'ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟದಿದ್ದರೆ ಬಿಜೆಪಿಯನ್ನು ಸೋಲಿಸುತ್ತೇವೆ'

ಲಖನೌ, ಜೂನ್ 5: ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕೆಂದಿದ್ದರೆ ರಾಮಮಂದಿರ ಕಟ್ಟಲೇಬೇಕು ಎಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸುತ್ತಿರುವ ರಾಮ ಜನ್ಮಭೂಮಿ ನ್ಯಾಸ್ ಸಂಘಟನೆ ಮುಖ್ಯಸ್ಥ ಮಹಾಂತ ಪರಮಹಂಸ ದಾಸ್ ಆಗ್ರಹಿಸಿದ್ದಾರೆ.

ಒಂದು ವೇಳೆ ಬಿಜೆಪಿ ಅದರಲ್ಲಿ ವಿಫಲವಾದರೆ ಮುಂಬರುವ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಅಯೋಧ್ಯೆಯಲ್ಲಿ ಮಾತನಾಡಿದ ದಾಸ್ ಅವರು, ಬಿಜೆಪಿ 2019ರಲ್ಲಿ ಮತ್ತೆ ಅಧಿಕಾರಕ್ಕೆ ಅಧಿಕಾರಕ್ಕೆ ಬರಬೇಕೆಂದು ಬಯಸಿದ್ದರೆ, ಅವರು ರಾಮ ಮಂದಿರ ನಿರ್ಮಿಸಬೇಕು.

will defeat if the ram temple not built

ಇಲ್ಲದಿದ್ದರೆ ನಾವು ಬಿಜೆಪಿ ವಿರುದ್ಧ ಚಳವಳಿ ಸಂಘಟಿಸಿ ಅದನ್ನು ಖಂಡಿತವಾಗಿಯೂ ಸೋಲಿಸುತ್ತೇವೆ ಎಂದು ದಾಸ್ ಎಚ್ಚರಿಸಿದ್ದಾರೆ.

ಕೇಂದ್ರ ಅಲ್ಪಸಂಖ್ಯಾತ ಖಾತೆ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರ 'ಅಭಿವೃದ್ಧಿ' ಹೇಳಿಕೆ ಬೆನ್ನಲ್ಲೇ ಮಹಾಂತ ದಾಸ್ ಅವರು ಈ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ನಕ್ವಿ ಅವರು, ಬಿಜೆಪಿಯ ಮುಂದಿನ ಲೋಕಸಭೆ ಚುನಾವಣೆಯ ಮಂತ್ರ 'ಅಭಿವೃದ್ಧಿ, ಅಭಿವೃದ್ಧಿ ಮತ್ತು ಅಭಿವೃದ್ಧಿ' ಮಾತ್ರವೇ ಆಗಿರುತ್ತದೆ. ಹಿಂದುತ್ವ ಮತ್ತು ದೇವಸ್ಥಾನಗಖ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪ್ರಚಾರಕ್ಕೆ ಮುಂದಾಗುವುದಿಲ್ಲ ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+