ಮಹಿಳೆಯರೇ, ಅಪಾಯದಲ್ಲಿದ್ದರೆ ಈ ಬಟನ್ ಒತ್ತಿ ಸಾಕು!

ಮಹಿಳೆಯರು ಒಬ್ಬರೇ ಇದ್ದಾಗ, ತಮ್ಮ ಮೈಮೇಲೆ ಅಪಾಯ ಎದುರಾದಾಗ ಧೃತಿಗೆಡದೆ ತಾವು ಧರಿಸಿರುವ ಯಾವುದೇ ಡ್ರೆಸ್ (ಜೀನ್ಸ್ ಪ್ಯಾಂಟ್, ಟಿ ಶರ್ಟ್, ಚೂಡಿದಾರ್) ನಲ್ಲಿ ಗುಪ್ತವಾಗಿ ಅಡಗಿರುವ ಒಂದು ಬಟನ್ ಒತ್ತಿದರೆ ಸಾಕು ನೇರವಾಗಿ ಅದು ಪೊಲೀಸ್ ಕಂಟ್ರೋಲ್ ರೂಂಗೆ ಸಂದೇಶ ರವಾನಿಸುತ್ತದೆ. ಅಲ್ಲಿ ಸದಾ ಅಲರ್ಟ್ ಆಗಿರುವ ಪೊಲೀಸರು ತಕ್ಷಣ ನಿಮ್ಮ ರಕ್ಷಣೆಗೆ ಧಾವಿಸುತ್ತಾರೆ!
ದೇವನಗರಿ ವಾರಣಾಸಿಯ ಕಂಪ್ಯೂಟರ್ ವಿದ್ಯಾರ್ಥಿನಿ ಈ ಹೊಸ ತಂತ್ರಜ್ಞಾನ ಕಂಡು ಹಿಡಿದಿದ್ದಾರೆ. ಆಕೆಯ ಹೆಸರು ದೀಕ್ಷಾ ಪಾಠಕ್. ಯುವತಿಯರು ತಾವು ಧರಿಸಿರುವ ಜೀನ್ಸ್ ಪ್ಯಾಂಟಿಗೆ ಈ ಬಟನ್ ಅಳವಡಿಸಿಕೊಂಡಿದ್ದರೆ ಸಾಕು. ಜೀನ್ಸ್ ಪ್ಯಾಂಟಿನಲ್ಲಿ ಹೈ ಫ್ರೀಕ್ವೆನ್ಸಿಯಾ ವಾಕಿ-ಟಾಕಿ ಮಾದರಿಯ ಬಟನ್ ಅಳವಡಿಸಲಾಗಿರುತ್ತದೆ. (ಅತ್ಯಾಚಾರಿಗಳೇ ಹುಷಾರ್, ಮಹಿಳೆಯಿಂದ ದೂರವಿರಿ)
ಅದರಲ್ಲಿ ಮಾಮೂಲಿ ಸಿಮ್ ಕಾರ್ಡ್ ಇರುತ್ತದೆ. ಅದಕ್ಕೆ ಎಮರ್ಜೆನ್ಸಿ ನಂಬರ್ ಅಳವಡಿಸಲಾಗಿರುತ್ತದೆ. ಯುವತಿ ಅಪಾಯದ ಮುನ್ಸೂಚನೆ ಅರಿಯುತ್ತಿದ್ದಂತೆ ಆ ಬಟನ್ ಒತ್ತಿದರಾಯಿತು. ಒಂದು ವೇಳೆ ನೆಟ್ ವರ್ಕ್ ವಿಫಲವಾಗಿದ್ದರೆ? ಚಿಂತೆ ಬೇಡ. ಅದೂ ಆಟೋಮ್ಯಾಟಿಕ್ ಆಗಿ ಪುನಃ ರಿಡೈರೆಕ್ಟ್ ಆಗುತ್ತದೆ. ಅದು ಪೊಲೀಸ್ ಕಂಟ್ರೋಲ್ ರೂಂ ತಲುಪಿ ಪೊಲೀಸರು ಸ್ಥಳಕ್ಕೆ ಧಾವಿಸುತ್ತಾರೆ.
ಅಂದಹಾಗೆ, ತನ್ನ ಮತ್ತೊಬ್ಬ ಗೆಳತಿ ಅಂಜಲಿ ಜತೆಗೂಡಿ ದೀಕ್ಷಾ ತಯಾರಿಸಿರುವ ಈ ಜೀವ ರಕ್ಷಕ ಆಧುನಿಕ ಉಪಕರಣದ ಬೆಲೆ ದುಬಾರಿಯಲ್ಲ, ಕೇವಲ 200 ರೂಪಾಯಿ ಅಷ್ಟೆ. (ಕಾಮುಕರಿಂದ ಸ್ತ್ರೀಯರ ರಕ್ಷಣೆಗೆ ಬಂದಿದೆ ಉಂಗುರ!)
ಈ ಗೆಳತಿಯರು ಮುಂದೆ ಇನ್ನೂ ಒಂದು ಸಾಧನೆ ಮಾಡಲಿದ್ದಾರೆ. ಈ ಸಾಧನಕ್ಕೆ ಒಂದು ಕ್ಯಾಮರಾ ಕೂಡ ಅಳವಡಿಸುವ ಯೋಚನೆಯಲ್ಲಿದ್ದು, ದುಷ್ಕರ್ಮಿಯ ಚಿತ್ರವೂ ಕ್ಯಾಮೆರಾದಲ್ಲಿ ಸೆರೆಯಾಗಲಿದೆ. ಇದರಿಂದ ಪೊಲೀಸರ ತನಿಖೆಗೆ ಸಹಕಾರಿಯಾಗುತ್ತದೆ.












Click it and Unblock the Notifications