Twitter Down: ಒಂದೇ ದಿನದಲ್ಲಿ ಮೂರನೇ ಬಾರಿ 'X' ಡೌನ್; ಪೋಸ್ಟ್ ಮಾಡಲು ಆಗುತ್ತಿಲ್ಲ ಎಂದ ಬಳಕೆದಾರರು

ಮೈಕ್ರೋಬ್ಲಾಗಿಂಗ್ ವೇದಿಕೆಯಾಗಿರುವ ಟ್ವಿಟರ್ ಅಥವಾ ಎಕ್ಸ್ ಸೋಮವಾರ ಬಳಕೆದಾರರ ತಾಳ್ಮೆಯನ್ನು ಪರೀಕ್ಷೆ ಮಾಡಿದೆ. ಒಂದೇ ದಿನ ಮೂರನೇ ಬಾರಿ ಎಕ್ಸ್ ಡೌನ್ ಆಗಿದ್ದು, ಬಳಕೆದಾರರು ಪರದಾಡುವಂತಾಗಿದೆ. ವಿಶ್ವದಾದ್ಯಂತ ಎಕ್ಸ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ದೂರಿದ್ದಾರೆ.

ಡೌನ್ ಡೆಕ್ಟರ್ ವರದಿ ಮಾಡಿರುವ ಪ್ರಕಾರ, ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಮೊದಲನೇ ಬಾರಿ ಸಮಸ್ಯೆ ಎದುರಿಸಿತು, ಬಳಕಿಕ ಸಂಜೆ 7 ಗಂಟೆಗೆ ಮತ್ತೊಮ್ಮೆ ಡೌನ್ ಆಗಿದ್ದರೆ, ರಾತ್ರಿ 8.44ಕ್ಕೆ ಮೂರನೇ ಬಾರಿ ಎಕ್ಸ್ ಡೌನ್ ಆಗಿದ್ದರಿಂದ ಬಳಕೆದಾರರಿಗೆ ಸಮಸ್ಯೆಯಾಗಿದೆ. ಹಲವು ಕಡೆಗಳಲ್ಲಿ ಜನ ಎಕ್ಸ್ ಬಳಕೆ ಮಾಡಲು ಸಾಧ್ಯವಾಗಲಿಲ್ಲ.

X twitter down global outage third time in day

ಯುಎಸ್, ಭಾರತ, ಯುಕೆ, ಆಸ್ಟ್ರೇಲಿಯಾ ಮತ್ತು ಕೆನಡಾ ಸೇರಿದಂತೆ ಪ್ರಮುಖ ದೇಶಗಳ ಬಳಕೆದಾರರು ಸಮಸ್ಯೆ ಎದುರಿಸಿದ್ದಾರೆ. ಜಾಗತಿಕವಾಗಿ 40,000 ಕ್ಕೂ ಹೆಚ್ಚು ಬಳಕೆದಾರರು ಸೇವಾ ಅಡಚಣೆಗಳ ದೂರುಗಳನ್ನು ದಾಖಲಿಸಿದ್ದಾರೆ. ಶೇಕಡಾ 56 ರಷ್ಟು ಬಳಕೆದಾರರು ಅಪ್ಲಿಕೇಶನ್‌ನಲ್ಲಿಯೇ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ ಎಂದು ಡೌನ್‌ಡೆಕ್ಟರ್ ವರದಿ ಮಾಡಿದೆ, ಆದರೆ ಶೇಕಡಾ 33 ರಷ್ಟು ಜನರು ವೆಬ್‌ಸೈಟ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇನ್ನೂ ಶೇಕಡಾ 11 ರಷ್ಟು ಜನರು ಸರ್ವರ್ ಸಂಪರ್ಕಗಳಲ್ಲಿ ತೊಂದರೆಯಾಗಿದೆ ಎಂದು ದೂರು ಕೊಟ್ಟಿದ್ದಾರೆ.

ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಂತಹ ಮತ್ತೆರಡು ಜನಪ್ರಿಯ ಸೋಷಿಯಲ್ ಮೀಡಿಯಾಗಳಲ್ಲಿ ಎಕ್ಸ್ ಡೌನ್ ಆಗಿರುವ ವಿಚಾರವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅಪ್ಲಿಕೇಶನ್ ಸರಿಯಾಗಿ ಕೆಲಸ ಮಾಡದ ಕಾರಣ ಸಮಸ್ಯೆಯನ್ನು ವರದಿ ಮಾಡಲು ಕೂಡ ಬಳಕೆದಾರರಿಗೆ ಸಾಧ್ಯವಾಗುತ್ತಿಲ್ಲ.

ಸತತ ಮೂರನೇ ಬಾರಿ ಸಮಸ್ಯೆ ಕಾಣಿಸಿಕೊಂಡರೂ ಈ ಬಗ್ಗೆ ಎಕ್ಸ್‌ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಒಂದೇ ದಿನ ಪದೇ ಪದೇ ಸಮಸ್ಯೆಯಾಗುತ್ತಿರುವುದು ಬಳಕೆದಾರರ ಬೇಸರಕ್ಕೆ ಕಾರಣವಾಗಿದೆ. ಎಕ್ಸ್ ತನ್ನ ಕಡೆಯಿಂದ ಸಮಸ್ಯೆಯಾಗಿದೆ ಎನ್ನುವುದನ್ನು ಒಪ್ಪಿಕೊಂಡಿಲ್ಲವಾದರೂ ಬಳಕೆದಾರರು ಮಾತ್ರ ವರದಿ ಮಾಡುತ್ತಲೇ ಇದ್ದಾರೆ.

ಟೆಸ್ಲಾ ಸಂಸ್ಥೆಯ ಮುಖ್ಯಸ್ಥ, ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ 2022ರಲ್ಲಿ ಟ್ವಿಟರ್ ಸಂಸ್ಥೆಯನ್ನು $44 ಬಿಲಿಯನ್‌ಗೆ ಸ್ವಾಧೀನಪಡಿಸಿಕೊಂಡಿದ್ದರು. ಬಳಿಕ ಟ್ವಿಟರ್ ಹೆಸರನ್ನು ಎಕ್ಸ್ ಎಂದು ಬದಲಾಯಿಸಿದ್ದರು. ಎಲಾನ್ ಮಸ್ಕ್ ಬಂದ ಬಳಿಕ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಹಣ ಗಳಿಕೆಗೂ ಕೂಡ ಬಳಕೆದಾರರಿಗೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಚಂದಾದಾರಿಕೆಯನ್ನು ಪರಿಚಯಿಸಿದ್ದು ಪ್ರೀಮಿಯಮ್ ಸೇವೆಗಳನ್ನು ನೀಡಲಾಗುತ್ತದೆ. ಜಾಹೀರಾತನ್ನು ಕೂಡ ಎಕ್ಸ್‌ನಲ್ಲಿ ಪರಿಚಯಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+