ಗುಜರಾತ್ ಗೆಲುವು ಬಿಜೆಪಿಗೇಕೆ ಮುಖ್ಯ? ಕಾರಣ ವಿವರಿಸಿದ ಅರುಣ್ ಜೇಟ್ಲಿ
ಸೂರತ್, ಡಿಸೆಂಬರ್ 02: ಗುಜರಾತಿನಲ್ಲಿ ಇದೇ ಡಿಸೆಂಬರ್ 9 ಮತ್ತು 14 ರಂದು ನಡೆಯಲಿರುವ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೂ ತೀರಾ ಮಹತ್ವದ್ದಾಗಿದೆ. ಡಿಸೆಂಬರ್ 18 ರಂದು ಹೊರಬೀಳುವ ಫಲಿತಾಂಶದಲ್ಲಿ ಗೆಲುವು ಸಾಧಿಸುವುದು ನಮಗೆ ಅತ್ಯಂತ ಮುಖ್ಯ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಸೂರತ್ ನಲ್ಲಿ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಜೇಟ್ಲಿ, ಈ ಗೆಲುವು ಬಿಜೆಪಿಗೇಕೆ ಮುಖ್ಯ ಎಂಬುದಕ್ಕೆ ಕಾರಣಗಳನ್ನೂ ನೀಡಿದ್ದಾರೆ.

"ನಾವು ಕಳೆದ ಎರಡು ದಶಕಗಳಿಂದ ಗುಜರಾತ್ ಜನರ ಸೇವೆ ಮಾಡಿದ್ದೇವೆ. ಎರಡು ದಶಕಕ್ಕೂ ಮೊದಲು ಗುಜರಾತಿನಲ್ಲಿ ರಾಜಕೀಯ ಧ್ರುವೀಕರಣ ಒಂದು ದೊಡ್ಡ ಸವಾಲಾಗಿತ್ತು. ಜನರು ಬೇಸತ್ತಿದ್ದರು. ನಂತರ ಬಿಜೆಪಿಗೆ ಅವಕಾಶ ನೀಡಿದ ಜನ ಬಿಜೆಪಿಯ ಆಡಳಿತ ವೈಖರಿಯನ್ನು ಮೆಚ್ಚಿಕೊಂಡರು."
"ನಾವು ಈ ರಾಜ್ಯದಲ್ಲಿ ತಂದ ಸತತ ಅಭಿವೃದ್ಧಿ ಕಾರ್ಯಗಳು, ಯೋಜನೆಗಳು ಫಲನೀಡಿವೆ. ಈ ಪ್ರಗತಿಯ ಓಟ ಮುಂದುವರಿಯಬೇಕಾದರೆ ನಮಗೆ ಈ ಗೆಲುವು ತುಂಬಾ ಮುಖ್ಯ" ಎಂದರು.












Click it and Unblock the Notifications