Get Updates
Get notified of breaking news, exclusive insights, and must-see stories!

Narendra Modi: ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ‘ತಲಾಖ್’ ಶಾಕ್!

ನವದೆಹಲಿ: ಇನ್ನೇನು ಲೋಕಸಭೆ ಚುನಾವಣೆ ಬಂದೇ ಬಿಡ್ತು. ಲೋಕಸಭೆ ಚುನಾವಣೆಗೆ ಇನ್ನೂ 10 ತಿಂಗಳು ಬಾಕಿ ಇರುವ ಸಂದರ್ಭದಲ್ಲೇ ಬಿಜೆಪಿ ಹೊಸ ಅಸ್ತ್ರಗಳನ್ನು ಹೂಡುತ್ತಿದೆ. ವಿಪಕ್ಷಗಳ ತಂತ್ರಕ್ಕೆ ಬಿಜೆಪಿ ರಣತಂತ್ರ ರೂಪಿಸುತ್ತಿದ್ದು, ಅದರಲ್ಲೂ ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ 'ತಲಾಖ್' ಶಾಕ್ ನೀಡಿದ್ದಾರೆ. ಹಾಗಾದರೆ ಏನಿದು 'ತಲಾಖ್' ಶಾಕ್?

ಅಂದಹಾಗೆ ಲೋಕಸಭೆ ಚುನಾವಣೆಗೆ ನಾಯಕರನ್ನು ಸಜ್ಜುಗೊಳಿಸುತ್ತಿರುವ ಬಿಜೆಪಿ ಇದೀಗ ಹೊಸ ಹೊಸ ಪ್ಲಾನ್ ಮಾಡುತ್ತಿದೆ. ಈ ಪೈಕಿ ಪ್ರಧಾನಿ ಮೋದಿ ಅವರೇ ನೇರವಾಗಿ ತಮ್ಮ ಪಕ್ಷದ, ವಿವಿಧ ಭಾಗಗಳ ಸಂಸದರನ್ನು ಹಾಗೂ ಪ್ರಮುಖ ಮುಖಂಡರನ್ನು ಭೇಟಿ ಮಾಡಿ ಸಭೆ ನಡೆಸುತ್ತಿದ್ದಾರೆ. ಹೀಗೆ ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್‌ನ ಬಿಜೆಪಿ ನೇತೃತ್ವದ ಎನ್‌ಡಿಎ ಸಂಸದರ ಸಭೆಯಲ್ಲಿ ಪಿಎಂ ಮೋದಿ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ. ಈ ಅಸ್ತ್ರ ವಿರೋಧ ಪಕ್ಷಗಳ ಒಕ್ಕೂಟಕ್ಕೆ ದೊಡ್ಡ ಆಘಾತ ನೀಡುವ ಮುನ್ಸೂಚನೆ ಕೊಟ್ಟಂತಿದೆ.

With Triple Talaq bill NDA Planning to reach Muslim community women

'ತಲಾಖ್' ಅಸ್ತ್ರ ತ್ವರಿತ ಪ್ರಯೋಗ!

ಅಷ್ಟಕ್ಕೂ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಅಂದರೆ ಪ್ರಧಾನಿ ಮೋದಿ ಅವರ ಸರ್ಕಾರ
ತ್ರಿವಳಿ ತಲಾಖ್ ನಿಷೇಧಿಸಲು ಕ್ರಮವನ್ನು ಕೈಗೊಂಡಿತ್ತು. ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆಯನ್ನ 2019ರಲ್ಲಿ ಸಂಸತ್ತು ಅಂಗೀಕರಿಸಿತು, ಹೀಗೆ ತ್ವರಿತ ತ್ರಿವಳಿ ತಲಾಖ್ ಅಭ್ಯಾಸವನ್ನು ಕಾನೂನುಬಾಹಿರ ಎಂದು ಘೋಷಿಸುವ ಜೊತೆಗೆ ಪತಿಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವನ್ನೂ ನೀಡಲಾಗಿತ್ತು. ಈಗ ಇದೇ ಅಸ್ತ್ರವನ್ನು ಹಿಡಿದು ಮುಂಬರುವ ಲೋಕಸಭೆಯಲ್ಲಿ ಹೊಸ ಗೇಮ್ ಪ್ಲ್ಯಾನ್ ರೂಪಿಸಿದೆ. ಖುದ್ದು ಪ್ರಧಾನಿ ಮೋದಿ ಅವರೇ ಈ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ ಅನ್ನೋ ಮಾತು ಹರಿದಾಡ್ತಿದೆ.

ಪ್ರಧಾನಿ ಮೋದಿ ಸಲಹೆ ಏನು?

ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್‌ನ ಬಿಜೆಪಿ ನೇತೃತ್ವದ ಎನ್‌ಡಿಎ ಸಂಸದರ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡುವಾಗ, ಪ್ರಮುಖವಾಗಿ 'ತಲಾಖ್' ವಿಚಾರ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ತಮ್ಮ ಸರ್ಕಾರದ ನಿರ್ಧಾರವು ಮುಸ್ಲಿಂ ಮಹಿಳೆಯರ ಸುರಕ್ಷತೆಯ ಪ್ರಜ್ಞೆಯನ್ನು ಹೆಚ್ಚಿಸಿದೆ ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ತಲಾಖ್ ವಿಚಾರವನ್ನ ಮುಂಬರುವ ರಕ್ಷಾ ಬಂಧನದ ಸಮಯದಲ್ಲಿ ಫಲಾನುಭವಿಗಳಿಗೆ ತಲುಪಿಸಲು ಸಲಹೆಯನ್ನ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಮುಸ್ಲಿಂ ಮಹಿಳೆಯರಿಗಾಗಿ ತಮ್ಮ ಸರ್ಕಾರದ ಸುಧಾರಣಾ ಕ್ರಮಗಳನ್ನು ಮೋದಿ ಆಗಾಗ ಪ್ರತಿಪಾದಿಸುತ್ತಲೇ ಬಂದಿದ್ದಾರೆ ಎಂಬುದು ಗಮನಾರ್ಹ.

With Triple Talaq bill NDA Planning to reach Muslim community women

'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಸ್ತಾಪ

ಅಂದಹಾಗೆ ಇತ್ತೀಚೆಗೆ ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಮಖವಾದ ವಿಚಾರ ಪ್ರಸ್ತಾಪಿಸಿದ್ದರು ಪ್ರಧಾನಿ. ಈ ವರ್ಷ 4,000ಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರು 'ಮೆಹ್ರಮ್' ಇಲ್ಲದೆ ಹಜ್ ಯಾತ್ರೆಗೆ ತೆರಳಿರುವುದು 'ದೊಡ್ಡ ಪರಿವರ್ತನೆ' ಎಂದಿದ್ದರು. ತಮ್ಮ ಸರ್ಕಾರ ಕಳೆದ ಕೆಲ ವರ್ಷದಿಂದ ತಂದ ಬದಲಾವಣೆಯಿಂದ ಹೆಚ್ಚು ಜನರು ವಾರ್ಷಿಕ ತೀರ್ಥಯಾತ್ರೆಗೆ ಹೋಗಲು ಅವಕಾಶ ಪಡೆಯುತ್ತಿದ್ದಾರೆಂಬ ವಿಚಾರವನ್ನ ಪಿಎಂ ಮೋದಿ ಪ್ರತಿಪಾದಿಸಿದ್ದರು.

'ಇಂಡಿಯಾ' ವಿರುದ್ಧ ತೀವ್ರ ವಾಗ್ದಾಳಿ!

ಅಷ್ಟಕ್ಕೂ ಸಭೆಯಲ್ಲಿ ವಿರೋಧ ಪಕ್ಷಗಳ ಒಕ್ಕೂಟ 'ಇಂಡಿಯಾ' ವಿರುದ್ಧ ಕೂಡ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ಯುಪಿಎ ಹಗರಣಗಳ ಸುಳಿಯಲ್ಲಿ ಸಿಲುಕಿದ್ದ ಕಾರಣದಿಂದ 'ಇಂಡಿಯಾ' ಎಂದು ಹೆಸರು ಬದಲಾಯಿಸಿಕೊಂಡಿದೆ. ಆದರೆ ಜನ ಇದನ್ನು ಎಂದಿಗೂ ಒಪ್ಪಿಕೊಳ್ಳಲ್ಲ ಎನ್ನುವ ಮೂಲಕ ಮತ್ತೊಂದು ಅಸ್ತ್ರವನ್ನೂ ಪ್ರಧಾನಿ ಮೋದಿ ಸಭೆಯಲ್ಲಿ ಪ್ರಯೋಗಿಸಿದ್ದಾರೆ. ಆಡಳಿತಾರೂಢ ಮೈತ್ರಿಕೂಟ ಸಮಾಜ ಮತ್ತು ದೇಶಕ್ಕೆ ಸೇವೆ ಸಲ್ಲಿಸುತ್ತಿದೆ ಮತ್ತು ಜನರ ಆಶೀರ್ವಾದ ಪಡೆಯುತ್ತಿದೆ. ಸರ್ಕಾರದ ಉತ್ತಮ ಕೆಲಸಗಳ ಬಗ್ಗೆ ಸಕಾರಾತ್ಮಕ ಸಂದೇಶದ ಜೊತೆ ಜನರ ಬಳಿಗೆ ಹೋಗಲು ಸಂಸದರಿಗೆ ಪ್ರಧಾನಿ ಸೂಚಿಸಿದ್ದಾರೆ ಎನ್ನಲಾಗಿದೆ.

ಒಟ್ನಲ್ಲಿ ಒಂದು ಕಡೆ ವಿಪಕ್ಷಗಳು ಉಚಿತ ಉಡುಗೊರೆ ವಿಚಾರವನ್ನು ಹಿಡಿದು ಮತದಾರರ ಮನ ಗೆಲ್ಲಲು ಯತ್ನಿಸುತ್ತಿವೆ. ಅದೇ ರೀತಿ ಇದೀಗ ಬಿಜೆಪಿ ತಮ್ಮ ಸರ್ಕಾರದ ಅವಧಿಯಲ್ಲಿ ಕೈಗೊಂಡಿದ್ದ 'ತಲಾಖ್' ಮತ್ತಿತರ ನಿರ್ಧಾರಗಳನ್ನು ಹಿಡಿದು ಅಸ್ತ್ರ ಪ್ರಯೋಗಿಸುತ್ತಿದೆ. ಈ ಬೆಳವಣಿಗೆಗಳು ಚುನಾವಣೆಯಲ್ಲಿ ಯಾವ ರೀತಿ ಪ್ರಭಾವ ಬೀರಲಿವೆ ಅನ್ನೋದನ್ನ ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+