• search

ಕಾರ್ ಸೀಟ್‌ಬೆಲ್ಟ್‌ ಹಾಕದೇ ದಿನಕ್ಕೆ ಪ್ರಾಣ ಕಳ್ಕೊಳ್ಳೋರು ಎಷ್ಟು ಜನ ಗೊತ್ತಾ?

By Nayana
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಸೀಟ್ ಬೆಲ್ಟ್ ಹಾಕದೆ ದಿನಕ್ಕೆ ಸಾಯುವವರ ಸಂಖ್ಯೆ ಎಷ್ಟು ಗೊತ್ತಾ? ಸೀಟ್ ಬೆಲ್ಟ್ ಮಹತ್ವ ಏನು?

    ಬೆಂಗಳೂರು, ಸೆಪ್ಟೆಂಬರ್ 1: ದೇಶದಲ್ಲಿ ನಿತ್ಯ ಬೈಕ್, ಕಾರ್, ಟ್ರಕ್, ಬಸ್ ಹೀಗೆ ನಾನಾ ವಾಹನಗಳು ಅಪಘಾತಗಳಿಗೆ ಈಡಾಗುತ್ತಲೇ ಇರುತ್ತವೆ. ಎಷ್ಟೇ ಸುರಕ್ಷತೆಗೆ ಆದ್ಯತೆ ಕೊಟ್ಟರೂ ಅಪಾಯ ತಪ್ಪಿದ್ದಲ್ಲ. ಆದರೆ ಅಪಾಯದಿಂದ ಪಾರಾಗಲೆಂದೇ ಇರುವ ಸೀಟ್ ಬೆಲ್ಟ್ ಗಳನ್ನು ಧರಿಸದೇ ನಿರ್ಲಕ್ಷ್ಯದಿಂದಲೇ ಸಾಯುವವರ ಸಂಖ್ಯೆಯೇನೂ ಕಡಿಮೆ ಇಲ್ಲ.

    ದೇಶದಲ್ಲಿ ದಿನನಿತ್ಯ ಲಕ್ಷಾಂತರ ಕಾರು ಅಪಘಾತಗಳು ಸಂಭವಿಸುತ್ತವೆ ಸಾಮಾನ್ಯವಾಗಿ ಸೀಟ್ ಬೆಲ್ಟ್ ಧರಿಸಿದರುವುದೇ ಅವರ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.

    ಅದೊಂದು ಸಣ್ಣ ಕೆಲಸ ಮಾಡಿದ್ದರೆ ನಂದಮೂರಿ ಹರಿಕೃಷ್ಣ ಸಾಯುತ್ತಿರಲಿಲ್ಲವೇನೋ!

    ದೇಶದಲ್ಲಿ ಪ್ರತಿನಿತ್ಯ ಕನಿಷ್ಠ 15ಮಂದಿ ಸೀಲ್ಟ್ ಬೆಲ್ಟ್ ಧರಿಸದೆ ಇರುವ ಕಾರಣಕ್ಕೆ ಸಾವಿಗೀಡಾಗುತ್ತಿದ್ದಾರೆ ಪ್ರತಿ ವರ್ಷ ಸುಮಾರು 5500ಕ್ಕೂ ಹೆಚ್ಚುಮಂದಿ ಸೀಟ್‌ ಬೆಲ್ಟ್ ಧರಿಸಿದೆ ಸಾವನ್ನಪ್ಪುತ್ತಿದ್ದಾರೆ. ಸೀಟ್‌ ಬೆಲ್ಟ್ ಉದಾಸೀನದಿಂದ ಪ್ರಾಣಕ್ಕೆ ಸಂಚರಾಕರ ತಂದುಕೊಳ್ಳುತ್ತಿದ್ದಾರೆ.

    Without knotting seat belt everyday 15 dies in India!

    ಜೀವವನ್ನು ರಕ್ಷಿಸಲೆಂದೇ ಇರುವ ಸೀಟ್‌ಬೆಲ್ಟ್‌ನ್ನು ದಯವಿಟ್ಟು ಧರಿಸಿ ಎಂದು ಟ್ರಾಫಿಕ್ ಪೊಲೀಸರು ಎಷ್ಟು ಅಭಿಯಾನಗಳನ್ನು ನಡೆಸಿದರೂ ಜನರ ಕಿವಿಗೆ ಹೋಗುತ್ತಿಲ್ಲ.

    ಕೇವಲ ಶೇ 56ರಷ್ಟು ಜತೆಗಿದ್ದವವರ ಒತ್ತಾಯಕ್ಕೆ ಸೀಲ್ಟ್ ಬೆಲ್ಟ್ ಧರಿಸುತ್ತಾರೆ, ಶೇ.63ರಷ್ಟು ಮಂದಿ ಮಾತ್ರ ಸೀಟ್ ಬೆಲ್ಟ್ ಮಹತ್ವ ಅರಿತಿದ್ದಾರೆ. ಕೇವಲ ಶೇ. 64ರಷ್ಟು ಮಂದಿಗೆ ಮಾತ್ರ ಅದು ಸುರಕ್ಷತಾ ಕ್ರಮ ಎನ್ನುವ ತಿಳಿವಳಿಕೆ ಇದೆ.

    ಹರಿಕೃಷ್ಣ ಚಾಲನೆ ಮಾಡುವಾಗ ಅಪಘಾತವಾಗಿದ್ದು ಆಪ್ತರು ನಂಬಲ್ಲ, ಏಕೆ?

    ಹಾಗಾದರೆ ಅವರಲ್ಲಿರುವ ತಪ್ಪು ತಿಳಿವಳಿಕೆ ಏನೆಂದು ನೋಡುವುದಾದರೆ ಸೀಲ್ಟ್ ಬೆಲ್ಟ್ ಧರಿಸುವುದರಿಂದ ಬಟ್ಟೆಯ ಇಸ್ತ್ರಿ ಹಾಳಾಗುತ್ತದೆ ಎನ್ನುವ ಭ್ರಮೆಯಲ್ಲಿ ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಾರೆ.ಶೇ.23ರಷ್ಟು ಮಂದಿಗೆ ಅದು ಸುರಕ್ಷಿತ ಕ್ರಮ ಎನ್ನುವ ಪರಿಜ್ಞಾನವೇ ಇಲ್ಲ. ಜತೆಗೆ ಇರುವವರು ಒತ್ತಾಯಿಸದೆ ಇರುವ ಕಾರಣ ಶೇ.20ರಷ್ಟು ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸುವುದೇ ಇಲ್ಲ. ದೇಶದಲ್ಲಿ ಶೇ.75ರಷ್ಟು ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

    Without knotting seat belt everyday 15 dies in India!

    ತೆಲುಗಿನ ಹಿರಿಯ ನಟ ನಂದಮೂರಿ ಹರಿಕೃಷ್ಣ ಅವರು ಸೀಟ್ ಬೆಲ್ಟ್ ಧರಿಸದೆ ಇದ್ದುದರಿಂದ ರಸ್ತೆ ಅಪಘಾತದಲ್ಲಿ ಮೃತಪಟ್ಟರು, ಒಂದೊಮ್ಮೆ ಸೀಟ್ ಬೆಲ್ಟ್ ಧರಿಸಿದ್ದರೆ ಕಾರಿನಲ್ಲಿಯೇ ಇರುತ್ತಿದ್ದರು ಕಾರಿನಿಂದ ಹೊರಕ್ಕೆ ಬೀಳುತ್ತಿರಲಿಲ್ಲ.

    ಸೀಟ್ ಬೆಲ್ಟ್ ಧರಿಸದವರಲ್ಲಿ ಬೆಂಗಳೂರು ಚಾಲಕರೇ ಮುಂದೆ

    ಒಂದು ಕಾನೂನು ಮಾಡಿದ್ದಾರೆ ಎಂದಮೇಲೆ ಅದರಲ್ಲಿ ಒಳಿತು ಇರುತ್ತದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಿದೆ. ಇನ್ನಾದರೂ ಎಚ್ಚೆತ್ತುಕೊಂಡು ಪ್ರತಿಯೊಬ್ಬರು ಕಾರು ಚಾಲನೆ ಮಾಡುವಾಗ ಕಡ್ಡಾಯವಾಗಿ ಸೀಟ್‌ ಬೆಲ್ಟ್ ಧರಿಸುವಂತಾಗಲಿ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Car drivers in India less professional and perfect because violating safety rules in drastic number. So that everyday in India 15 people losing their life.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more