ನಾನು ಲೋಕಸಭೆಗೆ ಸ್ಪರ್ಧಿಸುತ್ತೇನೆ: ಅಡ್ವಾಣಿ

ನವದೆಹಲಿ, ಜ.27: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳುವ ಮೂಲಕ ಹಿರಿಯ ಬಿಜೆಪಿ ಮುಖಂಡ ಎಲ್.ಕೆ.ಆಡ್ವಾಣಿ ಅವರು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ ಮೋದಿ ಅವರ ಕೈಗೆ ಚುನಾವಣೆ ಹೊಣೆ ಸಿಕ್ಕ ಮೇಲೆ ಅಡ್ವಾಣಿ ಅವರು ರಾಜ್ಯಸಭೆ ಕಣಕ್ಕಿಳಿಯಬಹುದು ಎನ್ನುವ ಊಹಾಪೋಹ ಎದ್ದಿತ್ತು. ಆದರೆ, ಎಲ್ಲಾ ಸುದ್ದಿಗಳನ್ನು ಬದಿಗೊತ್ತಿ ಲೋಕಸಭೆ ಸ್ಪರ್ಧೆ ಬಗ್ಗೆ ಅಡ್ವಾಣಿ ಖಚಿತಪಡಿಸಿದ್ದಾರೆ.

ರಾಜ್ಯಸಭೆಗೆ ಸ್ಪರ್ಧಿಸುವ ಕುರಿತು ಈವರೆಗೆ ನಾನು ಏನೂ ಹೇಳಿಲ್ಲ. ಯಾರಾದರೂ ಈ ಕುರಿತು ಹೇಳಿದರೆ ಈ ಕುರಿತು ಯೋಚಿಸುತ್ತೇನೆ. ಒಂದು ವೇಳೆ ರಾಜ್ಯಸಭೆಗೆ ಆಯ್ಕೆಯಾಗುವ ಕುರಿತು ಚಿಂತಿಸುತ್ತಿದ್ದರೆ ಅದನ್ನು ಮೊದಲೇ ತಿಳಿಸುತ್ತಿದ್ದೆ ಎಂದು ಆಡ್ವಾಣಿ ತಿಳಿಸಿದ್ದಾರೆ.

86 ವರ್ಷದ ಹಿರಿಯ ರಾಜಕಾರಣಿ ಅಡ್ವಾಣಿ ಅವರು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯಸಭೆಗೆ ಯಾರಾದರೂ ಆಫರ್ ನೀಡಿದರೆ ಸ್ಪರ್ಧೆಗಿಳಿಯುತ್ತೇನೆ. ಆದರೆ, ಮೇಲ್ಮನೆಗೆ ಸೇರುವುದಿದ್ದರೆ ಈ ಮುಂಚಿತವಾಗೇ ಸ್ಪರ್ಧಿಸುತ್ತಿದ್ದೆ ಎಂದಿದ್ದಾರೆ. ಗುಜರಾತಿನ ಗಾಂಧಿನಗರ ಲೋಕಸಭೆ ಕ್ಷೇತ್ರವನ್ನು ಅಡ್ವಾಣಿ ಪ್ರತಿನಿಧಿಸುತ್ತಾರೆ.

Will contest Lok Sabha election: LK Advani

ಅಡ್ವಾಣಿ ಅವರು ಗುಜರಾತಿನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ 1991, 1998, 1999, 2004, 2009 ರಿಂದ ಸತತವಾಗಿ ಆಯ್ಕೆಯಾಗಿದ್ದಾರೆ. ಮುರಳಿ ಮನೋಹರ ಜೋಶಿ ಅವರು ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದ ಹಾಲಿ ಲೋಕಸಭಾ ಸದಸ್ಯರಾಗಿದ್ದಾರೆ.

ಮೂಲಗಳ ಪ್ರಕಾರ ಸ್ವತಃ ಅಡ್ವಾಣಿಯೇ ಸ್ಪರ್ಧಿಸಲು ನಿರಾಸಕ್ತಿ ಹೊಂದಿದ್ದರು. ಜೋಶಿ ಕೂಡ ಇದೇ ಹಾದಿಯನ್ನು ಅನುಸರಿಸಿದ್ದಾರೆ. ಪಕ್ಷದೊಳಗೆ ಒಂದು ಗುಂಪು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಜೈಕಾರ ಹಾಕುತ್ತಿದೆ. ಹೀಗಾಗಿ ಪಕ್ಷದಲ್ಲಿದ್ದು ಮುಜುಗರ ಅನುಭವಿಸುವ ಬದಲು ಪಕ್ಷದಲ್ಲಿ ಪೋಷಕ ಪಾತ್ರ ವಹಿಸುವುದೇ ಸರಿಯಾದ ತೀರ್ಮಾನ ಎಂದು ಅಡ್ವಾಣಿ ನಿರ್ಧರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+