• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಿಳೆಯರಿಗೆ ಈ ರೋಗವಿದ್ದರೆ ಕೊರೊನಾ ಸೋಂಕು ತಗುಲುವುದು ಗ್ಯಾರಂಟಿ

|

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್‌ನಿಂದ ಬಳಲುತ್ತಿರುವ ಶೇ.50ರಷ್ಟು ಮಹಿಳೆಯರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹಾಗೆಯೇ ಪಿಸಿಒಎಸ್ ಜತೆಗೆ 2 ಟೈಪ್ ಮಧುಮೇಹ ಅಥವಾ ಇನ್ನಿತರೆ ಸಮಸ್ಯೆ ಇದ್ದರೆ ತೊಂದರೆ ಮತ್ತಷ್ಟೂ ತೊಂದರೆ ಹೆಚ್ಚಾಗಲಿದೆ.

ಬರ್ಮಿಂಗ್ಯಾಮ್ ವಿಶ್ವವಿದ್ಯಾಲಯದ ಪ್ರಕಾರ ಜನವರಿಯಿಂದ ಜುಲೈ 2020ರವರೆಗೆ ಪಿಸಿಓಎಸ್‌ಗಳಿಂದ ಬಳಲುತ್ತಿರುವ 21,292 ಮಂದಿ ಮಹಿಳೆಯರಿಗೆ ಕೊರೊನಾ ಸೋಂಕು ತಗುಲಿದೆ.

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಎಂದರೆ ಮಹಿಳೆಯರ ಋತುಚಕ್ರ, ಫಲವತ್ತತೆ, ಹಾರ್ಮೋನುಗಳು ಮತ್ತು ಅವರ ಚಹರೆ ಮೇಲೆ ಪರಿಣಾಮ ಬೀರುವ ಸ್ಥಿತಿಯನ್ನು ಪಿಸಿಒಎಸ್ ಎನ್ನುವರು.

ಇದು ಕೆಲವೊಮ್ಮೆ ಮಹಿಳೆಯರ ಆರೋಗ್ಯದ ಮೇಲೆ ದೀರ್ಘಾವಧಿ ಪರಿಣಾಮ ಸಹ ಬೀರುತ್ತದೆ. ಪ್ರತಿ 100 ಮಹಿಳೆಯರಲ್ಲಿ 26 ವನಿತೆಯರು ಪಿಸಿಒಎಸ್‍ನಿಂದ ನರಳುತ್ತಾರೆ ಎಂದು ಅಂದಾಜು ಮಾಡಲಾಗಿದೆ.

ಅಧಿಕ ರಕ್ತದೊತ್ತಡ, ಹೃದ್ರೋಗ ಸಮಸ್ಯೆಗಳು, ಖಿನ್ನತೆ, ಹತಾಶೆ ಮತ್ತು ಭಾವನೆಗಳ ತೊಯ್ಡಾಟದಂಥ ಇತರ ಸಮಸ್ಯೆಗಳೂ ಕಂಡುಬರುವ ಸಾಧ್ಯತೆ ಇರುತ್ತದೆ.

ಆಹಾರವನ್ನು ನಿಯತವಾಗಿ ಸೇವಿಸಿ, ಬೆಳಗಿನ ಉಪಾಹಾರ ತಪ್ಪಿಸಬೇಡಿ. ನಿಯತವಾಗಿ ವ್ಯಾಯಾಮ ಮಾಡಬೇಕು (ವಾರದಲ್ಲಿ ಕನಿಷ್ಟ ಮೂರು ಬಾರಿ 40 ನಿಮಿಷಗಳು) ನಿಮ್ಮ ತೂಕ ಸಾಮಾನ್ಯ ಮಟ್ಟದಲ್ಲಿ ಇರುವಂತೆ ನೋಡಿಕೊಳ್ಳಬೇಕು.

ಮೊದಲೇ ಕೊರೊನಾ ಸೋಂಕಿಗೆ ಒಳಗಾಗಿದ್ದರೂ ಲಸಿಕೆ ಪಡೆಯಬೇಕೆ?

ಮೊದಲೇ ಕೊರೊನಾ ಸೋಂಕಿಗೆ ಒಳಗಾಗಿದ್ದರೂ ಲಸಿಕೆ ಪಡೆಯಬೇಕೆ?

ಈ ಮೊದಲೇ ಕೊರೊನಾ ಸೋಂಕಿಗೆ ತುತ್ತಾಗಿದ್ದರೂ ಈಗ ಕೊರೊನಾ ಲಸಿಕೆ ಪಡೆಯಬೇಕೆ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಹೌದು ಕೊರೊನಾ ಮತ್ತೊಮ್ಮೆ ಬರಬಾರದು ಅಂತೇನಿಲ್ಲ, ಕೊರೊನಾದಿಂದ ರಕ್ಷಣೆ ಪಡೆಯಲು ಲಸಿಕೆ ಪಡೆಯಬೇಕು ಎಂದು ವೈದ್ಯರು ಹೇಳಿದ್ದಾರೆ.

ಪಾಲಿಸಿಸ್ಟಿಕ್ ಓವರೀಸ್ ಎಂದರೇನು?

ಪಾಲಿಸಿಸ್ಟಿಕ್ ಓವರೀಸ್ ಎಂದರೇನು?

ಪಾಲಿಸಿಸ್ಟಿಕ್ ಓವರೀಸ್(ಬಹುದ್ರವ ಚೀಲಗಳು) ಅಂಡಾಶಯಗಳು ಸಾಮಾನ್ಯ ಅಂಡಾಶಯ ಗಳಿಗಿಂತ ಸ್ವಲ್ಪ ದೊಡ್ಡದಾಗಿರುತ್ತದೆ ಹಾಗೂ ಕಿರು ಚೀಲಗಳ (ಅಂಡಗಳು, ಬೀಜಾಣುಗಳು ಉತ್ಪಾದನೆಯಾದಾಗ ತತ್ತಿಗಳನ್ನು ಬಡುಗಡೆ ಮಾಡುವ ದ್ರವ ತುಂಬಿದ ಸ್ಥಳಗಳು)ಸಂಖ್ಯೆ ಎರಡರಷ್ಟಿರುತ್ತದೆ. ಪಾಲಿಸಿಸ್ಟಿಕ್ ಓವರೀಸ್‍ಗಳನ್ನು ಹೊಂದಿರುವುದು ನೀವು ಪಿಸಿಒಎಸ್ ಹೊಂದಿದ್ದೀರಿ ಎಂದರ್ಥವಲ್ಲ. ಪಿಸಿಒಎಸ್ ಸಮಸ್ಯೆ ಇರುವ ವನಿತೆಯರ ಆ ದೋಷದ ಲಕ್ಷಣಗಳು ಮತ್ತು ಚಿಹ್ನೆಗಳೊಂದಿಗೆ ಬಹುದ್ರವ ಚೀಲಗಳನ್ನೂ ಹೊಂದಿರುತ್ತಾರೆ.

ಪಿಸಿಒಎಸ್ ಚಿಹ್ನೆಗಳು

ಪಿಸಿಒಎಸ್ ಚಿಹ್ನೆಗಳು

ಪಿಸಿಒಎಸ್ ಚಿಹ್ನೆಗಳು ಮತ್ತು ಲಕ್ಷಣಗಳೇನು ? ಅಸಮರ್ಪಕ ಋತುಸ್ರಾವ ಅಥವಾ ಋತುಚಕ್ರ ಇಲ್ಲದಿರುವಿಕೆ ಮುಖ ಅಥವಾ ದೇಹದ ಇತರ ಭಾಗಗಳಲ್ಲಿ ಕೂದಲು ಹೆಚ್ಚಾಗಿರುವಿಕೆ (ಹಿಸುಟಿಸಂ). ತಲೆಯಲ್ಲಿ ಕೂದಲು ಉದುರುವಿಕೆ, ಸ್ಥೂಲಕಾಯ, ಅಥವಾ ಬೊಜ್ಜು. ತೂಕದಲ್ಲಿ ಕ್ಷಿಪ್ರ ಹೆಚ್ಚಳ ಅಥವಾ ತೂಕ ಇಳಿಸುವುದು ಕಷ್ಟವಾಗುವಿಕೆ. ತೈಲ ತ್ವಚ್ಚೆ, ಮೊಡವೆ, ಗುಳ್ಳೆಗಳು, ಗರ್ಭಧಾರಣೆ ಧರಿಸಲು ಕಷ್ಟವಾಗುವಿಕೆ, ಖಿನ್ನತೆ, ಹತಾಶೆ ಮತ್ತು ಮಾನಸಿಕ ಸಮಸ್ಯೆಗಳು

ಪಿಸಿಒಎಸ್‍ಗೆ ಕಾರಣಗಳೇನು?

ಪಿಸಿಒಎಸ್‍ಗೆ ಕಾರಣಗಳೇನು?

ಪಿಸಿಒಎಸ್‍ಗೆ ನಿಖರ ಕಾರಣಗಳೂ ಇನ್ನೂ ತಿಳಿದುಬಂದಿಲ್ಲವಾದರೂ, ಇದಕ್ಕೆ ಅನುವಂಶೀಯತೆ ಕಾರಣ ಇರಬಹುದೆಂದು ತಿಳಿದುಬಂದಿದೆ. ಪುರುಷ ಹಾರ್ಮೋನುಗಳ ಅಧಿಕ ಮಟ್ಟಗಳು ಅಂಡಾಶಯಗಳು ಹಾರ್ಮೋನುಗಳನ್ನು ಉತ್ಪಾದಿಸುವುದಕ್ಕೆ ಅಡ್ಡಿಪಡಿಸುತ್ತವೆ ಹಾಗೂ ಸಾಮಾನ್ಯ ಮೊಟ್ಟೆಗಳನ್ನು ಸೃಷ್ಟಿಸುತ್ತವೆ. ವಂಶವಾಹಿಗಳು, ಇನ್ಸುಲಿನ್ ಪ್ರತಿರೋಧಕತೆ ಹಾಗೂ ಉರಿಯೂತ ಇವೆಲ್ಲ ಕಾರಣಗಳಿಂದ ಅಧಿಕ ಆಂಡ್ರೋಜೆನ್ ಉತ್ಪಾದನೆಯಾಗುತ್ತದೆ.

 ಪಿಸಿಒಎಸ್ ರೋಗನಿರ್ಧಾರ ಹೇಗೆ ?

ಪಿಸಿಒಎಸ್ ರೋಗನಿರ್ಧಾರ ಹೇಗೆ ?

ಮಹಿಳೆಯರ ತೂಕದಲ್ಲಿ ಏರಿಳಿತವಿದ್ದಾಗ. ಪಿಸಿಒಎಸ್ ಹೊಂದಿರುವವರಲ್ಲಿ ಇದರ ಚಿಹ್ನೆ ಮತ್ತು ಲಕ್ಷಣಗಳು ಕಂಡುಬರುತ್ತವೆ ಹಾಗೂ ಹೊರಟು ಹೋಗುತ್ತವೆ. ಇಂಥ ಸಂದರ್ಭದಲ್ಲಿ ಇದರ ರೋಗ ನಿರ್ಧಾರ ಮಾಡುವುದು ಕಷ್ಟವಾಗುತ್ತದೆ. ಅಂದರೆ ರೋಗನಿರ್ಧರಿಸಲು ಕೆಲವು ಕಾಲ ಬೇಕಾಗುತ್ತದೆ. ಈ ಕೆಳಕಂಡವುಗಳಲ್ಲಿ ಯಾವುದೇ ಎರಡು ಲಕ್ಷಣಗಳು/ಚಿಹ್ಹೆಗಳು ಇದ್ದಾಗ ರೋಗನಿರ್ಧಾರ ಮಾಡಲಾಗುತ್ತದೆ.

ಅಸಮರ್ಪಕ ಋತುಸ್ರಾವ ಅಥವಾ ಮಾಸಿಕ ಋತು/ಮುಟ್ಟು ಆಗದಿರುವಿಕೆ , ಮುಖ ಅಥವಾ ದೇಹದ ಭಾಗಗಳಲ್ಲಿ ಕೂದಲು ಹೆಚ್ಚಳ ಹಾಗೂ/ಅಥವಾ ರಕ್ತ ಪರೀಕ್ಷೆಯಲ್ಲಿ ಸಾಮಾನ್ಯ ಮಟ್ಟಕ್ಕಿಂತ ಸ್ವಲ್ಪ ಹೆಚ್ಚು ಪ್ರಮಾಣದ ಟೆಸ್ಟೋಸ್ಟೆರೋನ್ ಮಟ್ಟಗಳು ಇರುವಿಕೆ. ಪಾಲಿಸಿಸ್ಟಿಕ್ ಓವರಿಯನ್ ಮಾಫೆರ್Çೀಲಾಜಿ(ರೂಪ ವಿಜ್ಞಾನ) ದೃಢಪಡಿಸುವ ಆಲ್ಟ್ರಾ ಸೌಂಡ್ ಸ್ಕ್ಯಾನ್ ಫಲಿತಾಂಶ

 ಪಿಸಿಒಎಸ್ ಚಿಕ್ಸಿತೆ ಹೇಗೆ?

ಪಿಸಿಒಎಸ್ ಚಿಕ್ಸಿತೆ ಹೇಗೆ?

ಮಹಿಳೆಯರ ಆರೋಗ್ಯದ ಮೇಲೆ ಪಿಸಿಒಎಸ್ ಹೇಗೆ ದೀರ್ಘ ಪರಿಣಾಮ ಬೀರುತ್ತದೆ ? ಮಹಿಳೆಯರಿಗೆ ಪಿಸಿಓಎಸ್ ಇದ್ದರೆ. ಅದು ಇನ್ಸುಲಿನ್ ಪ್ರತಿರೋಧಕತೆ ಮತ್ತು ಡಯಾಬಿಟಿಸ್‍ನಂಥ ದೀರ್ಘ-ಕಾಲದ ಆರೋಗ್ಯ ಸಮಸ್ಯೆ ಅಭಿವೃದ್ದಿಯಾಗುವ ಸಂಭವಾಂಶ ಹೆಚ್ಚಾಗಿರುತ್ತದೆ. ಗರ್ಭಾವಸ್ಥೆ ಸಂದರ್ಭದಲ್ಲಿ ಡಯಾಬಿಟಿಸ್ ಕಂಡುಬರುವ ಸಾಧ್ಯತೆ ಇರುತ್ತದೆ (ಇದನ್ನು ಜೆಸ್ಟೆಷನಲ್ ಡಯಾಬಿಟಿಸ್ ಎನ್ನುವರು). ಅಲ್ಲದೇ ಸ್ಥೂಲಕಾಯ/ಬೊಜ್ಜು (30ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಾಡಿ ಮಾಸ್ ಇಂಡೆಕ್ಸ್-ಬಿಎಂಐ ಇರುವಿಕೆ). ಅಧಿಕ ರಕ್ತದೊತ್ತಡ, ಹೃದ್ರೋಗ ಸಮಸ್ಯೆಗಳು, ಖಿನ್ನತೆ, ಹತಾಶೆ ಮತ್ತು ಭಾವನೆಗಳ ತೊಯ್ಡಾಟದಂಥ ಇತರ ಸಮಸ್ಯೆಗಳೂ ಕಂಡುಬರುವ ಸಾಧ್ಯತೆ ಇರುತ್ತದೆ.

ಆಹಾರವನ್ನು ನಿಯತವಾಗಿ ಸೇವಿಸಿ, ಬೆಳಗಿನ ಉಪಾಹಾರ ತಪ್ಪಿಸಬೇಡಿ. ನಿಯತವಾಗಿ ವ್ಯಾಯಾಮ ಮಾಡಬೇಕು (ವಾರದಲ್ಲಿ ಕನಿಷ್ಟ ಮೂರು ಬಾರಿ 40 ನಿಮಿಷಗಳು) ನಿಮ್ಮ ತೂಕ ಸಾಮಾನ್ಯ ಮಟ್ಟದಲ್ಲಿ ಇರುವಂತೆ ನೋಡಿಕೊಳ್ಳಬೇಕು.

English summary
The new strain of coronavirus can affect people of all age groups and sex, but some are at a greater risk of contracting the virus. By far we know that older adults, people who are obese, those with compromised immunity
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X