ವಿಶ್ವದ ಮೊದಲ ಬಿದಿರು ರಸ್ತೆ ತಡೆಗೋಡೆ ಸ್ಥಾಪನೆ, ಎಲ್ಲಿ ಗೊತ್ತಾ?

ಇದು ದೇಶ ಮತ್ತು ಬಿದಿರು ವಲಯದಲ್ಲಿ ಮಹತ್ವದ ಸಾಧನೆ. ಈ ಕ್ರ್ಯಾಶ್ ಬ್ಯಾರಿಯರ್ ಉಕ್ಕಿನ ತಡೆಗೋಡೆಗೆ ಪರ್ಯಾಯವಾಗಲಿದೆ ಮತ್ತು ಪರಿಸರ ಕಾಳಜಿಯನ್ನು ಪಸರಿಸುತ್ತದೆ.

ಮುಂಬೈ, ಮಾರ್ಚ್‌ 4: ಮಹಾರಾಷ್ಟ್ರದ ಚಂದ್ರಾಪುರ ಮತ್ತು ಯವತ್ಮಾಲ್ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ 200 ಮೀಟರ್ ಉದ್ದದ ಬಿದಿರಿನ ಕ್ರ್ಯಾಶ್ ಬ್ಯಾರಿಯರ್ ಅನ್ನು ಸ್ಥಾಪಿಸಲಾಗಿದೆ. ಇದು ವಿಶ್ವದ ಮೊದಲ ಪ್ರಯೋಗ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶನಿವಾರ ಹೇಳಿದ್ದಾರೆ.

ಇದು ದೇಶ ಮತ್ತು ಬಿದಿರು ವಲಯದಲ್ಲಿ ಮಹತ್ವದ ಸಾಧನೆ. ಈ ಕ್ರ್ಯಾಶ್ ಬ್ಯಾರಿಯರ್ ಉಕ್ಕಿನ ತಡೆಗೋಡೆಗೆ ಪರ್ಯಾಯವಾಗಲಿದೆ ಮತ್ತು ಪರಿಸರ ಕಾಳಜಿಯನ್ನು ಪಸರಿಸುತ್ತದೆ. ವಾಣಿ-ವರೋರಾ ಹೆದ್ದಾರಿಯಲ್ಲಿ ಸ್ಥಾಪಿಸಲಾದ ವಿಶ್ವದ ಮೊದಲ 200 ಮೀಟರ್ ಉದ್ದದ ಬಿದಿರು ಕ್ರಾಶ್ ಬ್ಯಾರಿಯರ್‌ನ ಅಭಿವೃದ್ಧಿಯೊಂದಿಗೆ ಆತ್ಮನಿರ್ಭರ ಭಾರತವನ್ನು ಸಾಧಿಸುವ ನಿಟ್ಟಿನಲ್ಲಿ ಅಸಾಧಾರಣ ಸಾಧನೆ ಮಾಡಲಾಗಿದೆ ಎಂದು ಗಡ್ಕರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

worlds first bamboo crash road barrier Installed, do you know where?

ಈ ಬಿದಿರಿನ ಕುಸಿತ ತಡೆಗೋಡೆಗೆ "ಬಹು ಬಲ್ಲಿ" ಎಂದು ನಾಮಕರಣ ಮಾಡಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ತಿಳಿಸಿದ್ದಾರೆ. ಇದು ಇಂದೋರ್‌ನ ಪಿತಾಂಪುರ್‌ನಲ್ಲಿರುವ ರಾಷ್ಟ್ರೀಯ ಆಟೋಮೋಟಿವ್ ಟೆಸ್ಟ್ ಟ್ರ್ಯಾಕ್ಸ್ (NATRAX) ನಂತಹ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಕಠಿಣ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೆ ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CBRI) ನಲ್ಲಿ ನಡೆಸಿದ ಅಗ್ನಿಶಾಮಕ ರೇಟಿಂಗ್ ಪರೀಕ್ಷೆಯಲ್ಲಿ 1ನೇ ದರ್ಜೆ ಎಂದು ರೇಟ್ ಮಾಡಲಾಗಿದೆ. ಹೆಚ್ಚುವರಿಯಾಗಿ ಇದು ಇಂಡಿಯನ್ ರೋಡ್ ಕಾಂಗ್ರೆಸ್ನಿಂದ ಮಾನ್ಯತೆ ಪಡೆದಿದೆ ಎಂದು ಸಚಿವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಬಿದಿರಿನ ತಡೆಗೋಡೆಗಳ ಮರುಬಳಕೆಯ ಮೌಲ್ಯವು ಶೇಕಡಾ 50-70 ರಷ್ಟಿದ್ದರೆ, ಉಕ್ಕಿನ ತಡೆಗೋಡೆಗಳು ಶೇಕಡಾ 30-50 ರಷ್ಟಿದೆ. ಈ ತಡೆಗೋಡೆಯ ತಯಾರಿಕೆಯಲ್ಲಿ ಬಳಸಿದ ಬಿದಿರಿನದು ಬಂಬುಸಾ ಬಾಲ್ಕೋವಾ ಜಾತಿ. ಇದನ್ನು ಕ್ರಿಯೋಸೋಟ್ ಎಣ್ಣೆಯಿಂದ ಸಂಸ್ಕರಿಸಲಾಗಿದೆ ಮತ್ತು ಮರುಬಳಕೆಯ ಹೈ-ಡೆನ್ಸಿಟಿ ಪಾಲಿ ಎಥಿಲೀನ್ (ಎಚ್‌ಡಿಪಿಇ) ಯಿಂದ ಲೇಪಿಸಲಾಗಿದೆ.

worlds first bamboo crash road barrier Installed, do you know where?

ಈ ಸಾಧನೆಯು ಬಿದಿರು ವಲಯ ಮತ್ತು ಒಟ್ಟಾರೆಯಾಗಿ ಭಾರತಕ್ಕೆ ಮಹತ್ವದ್ದಾಗಿದೆ. ಈ ಕ್ರ್ಯಾಶ್ ಬ್ಯಾರಿಯರ್ ಉಕ್ಕಿಗೆ ಪರಿಪೂರ್ಣ ಪರ್ಯಾಯವನ್ನು ನೀಡುತ್ತದೆ ಮತ್ತು ಪರಿಸರ ಕಾಳಜಿ ಮತ್ತು ಅವುಗಳ ಪರಿಣಾಮಗಳನ್ನು ತಿಳಿಸುತ್ತದೆ. ಇದಲ್ಲದೆ ಇದು ಸ್ವತಃ ಗ್ರಾಮೀಣ ಮತ್ತು ಕೃಷಿ ಸ್ನೇಹಿ ಉದ್ಯಮವಾಗಿದೆ. ಇದು ಇನ್ನಷ್ಟು ಮಹತ್ವದ ಮೈಲಿಗಲ್ಲು ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+