Bihar News: ಅಲ್ಟ್ರಾಸೌಂಡ್ನಲ್ಲಿ ಕಾಣಿಸಿಕೊಂಡಿದ್ದು 3 ಮಕ್ಕಳು, ಜನ್ಮ ನೀಡಿದ್ದು 4 ಮಕ್ಕಳಿಗೆ.. ವೈದ್ಯರು ಶಾಕ್!
ಬಿಹಾರದ ಸೀತಾಮರ್ಹಿ ಜಿಲ್ಲೆಯಿಂದ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ಇಲ್ಲಿನ ಖಾಸಗಿ ನರ್ಸಿಂಗ್ ಹೋಂನಲ್ಲಿ ಮಹಿಳೆಯೊಬ್ಬರು ಏಕಕಾಲಕ್ಕೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅತ್ಯಂತ ಅಚ್ಚರಿಯ ಸಂಗತಿ ಎಂದರೆ ಹೆರಿಗೆಗೂ ಮುನ್ನ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ ಮಹಿಳೆಯ ಹೊಟ್ಟೆಯಲ್ಲಿ 3 ಮಕ್ಕಳಿರುವುದು ದೃಢಪಟ್ಟಿತ್ತು. ಆದರೆ ಆಪರೇಷನ್ ಮಾಡಿದಾಗ ವೈದ್ಯರು ಒಮ್ಮೆಲೆ 4 ಮಕ್ಕಳನ್ನು ನೋಡಿ ಅಚ್ಚರಿಗೊಂಡಿದ್ದಾರೆ.
ಶಸ್ತ್ರಚಿಕಿತ್ಸೆಯ ವೇಳೆ ಮೊದಲು ಮಹಿಳೆಯ ಹೊಟ್ಟೆಯಿಂದ ಹೆಣ್ಣು ಮಗುವನ್ನು ಹೊರತೆಗೆಯಲಾಯಿತು. ನಂತರ ಮೂರು ಗಂಡು ಮಕ್ಕಳು ಜನಿಸಿದವು. ವೈದ್ಯರ ಪ್ರಕಾರ, ತಾಯಿ ಮತ್ತು ನಾಲ್ಕು ಮಕ್ಕಳೂ ಆರೋಗ್ಯವಾಗಿದ್ದಾರೆ. ಸೀತಾಮರ್ಹಿಯ ಬಜಪಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಶಹರೋವಾ ಗ್ರಾಮದ ನಿವಾಸಿ ರಮೇಶ್ ಕುಮಾರ್ ಅವರ ಪತ್ನಿ ಗರ್ಭಿಣಿ ಆಗಿದ್ದರು. ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ದಾಖಲಾತಿ ಸಮಯದಲ್ಲಿ ಗರ್ಭಿಣಿ ಮಹಿಳೆ ರೂಪಾ ಕುಮಾರಿ ಅವರಿಗೆ ಅಲ್ಟ್ರಾಸೌಂಡ್ ಮಾಡಲಾಯಿತು. ಈ ವೇಳೆ ಮಹಿಳೆಯ ಹೊಟ್ಟೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳು ಇರುವುದನ್ನು ವೈದ್ಯರು ಕಂಡುಕೊಂಡಿದ್ದರು.

ನೋವು ಹೆಚ್ಚಾದಾಗ ತಾಯಿಯನ್ನು ಲೇಬರ್ ರೂಮ್‌ಗೆ ಕರೆದೊಯ್ಯಲಾಯಿತು. ಈ ವೇಳೆ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆಗ ಏಕಕಾಲಕ್ಕೆ 4 ಮಕ್ಕಳಿಗೆ ರೂಪಾ ಕುಮಾರಿ ಜನ್ಮ ನೀಡಿದ್ದಾರೆ. ನಾಲ್ಕು ಮಕ್ಕಳ ನಗು ಮನೆಯಲ್ಲಿ ಏಕಕಾಲಕ್ಕೆ ಪ್ರತಿಧ್ವನಿಸುತ್ತಿದ್ದಂತೆ ಕುಟುಂಬ ಸದಸ್ಯರು ತುಂಬಾ ಸಂತೋಷಪಟ್ಟಿದ್ದಾರೆ. ಯಶಸ್ವಿ ಹೆರಿಗೆಯ ನಂತರ ವೈದ್ಯರ ಮೊಗದಲ್ಲೂ ಮಂದಹಾಸ ಮೂಡಿದೆ.
ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಮೂವರು ಸಾವು
ಬಿಹಾರದ ದರ್ಬಂಗಾ ಜಿಲ್ಲೆಯ ಯೂನಿವರ್ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂವರ ಸಾವಿನ ಸುದ್ದಿ ಬೆಳಕಿಗೆ ಬಂದಿರುವ ದಾರುಣ ಘಟನೆ ನಡೆದಿದೆ. ಮೂವರು ವ್ಯಕ್ತಿಗಳು ತಮ್ಮ ಮನೆಯ ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. 38 ವರ್ಷದ ಸುಶೀಲ್ ಕುಮಾರ್ ರಾಮ್, ಅವರ ಸಹೋದರ ಸುಧೀರ್ ರಾಮ್ ಮತ್ತು ಸೋದರಳಿಯ ನವಲ್ ರಾಮ್ ಟ್ಯಾಂಕ್‌ನ ಮುಚ್ಚಳ ಒಡೆದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೃತರ ಸಂಬಂಧಿಕರ ಆಕ್ರಂದನ
ಮೃತ ಸುಶೀಲ್ ಕುಮಾರ್ ರಾಮ್ ವೃತ್ತಿಯಲ್ಲಿ ರಿಕ್ಷಾ ಚಾಲಕ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ತನ್ನ ಶೌಚಾಲಯಕ್ಕೆ ಪೈಪ್ ಅಳವಡಿಸಲು ಯತ್ನಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇದೇ ವೇಳೆ ಏಕಾಏಕಿ ಟ್ಯಾಂಕ್‌ನ ಮುಚ್ಚಳ ಒಡೆದು ಅವರು ಒಳಬಿದ್ದು ನೀರಿನಲ್ಲಿ ಮುಳುಗಿದ್ದಾರೆ. ಅವರನ್ನು ರಕ್ಷಿಸುವ ಪ್ರಯತ್ನದಲ್ಲಿ ಆತನ ಸಹೋದರ ಸುಧೀರ್ ರಾಮ್ ಮತ್ತು ಸೋದರಳಿಯ ನವಲ್ ರಾಮ್ ಕೂಡ ಟ್ಯಾಂಕ್‌ಗೆ ಬಿದ್ದಿದ್ದಾರೆ. ಇಬ್ಬರೂ ರಕ್ಷಿಸಲು ಯತ್ನಿಸುವಷ್ಟರಲ್ಲಿ ಮೂವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೂವರನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು, ಈ ಬಗ್ಗೆ ತನಿಖೆ ಆರಂಭಿಸಿದೆ. ಪ್ರಾಥಮಿಕ ವರದಿ ಪ್ರಕಾರ ಮೂವರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಪೊಲೀಸರು ಮೃತದೇಹಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.












Click it and Unblock the Notifications