ಎನ್ಐಎ ನೂತನ ಮುಖ್ಯಸ್ಥರಾಗಿ ವೈ. ಸಿ. ಮೋದಿ
ನವದೆಹಲಿ, ಅಕ್ಟೋಬರ್ 30: ರಾಷ್ಟ್ರೀಯ ತನಿಖಾ ದಳ (ಎನ್ಐಎ) ದ ನೂತನ ಮುಖ್ಯಸ್ಥರಾಗಿ ಯೋಗೇಶ್ ಚಂದ್ರ ಮೋದಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ಈ ಹಿಂದೆ ಶರದ್ ಕುಮಾರ್ ಎನ್ಐಎ ಮುಖ್ಯಸ್ಥರಾಗಿದ್ದರು. ಆಗಸ್ಟ್ 5, 2013ರಿಂದ ಶರದ್ ಕುಮಾರ್ ಎನ್ಐಎ ಮುಖ್ಯಸ್ಥರ ಹುದ್ದೆಯನ್ನು ನಿಭಾಯಿಸಿದ್ದರು.

ಇದೀಗ ಅವರ ಸ್ಥಾನಕ್ಕೆ ವೈ.ಸಿ ಮೋದಿ ಆಗಮಿಸಿದ್ದಾರೆ. 33 ವರ್ಷಗಳ ಅನುಭವ ಇರುವ ಮೋದಿ 10 ವರ್ಷಗಳ ಕಾಲ ಸಿಬಿಐನಲ್ಲಿ ಕೆಲಸ ಮಾಡಿದ್ದಾರೆ. ಗೂಢಚರ್ಯೆ, ತನಿಖೆ ಮತ್ತು ಕಾರ್ಯಾಚರಣೆಗಳಲ್ಲಿ ಸಾಕಷ್ಟು ಪಳಗಿದ ವ್ಯಕ್ತಿ ವೈಸಿ ಮೋದಿ.
ಅಸ್ಸಾಂ ಮತ್ತು ಮೇಘಾಲಯದಲ್ಲಿ ಮೋದಿ ಎಸ್ಪಿ, ಡಿಐಜಿ, ಎಡಿಜಿಪಿ ಹುದ್ದೆಗಳನ್ನು ನಿಭಾಯಿಸಿದ್ದರು. ಈ ವೇಳೆ ಉಗ್ರ ನಿಗ್ರಹ ಕಾರ್ಯಾಚರನೆ ಸೇರಿದಂತೆ ಹಲವು ವಲಯಗಳಲ್ಲಿ ಉತ್ತಮ ಅನುಭವ ಗಿಟ್ಟಿಸಿಕೊಂಡಿದ್ದರು ಮೋದಿ. ನಂತರ ಕೇಂದ್ರ ಸೇವೆಗೆ ನಿಯೋಜನೆಗೊಂಡಿದ್ದರು.
ಎನ್ಐಎ ಮುಖ್ಯಸ್ಥರಾಗುವ ಮೊದಲು ವೈಸಿ ಮೋದಿ ಸಿಬಿಐ ಹೆಚ್ಚುವರಿ ನಿರ್ದೇಶಕರಾಗಿದ್ದರು. 2001 ಪೊಲೀಸ್ ಮೆಡಲ್ ಹಾಗೂ 2008ರಲ್ಲಿ ರಾಷ್ಟ್ರಪತಿಗಳ ಪದಕವನ್ನೂ ಅವರು ಪಡೆದುಕೊಂಡಿದ್ದಾರೆ.












Click it and Unblock the Notifications