ಇ ಅಹ್ಮದ್ ಸಾವು : ಬಜೆಟ್ ಮಂಡನೆ ಮುಂದೂಡಿಕೆ ಇಲ್ಲ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಫೆಬ್ರವರಿ 01 : ಕೇರಳದ ಸಂಸದ ಇ ಅಹ್ಮದ್ ಅವರು ಹಠಾತ್ ಆಗಿ ನಿಧನ ಹೊಂದಿರುವುದರಿಂದ, ಅವರ ಗೌರವಾರ್ಥವಾಗಿ ಬಜೆಟ್ ಮಂಡನೆಯನ್ನು ಮುಂದೂಡಲಾಗುವುದಾ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.

ಆದರೆ, ಹಣಕಾಸು ಸಚಿವಾಲಯದಿಂದ ಬಂದಿರುವ ಮಾಹಿತಿಯ ಪ್ರಕಾರ, ಬಜೆಟ್ ಮಂಡನೆಯನ್ನು ಮುಂದೂಡಲಾಗುವುದಿಲ್ಲ. ಬಜೆಟ್ ಮಂಡನೆಗೆ ಮೊದಲು ಅಥವಾ ಮಂಡನೆಯ ನಂತರ ಅಹ್ಮದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು.

ಆದರೆ, ಅಂತಿಮ ನಿರ್ಧಾರವನ್ನು ಲೋಕಸಭಾಧ್ಯಕ್ಷ ಅವರು ತೆಗೆದುಕೊಳ್ಳಲಿದ್ದಾರೆ. ಅಹ್ಮದ್ ನಿಧನದಿಂದ ಬಜೆಟ್ ಅನ್ನು ಒಂದು ದಿನ ಮುಂದೂಡಲಾಗುವುದು ಎಂಬ ಮಾತುಗಳು ಸಂಸತ್ ಅಂಗಳದಲ್ಲಿ ಬಲವಾಗಿ ಕೇಳಿಬರುತ್ತಿದ್ದವು.

Will Union Budget 2017 be postponed; Speaker to take a final call at 10 am

ಹಾಲಿ ಸಂಸದ ನಿಧನರಾದಾಗ ಸದನವನ್ನು ಮುಂದೂಡುವುದು ಸಂಪ್ರದಾಯ. ಆ ದಿನ ಶ್ರದ್ಧಾಂಜಲಿ ಸಲ್ಲಿಸಲು ಮಾತ್ರ ಮೀಸಲಾಗಿಟ್ಟಿರುತ್ತದೆ. ಆದರೆ, ಬಜೆಟ್ ಮಂಡನೆ ಅತ್ಯಂತ ಪ್ರಮುಖವಾಗಿರುವುದರಿಂದ ಬಜೆಟ್ ಮಂಡನೆ ಮುಂದೂಡಿಕೆ ಸಾಧುವಲ್ಲ ಎಂದಿದ್ದಾರೆ ಹಣಕಾಸು ಮಂತ್ರಾಲಯದ ರಾಜ್ಯ ಸಚಿವ ಸಂತೋಷ್ ಗಂಗವಾರ್.

ಬಜೆಟ್ ಅಧಿವೇಶನ ಬೆಳಿಗ್ಗೆ 10 ಗಂಟೆಗೆ ಶುರುವಾಗಲಿದೆ. ನಂತರವಷ್ಟೇ ಬಜೆಟ್ ಮಂಡನೆಯ ಬಗ್ಗೆ ತಿಳಿದುಬರಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
There is a lot of speculation on whether the Union Budget 2017 will be presented or not. While Finance Ministry sources have said that the Budget will not be postponed, it would be the Speaker of the House who will take a final call on the matter.
Please Wait while comments are loading...