World Health Day 2025: ಭಾರತದಲ್ಲಿ ಮಹಿಳಾ ಆರೋಗ್ಯಕ್ಕೆ ಆದ್ಯತೆ: ಗುಡ್‌ನ್ಯೂಸ್ ಕೊಟ್ಟ ಕೇಂದ್ರ ಸಚಿವಾಲಯ

World Health Day 2025: ವಿಶ್ವ ಆರೋಗ್ಯ ದಿನವನ್ನು ನಾವು ಪ್ರತಿ ವರ್ಷ ಏಪ್ರಿಲ್ 7 ಆಚರಿಸುತ್ತೇವೆ. ಜಾಗತಿಕ ಆರೋಗ್ಯ ಸಮಸ್ಯೆ, ಪರಿಹಾರ, ಸಾರ್ವಜನಿಕವಾಗಿ ಆರೋಗ್ಯದ ಸ್ಥಿತಿಗತಿ, ಫಲಿತಾಂಶಗಳನ್ನು ಈ ದಿನ ಎತ್ತಿ ತೋರಿಸಲಾಗುತ್ತದೆ. ಪರಿಹಾರ ಕ್ರಮ ಸಹ ಕೈಗೊಳ್ಳಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) 1950ರಲ್ಲಿ ಮೊದಲ ಬಾರಿಗೆ ಈ ದಿನಾಚರಣೆ ಆಚರಿಸಿದೆ. ಭಾರತದಲ್ಲಿ ಇದೇ ದಿನ ಗುಡ್ ನ್ಯೂಸ್‌ ಸಿಕ್ಕಿದೆ. ತಾಯಂದಿರ ಆರೋಗ್ಯ, ತಾಯಂದಿರು, ಮಕ್ಕಳ ಮರಣ ಪ್ರಮಾಣ ಇಳಿಕೆಯ ಮಹತ್ವದ ಅಪ್ಡೇಟ್ ಇಲ್ಲಿದೆ.

ಆರೋಗ್ಯ ವಲಯದಲ್ಲಿನ ಏರು ಪೇರು ಗಮನಿಸಿ ಇದೇ ದಿನದಂದು ಪ್ರತಿ ವರ್ಷ ನಿರ್ಣಾಯಕ ಆರೋಗ್ಯ ಆದ್ಯತೆಗಳತ್ತ ಸರ್ಕಾರಗಳು, ಆರೋಗ್ಯ ಸಂಸ್ಥೆಗಳು ಹಾಗೂ ಸಮುದಾಯಗಳ ಗಮನಹರಿಸುತ್ತವೆ. ಪರಿಹಾರ ಕಾರ್ಯಕ್ಕೆ ಮುಂದಾಗುತ್ತವೆ.

World Health Day 2025 Maternal Mortality Ratio and Infant Moratality Rate Reduce Latest Data

ಕೇಂದ್ರ ಸರ್ಕಾರವು ಈ ವರ್ಷ (2025) ''ಆರೋಗ್ಯಕರ ಆರಂಭಗಳು, ಭರವಸೆಯ ಭವಿಷ್ಯಗಳು" ಎಂಬ ವಿಷಯ ತಾಯಂದಿರು ಮತ್ತು ನವಜಾತ ಶಿಶುಗಳ ಆರೋಗ್ಯದ ಮೇಲೆ ಕೇಂದ್ರೀಕರಿಸುವಂತೆ ಒಂದು ವರ್ಷದ ಅಭಿಯಾನವ ಆಂಭಿಸುತ್ತಿದೆ. ಮಹಿಳೆಯರ ಆರೋಗ್ಯ, ದೀರ್ಘಕಾಲದ ಯೋಗ ಕ್ಷೇಮ, ಸಾವುಗಳ ತಡೆ, ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಗಮನ ವಹಿಸಬೇಕು.

ಸದ್ಯ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ತಾಯಂದಿರ ಮರಣ ಪ್ರಮಾಣ, ಶಿಶು ಮರಣ ಪ್ರಮಾಣ ಇಳಿಕೆ ಆಗಿದೆ. ಯಾವೆಲ್ಲ ವರ್ಷದಲ್ಲಿ ಎಷ್ಟು ಇತ್ತು? ಇಳಿಕೆ ಪ್ರಮಾಣದ ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ಅಂಕಿ ಸಂಖ್ಯೆಗಳು ಇಲ್ಲಿದೆ.

World Health Day 2025 Maternal Mortality Ratio and Infant Moratality Rate Reduce Latest Data

ತಾಯಂದಿರ ಮರಣ ಪ್ರಮಾಣ: ಮಹಿಳಾ ಆರೋಗ್ಯ

* ತಾಯಂದಿರ ಮರಣ ಅನುಪಾತ (MMR) ಭಾರತದಲ್ಲಿ 1,00,000 ಜನನಕ್ಕೆ 2014-16ರಲ್ಲಿ 130 ಇತ್ತು. ಅದೀಗ 2018-20ರ ಹೊತ್ತಿಗೆ 97 ಕ್ಕೆ ಇಳಿಕೆ ಆಗಿದೆ 33 ಅಂಕ ಕುಸಿತ ಕಂಡಿದೆ. ಇದಕ್ಕೆ ಆರೋಗ್ಯ ವಯದಲ್ಲಿನ ಸುಧಾರಣೆ, ಆರೋಗ್ಯ ಮೂಲ ಸೌಕರ್ಯ ಕಾರಣವಾಗಿದೆ.

* ದೇಶದಲ್ಲಿ ಇಳೆದ ಮೂರು ದಶಕಗಳಲ್ಲಿ (1990ರಿಂದ 2020ರ 30 ವರ್ಷ) ತಾಯಂದಿರ ಮರಣ ಪ್ರಮಾಣ ಶೇಕಡಾ 83ರಷ್ಟು ಇಳಿಕೆ ಅಗಿದೆ.

Take a Poll

* ಇದನ್ನೆ ಜಾಗತಿಕವಾಗಿ ಹೋಲಿಕೆ ಮಾಡಿದಲ್ಲಿ ಎಂಎಂಆರ್ ಪ್ರಮಾಣ ಶೇಕಡಾ 42ರಷ್ಟು ಇಳಿಕೆ ಆಗಿದೆ.

ಶಿಶು ಮತ್ತು ಮಕ್ಕಳ ಮರಣ ಪ್ರಮಾಣ ವಿವರ

* ಶಿಶು ಮರಣ ದರ (IMR) 1,000 ಜನನಗಳಿಗೆ 2014ರಲ್ಲಿ 39 ಮರಣ ಸಂಖ್ಯೆ 2020ರಲ್ಲಿ ಅದು 28 ಕ್ಕೆ ಇಳಿಕೆ ಆಗಿದೆ.

* ನವಜಾತ ಶಿಶು ಮರಣ ದರ (NMR) 1,000 ಜೀವಂತ ಜನನಗಳಿಗೆ 2014ರಲ್ಲಿದ್ದ 26 ಪ್ರಮಾಣ 2020ರ ಹೊತ್ತಿಗೆ 20 ಕ್ಕೆ ಇಳಿಕೆ ಆಗಿದೆ.

* 5 ವರ್ಷದೊಳಗಿನ ಮರಣ ದರ (U5MR) 1,000 ಜೀವಂತ ಜನನಗಳಿಗೆ 2014 ರಲ್ಲಿ 45 ರಷ್ಟಿದ್ದ ಪ್ರಮಾಣ 2020ಕ್ಕೆ 32 ಕ್ಕೆ ಕುಸಿತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಭಾರತದ ಆರೋಗ್ಯ ವಲಯದಲ್ಲಿ ಬದಲಾವಣೆ

ಭಾರತದ ಆರೋಗ್ಯ ವಲಯದಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಗುಣಮಟ್ಟದ ಆರೋಗ್ಯ ಸೌಕರ್ಯ ಹೆಚ್ಚಿಸಲು ಬದ್ಧವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶದದಲ್ಲಿ 'ಆಯುಷ್ಮಾನ್ ಭಾರತ್', 'ರಾಷ್ಟ್ರೀಯ ಆರೋಗ್ಯ ಮಿಷನ್‌ ' ಹಾಗೂ ಇತರ ಆರೋಗ್ಯ ಉಪಕ್ರಮಗಳಡಿ ಗಮನಾರ್ಹ ಬೆಳವಣಿಗೆ ಸಾಧಿಸಲಾಗಿದೆ. ಇದರಿಂದಾಗಿ ತಾಯಂದಿರು ಮತ್ತು ಮಕ್ಕಳ ಆರೋಗ್ಯ ಉತ್ತಮ ಹಾದಿ ಹಿಡಿದೆ. ಡಿಜಿಟಲ್ ಆರೋಗ್ಯ ಪ್ರವೇಶ ವಿಸ್ತರಣೆ ಮಾಡಿದ್ದಲ್ಲದೇ ಆರೋಗ್ಯ ಮೂಲಸೌಕರ್ಯ ಮತ್ತು ಸೇವೆ ಹೆಚ್ಚಿಸಲಾಗಿದೆ.

World Health Day 2025 Maternal Mortality Ratio and Infant Moratality Rate Reduce Latest Data

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅನೇಕ ಉಪಕ್ರಮ ಹಾಗೂ ಕಾರ್ಯಕ್ರಮ ಹಾಕಿಕೊಂಡಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆಗೆ, ವ್ಯವಸ್ಥೆ ಸುಧಾರಣೆಗೆ ಶ್ರಮಿಸುತ್ತಿದೆ. ಇದರಡಿ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಪ್ರಮುಖ ಪಾತ್ರ ವಹಿಸಿದೆ. ಇದೆಲ್ಲದರ ಕೊಡುಗೆಯಾಗಿ ಮಹಿಳಾ ಆರೋಗ್ಯದಲ್ಲಿ, ತಾಯಂದಿರು ಮತ್ತು ಮಕ್ಕಳ ಜೀವ ರಕ್ಷಣೆಯಲ್ಲಿ ಭಾರತದ ಪ್ರಗತಿ ಸಾಧಿಸಿದೆ ಎಂದು ಡೇಟಾ ಮಾಹಿತಿ ನೀಡಿದೆ.

ತಾಯಂದಿರ ಆರೋಗ್ಯ ರಕ್ಷಣೆ ಕ್ರಮಗಳ ಪಟ್ಟಿ

* ತಾಯಂದಿರ ಮರಣ ಕಣ್ಗಾವಲು ಮತ್ತು ಪ್ರತಿಕ್ರಿಯೆ (MDSR)ಯಲ್ಲಿ ತಾಯಂದಿರ ಮರಣದ ಕಾರಣಗಳನ್ನು ಗುರುತಿಸಲು ಮತ್ತು ಪ್ರಸೂತಿ ಆರೈಕೆ ಸುಧಾರಿಸಲು ಸೂಕ್ತ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಸಮುದಾಯ ಮಟ್ಟದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

* ತಾಯಿ ಮತ್ತು ಮಕ್ಕಳ ರಕ್ಷಣೆ (MCP) ಕಾರ್ಡ್ ಹಾಗೂ ಸುರಕ್ಷಿತ ಮಾತೃತ್ವ ಕಿರುಪುಸ್ತಕ ಹೊರ ತರಲಾಗಿದೆ. ಮಹಿಳೆ ಗರ್ಭಿಣಿಯಾದ ಸಂದರ್ಭದಲ್ಲಿ ಅವರ ಪಾಲನೆ, ಪೋಷಣೆ, ವಿಶ್ರಾಂತಿ, ಅಪಾಯದ ಚಿಹ್ನೆಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಜಾಗೃತಿ ಮೂಡಿಸುವುವು, ಶಿಕ್ಷಣ ನೀಡವುಂತೆ ಪ್ರೇರೆಪಿಸಲಾಗುತ್ತದೆ. ಜೊತೆಗೆ ಸಾಂಸ್ಥಿಕ ಹೆರಿಗೆಗಳ ಪ್ರಯೋಜನಗಳ ಬಗ್ಗೆ ತಿಳಿಸಲಾಗುತ್ತಿದೆ.

* ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (RCH) ಉಪಕ್ರಮದಡಿ ಗರ್ಭಿಣಿ ಮತ್ತು ನವಜಾತ ಶಿಶುಗಳ ಆರೋಗ್ಯ, ಸಕಾಲಿಕ ಪ್ರಸವಪೂರ್ವ ಹೆರಿಗೆ ಮತ್ತು ಪ್ರಸವಪೂರ್ವ ಆರೈಕೆ ಖಚಿತಪಡಿಸಿಕೊಳ್ಳಲು ಡಿಜಿಟಲ್ ವೇದಿಕೆ ರಚಿಸಲಾಗಿದೆ.

* ರಕ್ತಹೀನತೆಯಿಂದ ಭಾರತ ಮುಕ್ತವಾಗಲಿದೆ. ಪೋಷಣ್ ಅಭಿಯಾನದಡಿ ಹದಿಹರೆಯದವರು ಮತ್ತು ಗರ್ಭಿಣಿಯರಲ್ಲಿ ರಕ್ತಹೀನತೆ ಪರೀಕ್ಷೆ ನಡೆಸಿ, ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತದೆ. ಕಾಯಿಲೇಗಳು ಅಸ್ವಸ್ಥೆ, ಸೂಕ್ತ ಪೋಷಣೆ, ಜಾಗೃತಿ ಮೂಡಿಸುವ ಜೊತೆಗೆ ಈ ಸಂಬಂದಿ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ.

* ಹೆರಿಗೆ ಕಾಯುವ ಮನೆಗಳನ್ನು (ಬಿಡಬ್ಲ್ಯೂಹೆಚ್) ದೂರದ ಪ್ರದೇಶಗಳು, ಬುಡಕಟ್ಟು ವಾಸಿಗಳ ಸ್ಥಳಗಳಲ್ಲಿ ನಿರ್ಮಿಸಲಾಗಿದೆ. ಇದರಿಂದ ಹೆರಿಗೆಗೆ ಸೂಕ್ತ ವ್ಯವಸ್ಥೆ ಸಾಂಸ್ಥಿಕ ಹೆರಿಗೆಗಳನ್ನು ಉತ್ತೇಜಿಸಲಾಗುತ್ತದೆ.

* ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕಾಂಶ ದಿನವನ್ನು ಅಂಗನವಾಡಿ ಕೇಂದ್ರಗಳಲ್ಲಿ ತಿಂಗಳ ಕಾರ್ಯಕ್ರಮದಂತೆ ಆಚರಿಸಲಾಗುತ್ತದೆ. ಎಮ್ಒಡಬ್ಲ್ಯೂಸಿಡಿ ಸಹಯೋಗದೊಂದಿಗೆ ತಾಯಂದಿರು ಹಾಗೂ ಮಕ್ಕಳ ಆರೈಕೆ ಮಾಡಲಾಗುತ್ತದೆ. ಈ ಬಗ್ಗೆ ಕೆಳ ಮಟ್ಟದಲ್ಲಿ ತಿಳಿಸಲಾಗುತ್ತದೆ.

* ಸಂಪರ್ಕ ಶಿಬಿರ ಆಯೋಜನೆ ಮಾಡುವ ಮೂಲಕ ದೂರದ ಬುಡಕಟ್ಟು ಸಮುದಾಯಗಳಿಗೆ, ಕಾಡು ಹಾಗೂ ಕಷ್ಟಕರ ಪ್ರದೇಶಗಳಲ್ಲಿ ಗರ್ಭವಸ್ಥೆಯ ತಾಯಿಗೆ ಆರೋಗ್ಯ ರಕ್ಷಣೆ ನೀಡಲಾಗುತ್ತಿದೆ. ಈ ಸಂಬಂಧ ಜಾಗೃತಿ ಮೂಡಿಸಲು, ಸಮುದಾಯಗಳನ್ನು ಸಜ್ಜುಗೊಳಿಸಲಾಗಿದೆ. ಹೆಚ್ಚಿನ ಅಪಾಯದ ಗರ್ಭಧಾರಣೆ ಸಮಯದಲ್ಲಿ ಸೂಕ್ತ ಮೇಲ್ವಿಚಾರಣೆ ಮಾಡಲು ಶಿಬಿರ ಆಯೋಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+