ಮಧ್ಯಪ್ರದೇಶದಲ್ಲಿ ಬುಲ್ಡೋಜರ್‌ನಿಂದ ಅತ್ಯಾಚಾರ ಆರೋಪಿಯ ಮನೆ ನೆಲಸಮಗೊಳಿಸಿದ ಮಹಿಳಾ ಪೊಲೀಸರು

ಮಹಿಳಾ ಪೊಲೀಸರ ಗುಂಪು ಅತ್ಯಾಚಾರ ಆರೋಪಿಯ ಮನೆಯನ್ನು ನೆಲಸಮ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಭೋಪಾಲ್, ಮಾರ್ಚ್ 10: ಉತ್ತರ ಭಾರತದಲ್ಲಿ ಇತ್ತೀಚೆಗೆ ಬುಲ್ಡೋಜರ್‌ಗಳ ಬಳಕೆಗೆ ಹೊಸ ಅರ್ಥವೇ ಜಾರಿಯಾಗಿದೆ. ಬುಲ್ಡೋಜರ್ ನ್ಯಾಯ ಎಂಬಂತಹ ವಾತಾವರಣವೊಂದು ಸೃಷ್ಟಿಯಾಗಿದ್ದು, ಹಲವು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆಯಾಗಿ ಮಧ್ಯಪ್ರದೇಶದಲ್ಲಿ ಮಹಿಳಾ ಪೊಲೀಸರ ಗುಂಪೊಂದು ಅತ್ಯಾಚಾರ ಆರೋಪಿಯ ಮನೆಯ್ನು ಬುಲ್ಡೋಜರ್‌ನಿಂದ ನೆಲಸಮ ಮಾಡಿದ್ದಾರೆ.

ಮಹಿಳಾ ಪೊಲೀಸರ ಗುಂಪು ಅತ್ಯಾಚಾರ ಆರೋಪಿಯ ಮನೆಯನ್ನು ನೆಲಸಮ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಉತ್ತರ ಪ್ರದೇಶದ ಯೋಗಿ ಆದಿತ್ಯನಾರ್ಥ ಸರ್ಕಾರ ಜಾರಿಗೆ ತಂದ ಬುಲ್ಡೋಜರ್ ನ್ಯಾಯ ಪದ್ಧತಿ ಇಲ್ಲೂ ಜಾರಿಯಾದಂತಿದೆ. ಬುಲ್ಡೋಜರ್ ನ್ಯಾಯದ ಸರಣಿಯಲ್ಲಿ ಈ ಘಟನೆ ಮತ್ತೊಂದು ಸೇರ್ಪಡೆಯಾಗಿದೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬುಲ್ಡೋಜರ್ ನ್ಯಾಯ ಪದ್ಧತಿಗೆ ಸಾಕ್ಷಿಯಾಗಿದೆ.

Women Cops Bulldozed Home Of Rape Accused in Madhya Pradesh

ಈ ಮನೆ ನೆಲಸಮ ಮಾಡುವ ತಂಡದ ನೇತೃತ್ವ ವಹಿಸಿದ್ದ ಪೊಲೀಸ್ ಅಧಿಕಾರಿ ಮಾತನಾಡಿ, ಅತ್ಯಾಚಾರ ಮಾಡುವುದು ಅದೊಂದು ಘೋರ ಅಪರಾಧ. ಪೊಲೀಸರು "ಒಳ್ಳೆಯ ಕೆಲಸ" ಮಾಡಿದ್ದಾರೆ. ಇಂತಹ ಕ್ರಮಗಳು ಅಂತಹ ಘೋರ ಅಪರಾಧಕ್ಕೆ ಕೊಡುವ ಶಿಕ್ಷೆಯಾಗಿವೆ" ಎಂದು ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಸಂಫೂರ್ಣ ಮನೆಯನ್ನು ಪೊಲೀಸರು ಕೆಡವಿ ಹಾಕಿದ್ದಾರೆ.

ರಾಜಧಾನಿ ಭೋಪಾಲ್‌ನಿಂದ ಸುಮಾರು 250 ಕಿಮೀ ದೂರದಲ್ಲಿರುವ ದಾಮೋಹ್‌ನಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ನಾಲ್ಕನೆ ಆರೋಪಿ ಕೌಶಲ್ ಕಿಶೋರ್ ಚೌಬೆ ಪರಾರಿಯಾಗಿದ್ದಾರೆ. ಘಟನೆ ಬಳಿಕ ಆರೋಪಿಗಳು ಒತ್ತುವರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

"ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಓರ್ವ ಆರೋಪಿ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ಆರೋಪಿ ಕೌಶಲ್ ಕಿಶೋರ್ ಚೌಬೆ ಅವರು ಅಕ್ರಮವಾಗಿ ಭೂಮಿಯನ್ನು ವಶಪಡಿಸಿಕೊಂಡಿದ್ದರು. ಮಹಿಳಾ ಅಧಿಕಾರಿಗಳ ಗುಂಪಿನಿಂದ ಬುಲ್ಡೋಜರ್ ಕಾರ್ಯನಿರ್ವಹಿಸುತ್ತಿದೆ. ಮಹಿಳಾ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಇಂತಹ ಕ್ರಮಗಳು ಮುಂದುವರೆಯಬೇಕು" ಎಂದು ರಾಣೆ ಠಾಣಾಧಿಕಾರಿ ಪ್ರಶಿತಾ ಕುರ್ಮಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+