ಅಖಿಲೇಶ್ ಮುಂದಿರುವ ಮಾರ್ಗೋಪಾಯಗಳೇನು?

Posted By:
Subscribe to Oneindia Kannada

ಲಕ್ನೋ, ಡಿಸೆಂಬರ್ 31: ಸಮಾಜವಾದಿ ಪಕ್ಷದಿಂದ ಉಚ್ಚಾಟನೆ ಹೊಂದಿದ ಮೇಲೆ ಅಖಿಲೇಶ್ ಯಾದವ್ ಮನೆಯಲ್ಲಿ ಮಹತ್ವದ ಸಭೆ ನಡೆಯುತ್ತಿದ್ದು ನಂತರ ರಾಜ್ಯಪಾಲರನ್ನು ಭೇಟಿ ಮಾಡಿ ಅಸೆಂಬ್ಲಿಯನ್ನು ವಿಸರ್ಜನೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಷದ ಒಳಿತಿಗಾಗಿ ನಾನು ಅಖಿಲೇಶ್ ಯಾದವ್ ನನ್ನು ಹೊರಹಾಕಲಿದ್ದೇನೆ ಎಂದು ಮುಲಾಯಂ ಸಿಂಗ್ ಯಾದವ್ ಶುಕ್ರವಾರ ತಿಳಿಸಿದ್ದರು. ಈ ಸಂಬಂಧ ರಾಜ್ಯಪಾಲರು, ಇದ್ದು ಅಪ್ಪ ಮಕ್ಕಳು ಮತ್ತು ಪಕ್ಷದ ಆಂತರಿಕ ಸಮಸ್ಯೆ ಎನೇನಾಗುವುದೋ ನೋಡಬೇಕು ಎಂದು ತಿಳಿಸಿದ್ದರು.[ಅಖಿಲೇಶ್ ಉಚ್ಚಾಟನೆಯ ಹಿಂದೆ ಮುಲಾಯಂ ಎರಡನೇ ಕುಟುಂಬದ ಕೈವಾಡ?]

Will Akhilesh Yadav dissolve the Uttar Pradesh assembly

ಅಖಿಲೇಶ್ ಮತ್ತು ಮುಲಾಯಂ ರಾಜ್ಯಪಾಲರನ್ನು ಬೇಟಿಯಾಗುವ ಸಾಧ್ಯತೆಯಿದ್ದು, ಪ್ರಸ್ತುತ ಸಭೆಯಲ್ಲಿ ಯಾವ ಎಂಎಲ್ ಎಗಳು ಯಾರ ಹಿಂದೆ ಹೊಗುತ್ತಾರೆ ಎಂಬುದೇ ತಿಳಿಯದಾಗಿದೆ. ಕೆಲವರು ಅಪ್ಪ- ಮಕ್ಕಳು ಒಂದಾಗಲೆಂದು ಬಯಸಿದರೆ ಮತ್ತೆ ಕೆಲವರು ಪಕ್ಷವನ್ನು ಒಡೆದು ಹಾಳುಮಾಡುತ್ತಿದ್ದಾರಲ್ಲ ಎಂದು ಕೊಳ್ಳುತ್ತಿದ್ದಾರೆ.

ಅಖೇಲೇಶ್ ಮುಂದಿರುವ ಆಯ್ಕೆಗಳು

ಇರುವ ಮೊದಲ ಆಯ್ಕೆಯೆಂದರೆ ವಿಧಾನ ಸಭೆಯನ್ನು ವಿಸರ್ಜನೆ ಮಾಡಿ, ಅಭ್ಯರ್ಥಿಗಳು ಮತ್ತು ಕ್ಷೇತ್ರಗಳ ಪಟ್ಟಿ ಮಾಡಿ ಅಭ್ಯರ್ಥಿಗಳನ್ನು ಸ್ಪರ್ಧಿಸಲು ಅವಕಾಶ ಮಾಡುವುದು.

ಮತ್ತೊಂದು ಆಯ್ಕೆಯಲ್ಲಿ ಪಕ್ಷವನ್ನು ತ್ಯಜಿಸಿ ಏಕಾಂಗಿಯಾಗಿ ಅಖಿಲೇಶ್ ಹೋರಾಟ ಮಾಡುವುದು, ಇದು ಸಾಧ್ಯವೇ? ಏಕೆಂದರೆ ಅವರಿಗೆ ತಂದೆಯ ಸಾಮರ್ಥ್ಯ ಮತ್ತು ಶಕ್ತಿ ಗೊತ್ತಿದೆ. ಅದರೆ ಪಕ್ಷದಲ್ಲಿ ಅಖಿಲೇಶ್ ರಂತೆ ಯುವ ಕಟ್ಟಾಳುಗಳ ಬಲ ಕುಸಿಯುವ ಸಾಧ್ಯತೆಯಿದೆ.

ಅಖಿಲೇಶ್ ಅವರು ಕಾಂಗ್ರೆಸ್ ಸೇರ ಬಯಸುತ್ತಾರೆಯೇ? ಕಾಂಗ್ರೆಸ್ ಲೀಡರ್ ರಶೀದ್ ಅಲ್ವಿ ಅಖೀಲೇಶ್ ಕಡೆಗಿದ್ದಾರೆ. ಇನ್ನು ಕಾಂಗ್ರೆಸ್ಸಿನಿಂದ ರಾಹುಲ್ ಗಾಂಧಿಯವರಿಗೆ ಉತ್ತರ ಪ್ರದೇಶದಲ್ಲಿ ಕಡಕ್ ಆದ ಅಭ್ಯರ್ಥಿಯು ಅಖಿಲೇಶ್ ಆದರೆ ಅದಕ್ಕಿಂತ ಬೇರೆ ಸಂಭ್ರಮದ ವಿಷಯವಿಲ್ಲ ಎಂದು ರಾಜಕೀಯ ವಿಮರ್ಶಕರು ಆಲೋಚನೆ ಮಾಡುತ್ತಿದ್ದಾರೆ.

ಭಾನುವಾರ ಅಖಿಲೇಶ್ ಯಾದವ್ ಸೇರಿದಂತೆ ಪಕ್ಷ ಬೆಂಬಲಿಗರ ಮಹತ್ವದ ಸಮಾವೇಶ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Will Akhilesh Yadav dissolve the Uttar Pradesh assembly today. There is a crucial meeting at 9 am on Saturday in which Akhilesh who was expelled by his father Mulayam for six years will meet with his MLAs. Sources say that he is likely to meet with Governor Ram Naik after that meeting and recommend dissolution of the UP assembly.
Please Wait while comments are loading...