ಪಾಕಿಸ್ತಾನದಿಂದ ಮತ್ತೆ ದಾಳಿ: ಓರ್ವ ಕಾಶ್ಮೀರಿ ಮಹಿಳೆ ಸಾವು

Posted By:
Subscribe to Oneindia Kannada

ಶ್ರೀನಗರ, ಫೆಬ್ರವರಿ 09: ಪಾಕಿಸ್ತಾನವು ಜಮ್ಮು ಕಾಶ್ಮೀರದ ಬಾಲ್ನೋಯ್ ನಲ್ಲಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಓರ್ವ ಮಹಿಳೆ ಮೃತರಾಗಿದ್ದಾರೆ.

ನಿನ್ನೆ(ಫೆ.08) ರಾತ್ರಿ ಪೋಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಕದನವಿರಾಮ ಉಲ್ಲಂಘಿಸಿ ಪಾಕಿಸ್ತಾನ ದಾಳಿ ನಡೆಸಿದ ಪರಿಣಾಮ ಈ ಘಟನೆ ಸಂಭವಿಸಿದೆ.

ನಮಗಾಗಿ ಪ್ರಾಣತೆತ್ತ ನಿಮಗಿದೋ ನಮ್ಮ ಸಾವಿರ ನಮನ...

ಮೃತರನ್ನು ಬಾಲ್ನೋಯ್ ನ ಜೈನಿಬ್ ಬಿ ಎಂದು ಗುರುತಿಸಲಾಗಿದೆ. ಕಳೆದ ವಾರವಷ್ಟೇ ಪಾಕಿಸ್ತಾನವು ಕಾಶ್ಮೀರದ ರಾಜೌರಿಯಲ್ಲಿ ಕದನವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದ ಪರಿಣಾಮ ನಾಲ್ವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.

Woman killed in ceasefire violation

ಈ ಸಂಬಂಧ ರಾಜೌರಿಯ ಬಹುಪಾಲು ಶಾಲೆ-ಕಾಲೇಜುಗಳನ್ನು ಮುಚ್ಚಿ, ಎಲ್ಲೆಲ್ಲೂ ಕಟ್ಟೆಚ್ಚರ ಘೋಷಿಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A woman was killed during unprovoked ceasefire violation by Pakistani troops in Jammu and Kashmir's Balnoi.The ceasefire took place on Thursday along the Line of Control (LoC) in Poonch district of Jammu and Kashmir.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ