡರಾಗಿ ಯೋಗಿ ಹೊರ ಹೊಮ್ಮಿದ್ದಾರೆ.

ಗುಜರಾತ್, ಕರ್ನಾಟಕ, ತ್ರಿಪುರಾ ಹಾಗೂ ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಮೋದಿ ಅವರ ಭಾಷಣದ ಪರಿಣಾಮಕಾರಿಯಾಗಿತ್ತು. ಇದೇ ರೀತಿ ಯೋಗಿ ಆದಿತ್ಯನಾಥ್ ಅವರು ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದ್ದಾರೆ ಎಂಬ ನಂಬಿಕೆ ಹುಟ್ಟುಕೊಂಡಿದೆ

ಛತ್ತೀಸ್ ಗಢದಿಂದ ಹೆಚ್ಚಿನ ಬೇಡಿಕೆ

ಛತ್ತೀಸ್ ಗಢದಿಂದ ಹೆಚ್ಚಿನ ಬೇಡಿಕೆ

ಛತ್ತೀಸ್ ಗಢ ರಾಜ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಕಂಡುಬಂದಿದೆ. ಮುಖ್ಯಮಂತ್ರಿ ರಮಣ್ ಸಿಂಗ್ ಅವರು ನಾಮಪತ್ರ ಸಲ್ಲಿಕೆಗೆ ತೆರಳಿದಾಗಲೂ ಯೋಗಿ ಆದಿತ್ಯನಾಥ್ ಅವರು ಜತೆಗಿದ್ದರು. ರಮಣ್ ಸಿಂಗ್ ಅವರು ಯೋಗಿ ಅವರ ಕಾಲಿಗೆರಗಿದ್ದರು. ಸಾರ್ವಜನಿಕ ಸಭೆ, ಪ್ರಚಾರದಲ್ಲಿ ಯೋಗಿ ಪಾಲ್ಗೊಂಡಿದ್ದರು. ಇಲ್ಲಿ ತನಕ 26 ಪ್ರಚಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.

ರಾಜಸ್ಥಾನದಿಂದಲೂ ಬೇಡಿಕೆ

ರಾಜಸ್ಥಾನದಿಂದಲೂ ಬೇಡಿಕೆ

ನವೆಂಬರ್ 21ರಿಂದ ನವೆಂಬರ್ 30ರೊಳಗೆ ಸುಮಾರು 21 ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಅಮಿತ್ ಶಾ ಅವರು ಕೂದಾ ರಾಜಸ್ಥಾನದಲ್ಲಿ ಯೋಗಿ ಅವರು ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸಲು ಸೂಚಿಸಿದ್ದಾರೆ. ನವೆಂಬರ್ 23ರಿಂದ ಕೋಟಾ ಪ್ರದೇಶದಲ್ಲಿ ಮೂರು ಚುನಾವಣಾ ಪ್ರಚಾರದಲ್ಲಿ ಯೋಗಿ ಅವರು ಪಾಲ್ಗೊಳ್ಳಲಿದ್ದಾರೆ.

ಮಧ್ಯಪ್ರದೇಶದಲ್ಲೂ ಹೆಚ್ಚಿನ ಸಭೆಗಳು

ಮಧ್ಯಪ್ರದೇಶದಲ್ಲೂ ಹೆಚ್ಚಿನ ಸಭೆಗಳು

ರಾಜಸ್ಥಾನದಂತೆ ಮಧ್ಯಪ್ರದೇಶದಲ್ಲೂ ಹೆಚ್ಚಿನ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಉತ್ತರಪ್ರದೇಶದ ಗಡಿಭಾಗದ ಮಧ್ಯಪ್ರದೇಶದ ಜಿಲ್ಲೆಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಬುಂದೇಲ್ ಖಂಡ್, ಬಾಘೆಲ್ ಖಂಡ್, ಮಾಲ್ವಾ ಭಾಗದಲ್ಲಿ ಬೇಡಿಕೆ ಹೆಚ್ಚಿದೆ.

ಮಿಜೋರಾಂನಲ್ಲೂ ಬೇಡಿಕೆ

ಮಿಜೋರಾಂನಲ್ಲೂ ಬೇಡಿಕೆ

ಮಿಜೋರಾಂನಲ್ಲಿ ಕ್ರೈಸ್ತರ ಸಂಖ್ಯೆ ಹೆಚ್ಚಿದ್ದರೂ ಯುಪಿ ಸಿಎಂ ಅವರಿಗೆ ಬೇಡಿಕೆ ಬಂದಿದೆ. ಗುಜರಾತ್, ಕರ್ನಾಟಕ, ತ್ರಿಪುರಾ ಹಾಗೂ ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಮೋದಿ ಅವರ ಭಾಷಣದ ಪರಿಣಾಮಕಾರಿಯಾಗಿತ್ತು. ಇದೇ ರೀತಿ ಯೋಗಿ ಆದಿತ್ಯನಾಥ್ ಅವರು ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದ್ದಾರೆ ಎಂಬ ನಂಬಿಕೆ ಹುಟ್ಟುಕೊಂಡಿದೆ.

English summary
With campaigning for Assembly elections in five states going on in full swing, Uttar Pradesh chief minister Yogi Adityanath has emerged as one of most valuable star campaigners not only in the Hindi-speaking states but also in some other as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X