Get Updates
Get notified of breaking news, exclusive insights, and must-see stories!

ತಾಯಿ, ಮಗಳನ್ನು ಬಸ್ ನಿಂದ ಹೊರದಬ್ಬಿದ ಕಾಮುಕರು

ಮೋಗಾ (ಪಂಜಾಬ್), ಮಾ. 1: ದೇಶದಲ್ಲಿ ಕಾಮುಕರ ಅಟ್ಟಹಾಸಕ್ಕೆ ಎಣೆ ಇಲ್ಲದಂತಾಗಿದೆ. ದೆಹಲಿ ನಿರ್ಭಯಾ ರೀತಿಯದ್ದೇ ಮತ್ತೊಂದು ಪ್ರಕರಣ ಪಂಜಾಬ್ ನ ಮೋಗಾ ಜಿಲ್ಲೆಯಲ್ಲಿ ಸಂಭವಿಸಿದೆ.

ಚಲಿಸುವ ಬಸ್ಸಿನಲ್ಲಿ ನಿರ್ವಾಹಕ ಹಾಗೂ ಕ್ಲೀನರ್ ಹಾಗೂ ಮತ್ತೊಬ್ಬ ಅಪರಿಚಿತ ವ್ಯಕ್ತಿ ತಾಯಿ ಮತ್ತು ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅವರನ್ನು ಬಸ್ಸಿನಿಂದ ಹೊರದೂಡಿದ್ದಾರೆ. ಘಟನೆಯಲ್ಲಿ 16 ವರ್ಷದ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ತಾಯಿ ತೀವ್ರವಾಗಿ ಗಾಯಗೊಂಡಿದ್ದಾರೆ.[ನಿವೃತ್ತ ಐಎಎಸ್ ಅಧಿಕಾರಿ ಮಗಳ ಮೇಲೆ ಅತ್ಯಾಚಾರ]

rape

ತಾಯಿ ಮಗಳು ಪ್ರಯಾಣಿಸುತ್ತಿದ್ದ 'ಆರ್ಬಿಟ್ ಏವಿಯೇಷನ್' ಕಂಪನಿಯ ಬಸ್, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಕುಟುಂಬದ ಒಡೆತನಕ್ಕೆ ಸೇರಿದೆ ಎನ್ನಲಾಗಿದೆ. 35 ವರ್ಷದ ಮಹಿಳೆ ಹಾಗೂ ಅವರ ಪುತ್ರಿ ಮತ್ತು ಪುತ್ರ ಬಸ್ ಏರಿದ್ದರು. ಮೋಗಾ ಜಿಲ್ಲೆಯಿಂದ ಹತ್ತು ಕಿ.ಮೀ. ಚಲಿಸಿದ ಬಸ್ ಟೋಲ್ ಪ್ಲಾಜಾ ಬಳಿ ನಿಂತಿತು. ಬಸ್ ನಿರ್ವಾಹಕ, ಕ್ಲೀನರ್ ಹಾಗೂ ಮತ್ತೊಬ್ಬ ವ್ಯಕ್ತಿ (ಗುರುತು ಪತ್ತೆಯಾಗಿಲ್ಲ) ಮಹಿಳೆ ಹಾಗೂ ಅವರ ಮಗಳ ಮೇಲೆ ಎರಗಿದ್ದಾರೆ. ಲೈಂಗಿಕ ದೌರ್ಜನ್ಯವೆಸಗಿ, ಅವರನ್ನು ಬಸ್ಸಿನಿಂದ ಹೊರಕ್ಕೆ ದೂಡಿದ್ದಾರೆ. ಪರಿಣಾಮ ಮಗಳು ಸಾವನ್ನಪ್ಪಿದ್ದು ತಾಯಿ ತೀವ್ರ ತೆರನಾಗಿ ಗಾಯಗೊಂಡಿದ್ದಾರೆ.

ನಿರ್ವಾಹಕ ಸುಖ್‌ವಿಂದರ್‌, ಕ್ಲೀನರ್‌ ಗುರುದೀಪ್‌ ಎಂಬುವರನ್ನು ಬಂಧಿಸಲಾಗಿದೆ. ಇವರಿಬ್ಬರ ಜತೆ ಇದ್ದ ಮತ್ತೂಬ್ಬ ವ್ಯಕ್ತಿ ಯಾರೆಂದು ಗೊತ್ತಾಗಿಲ್ಲ. ಶೋಷಣೆಗೊಳಗಾದ ಮಹಿಳೆ ಚಾಲಕನ ವಿರುದ್ಧ ಯಾವುದೇ ಆರೋಪ ಮಾಡಿಲ್ಲ ಎಂದು ಮೊಗಾ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಎಸ್‌. ಪನ್ನು ತಿಳಿಸಿದ್ದಾರೆ. ಆದರೆ ಮಹಿಳೆ ಹಾಗೂ ಆಕೆಯ ಪುತ್ರಿಯೇ ಬಸ್‌ನಿಂದ ಜಿಗಿದಿದ್ದರು ಎಂದು ಪೊಲೀಸರು ಮೊದಲು ಹೇಳಿದ್ದು ಗೊಂದಲ ಸೃಷ್ಟಿಸಿದೆ.

ಘಟನೆಯನ್ನು ರಾಜಕೀಯ ಪಕ್ಷಗಳು ಖಂಡಿಸಿವೆ. ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ವಿಷಾದ ವ್ಯಕ್ತಪಡಿಸಿದ್ದು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+