Get Updates
Get notified of breaking news, exclusive insights, and must-see stories!

ಇದು ರಾಜಕೀಯ ಪ್ರೇರಿತ ಪ್ರತಿಭಟನೆಯಲ್ಲ, ಕುಸ್ತಿಪಟುಗಳು ಒಂದಾಗದ ಕಾರಣ ಇಷ್ಟು ದಿನ ಮೌನ:ಸಾಕ್ಷಿ ಮಲಿಕ್

ನವದೆಹಲಿ, ಜೂನ್. 18: ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಮತ್ತು ಅವರ ಪತಿ ಸತ್ಯವರ್ತ್ ಕದಿಯನ್ ಶನಿವಾರ ತಮ್ಮ ಪ್ರತಿಭಟನೆಯು ರಾಜಕೀಯ ಪ್ರೇರಿತವಲ್ಲ, ಕುಸ್ತಿ ಪಟುಗಳು ಮೊದಲು ಒಂದಾಗದ ಕಾರಣ ಕಿರುಕುಳವನ್ನು ಎದುರಿಸುತ್ತಿದ್ದರೂ ಅವರು ವರ್ಷಗಳ ಕಾಲ ಮೌನವಾಗಿದ್ದರು ಎಂದು ವಿಡಿಯೋ ಮೂಲಕ ಹೇಳಿದ್ದಾರೆ.

ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಸತ್ಯವರ್ತ್ ಕದಿಯನ್ ತಮ್ಮ ಪ್ರತಿಭಟನೆಯ ಸುತ್ತ ಸುಳ್ಳು ನಿರೂಪಣೆಯನ್ನು ಹೆಣೆಯಲಾಗುತ್ತಿದೆ ಹೀಗಾಗಿ ಅದಕ್ಕೆ ಸ್ಪಷ್ಟನೆ ಕೊಡಲು ಬಯಸುತ್ತಿರುವುದಾಗಿ ಹೇಳಿದ್ದಾರೆ. ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ದೇಶದ ಅಗ್ರ ಕುಸ್ತಿಪಟುಗಳು, ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಆರೋಪಿಸಿದ್ದಾರೆ.

Wrestlers protest was not politically motivated: Sakshee Malikkh

ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಜಮ್ಮು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದರು. ಮೇ 28 ರಂದು ಜಂತರ್ ಮಂತರ್‌ನಿಂದ ಕುಸ್ತಿಪಟುಗಳನ್ನು ಹೊರಹಾಕಲಾಗಿದೆ.

ತಮ್ಮ ಪ್ರತಿಭಟನೆಯ ಬಗ್ಗೆ ವದಂತಿಗಳನ್ನು ಹರಡಲಾಗುತ್ತಿದೆ ಎಂದು ಸಾಕ್ಷಿ ಮಲಿಕ್ ಅವರ ಪಕ್ಕದಲ್ಲಿ ಕುಳಿತಿರುವ ಸತ್ಯವರ್ತ್ ಕದಿಯನ್ ಹೇಳಿದ್ದಾರೆ. "ನಮ್ಮ ಪ್ರತಿಭಟನೆಯು ರಾಜಕೀಯ ಪ್ರೇರಿತವಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ. ನಾವು ಜನವರಿಯಲ್ಲಿ (ಜಂತರ್ ಮಂತರ್‌ಗೆ) ಬಂದಿದ್ದೇವೆ. ಇಬ್ಬರು ಬಿಜೆಪಿ ನಾಯಕರು ಪೊಲೀಸ್ ಅನುಮತಿ ಕೋರಿ ಅನುಮತಿ ತೆಗೆದುಕೊಂಡಿದ್ದೇವೆ" ಎಂದು ಸತ್ಯವರ್ತ್ ಕದಿಯನ್ ಹೇಳಿದ್ದು, ಪ್ರತಿಭಟನೆಗೆ ಅನುಮತಿ ಕೋರಿದ್ದ ಪತ್ರವನ್ನು ತೋರಿಸಲು ಸಾಕ್ಷೀ ಮಲಿಕ್ ಅವರಿಗೆ ತಿಳಿಸಿದ್ದಾರೆ.

ಇದನ್ನು ಮಾಜಿ ಕುಸ್ತಿಪಟು ಬಬಿತಾ ಫೋಗಟ್ ಮತ್ತು ತೀರತ್ ರಾಣಾ ಬರೆದಿದ್ದಾರೆ, ಇಬ್ಬರೂ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ.

Wrestlers protest was not politically motivated: Sakshee Malikkh

"ಪ್ರತಿಭಟನೆ ಕಾಂಗ್ರೆಸ್ ಬೆಂಬಲಿತವಾಗಿಲ್ಲ. ಕಳೆದ 10-12 ವರ್ಷಗಳಿಂದ ಇದು (ಕಿರುಕುಳ ಮತ್ತು ಬೆದರಿಕೆ) ನಡೆಯುತ್ತಿದೆ ಎಂದು 90 ಪ್ರತಿಶತಕ್ಕೂ ಹೆಚ್ಚು ಜನರಿಗೆ ತಿಳಿದಿತ್ತು. ಕೆಲವರು ಧ್ವನಿ ಎತ್ತಲು ಬಯಸಿದ್ದರು ಆದರೆ ಕುಸ್ತಿ ಭ್ರಾತೃತ್ವ ಒಗ್ಗಟ್ಟಾಗಿರಲಿಲ್ಲ. ತಮ್ಮ ಹೋರಾಟ ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧವೇ ಹೊರತು ಸರ್ಕಾರದ ವಿರುದ್ಧ ಅಲ್ಲ" ಎಂದು ಪುನರುಚ್ಚರಿಸಿದ್ದಾರೆ.

ಕುಸ್ತಿಪಟುಗಳು ಒಗ್ಗಟ್ಟಾಗದ ಕಾರಣ ಅವರು ವರ್ಷಗಳ ಕಾಲ ಮೌನವಾಗಿದ್ದರು ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ. "ಅಪ್ರಾಪ್ತ ವಯಸ್ಕರು ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿರುವುದನ್ನು ನೀವು ನೋಡಿದ್ದೀರಿ. ಆಕೆಯ ಕುಟುಂಬವು ಬೆದರಿದೆ. ಈ ಕುಸ್ತಿಪಟುಗಳು ಬಡ ಕುಟುಂಬದಿಂದ ಬಂದವರು. ಶಕ್ತಿಯುತ ವ್ಯಕ್ತಿಯನ್ನು ಎದುರಿವುದು ಸುಲಭವಲ್ಲ" ಎಂದು ಅಸಮಾಧಾನ ಹೊರಹಾಕಿದ್ದಾರೆ.

ಮೇ 28 ರಂದು ಕುಸ್ತಿಪಟುಗಳು ಅನುಮತಿಯಿಲ್ಲದೆ ಹೊಸ ಸಂಸತ್ ಭವನದ ಕಡೆಗೆ ಮೆರವಣಿಗೆ ನಡೆಸಿದ ಕಾರಣ ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. 'ಮಹಿಳಾ ಸಮ್ಮಾನ್ ಮಹಾಪಂಚಾಯತ್' ಕರೆಯನ್ನು ಖಾಪ್ ನಾಯಕರು ಮಾಡಿದ್ದಾರೆ. ನಾವು ಅವರ ಆದೇಶವನ್ನು ಅನುಸರಿಸಿದ್ದೇವೆ ಮತ್ತು ಪೊಲೀಸ್ ದೌರ್ಜನ್ಯವನ್ನು ಎದುರಿಸಿದ್ದೇವೆ ಎಂದು ನಾನು ಸ್ಪಷ್ಟಪಡಿಸುತ್ತೇನೆ. ಅದು ನಮ್ಮನ್ನು ಮತ್ತಷ್ಟು ನೋವಿಗೆ ದೂಡಿತು ಎಂದಿದ್ದಾರೆ.

"ನಾವು ದೇಶಕ್ಕಾಗಿ ಹಲವಾರು ಪದಕಗಳನ್ನು ಗೆದ್ದಿದ್ದೇವೆ ಮತ್ತು ನಮ್ಮ ಘನತೆಗೆ ಧಕ್ಕೆಯಾಗುತ್ತಿದೆ, ನಾವು ಏನನ್ನು ಅನುಭವಿಸಿದ್ದೇವೆ ಎಂಬುದನ್ನು ನಾನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನಾವು ನಂತರ (ಹರಿದ್ವಾರ) ಪದಕಗಳನ್ನು ಮುಳುಗಿಸಲು ನಿರ್ಧರಿಸಿದ್ದೇವು. ಆದರೆ ವ್ಯವಸ್ಥೆಯ ಒಬ್ಬ ವ್ಯಕ್ತಿ ಬಜರಂಗ್‌ನ ತೋಳನ್ನು ಹಿಡಿದು ಒಂದು ಮೂಲೆಗೆ ಕರೆದೊಯ್ದು ಅನೇಕ (ಪ್ರಭಾವಿ) ಜನರೊಂದಿಗೆ ಮಾತನಾಡುವಂತೆ ಮಾಡಿದ್ದಾರೆ. ನಾವು ಪದಕಗಳನ್ನು ತರಬೇತುದಾರರು ಮತ್ತು ಪೋಷಕರಿಗೆ ನೀಡಿದ್ದೇವೆ" ಎಂದಿದ್ದಾರೆ.

"ಆ ಘಟನೆಯ ನಂತರ, ನಮ್ಮ ಪರವಾಗಿ ಯಾರು, ವ್ಯವಸ್ಥೆಯ ಭಾಗವಾಗಿ ಯಾರಿದ್ದಾರೆ ಎಂದು ನಮಗೆ ತಿಳಿದಿಲ್ಲ, ನಾವು ಬಹಳಷ್ಟು ಜನರನ್ನು ಭೇಟಿಯಾದೆವು ಆದರೆ ಯಾರನ್ನು ನಂಬಬೇಕೆಂದು ನಮಗೆ ತಿಳಿದಿರಲಿಲ್ಲ, ನಮಗೆ ಗೃಹ ಸಚಿವರನ್ನು ಭೇಟಿ ಮಾಡಲು ಸಲಹೆ ನೀಡಲಾಯಿತು. ಅಲ್ಲಿಂದ ನಮಗೆ ನ್ಯಾಯ ಸಿಗುತ್ತದೆ ಎಂದರು. ಖಾಪ್‌ಗಳು ತಮ್ಮ ಮೇಲೆ ಕೋಪಗೊಂಡಿದ್ದಾರೆ ಎಂದು ಹಳಲಾಯಿತು. ಆದರೆ, ವದಂತಿಗಳನ್ನು ನಂಬಬೇಡಿ" ಎಂದು ಮನವಿ ಮಾಡಿದ್ದಾರೆ.

11 ನಿಮಿಷಗಳ ಸುದೀರ್ಘ ವೀಡಿಯೊದ ಕೊನೆಯಲ್ಲಿ "ನಾವು ಏನಾದರೂ ತಪ್ಪು ಮಾಡಿದ್ದರೆ, ನಾವು ಕ್ಷಮೆಯಾಚಿಸುತ್ತೇವೆ" ಎಂದು ವಿಜೇತೆ ಸಾಕ್ಷಿ ಮಲಿಕ್ ಮತ್ತು ಅವರ ಪತಿ ಸತ್ಯವರ್ತ್ ಕದಿಯನ್ ಹೇಳಿದ್ದು, ಅವರಿಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+