ತವರು ಮನೆಗೆ ಹೋಗಬೇಡ ಎಂದಿದ್ದಕ್ಕೆ ಟೀಯಲ್ಲಿ ವಿಷ ಬೆರೆಸಿದ ಹೆಂಡತಿ; ಬಲಿಯಾಗಿದ್ದು ಮುಗ್ಧ ಮಕ್ಕಳು
ಅಮರಾವತಿ, ಫೆಬ್ರವರಿ 07: ಸಂಸಾರದಲ್ಲಿ ಸಣ್ಣಪುಟ್ಟ ಜಗಳಗಳು ಸಹಜ. ಅದಕ್ಕಾಗಿಯೇ ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂದು ಹಿರಿಯರು ಹೇಳುತ್ತಿದ್ದರು. ಜಗಳ ಕೂಡ ಕೆಲವೊಮ್ಮೆ ಪ್ರೀತಿಯ ಭಾಗ ಎಂದೇ ಹಲವರು ಪರಿಗಣಿಸುತ್ತಾರೆ. ಆದರೆ, ಕೆಲವು ಬಾರಿ ಈ ಜಗಳಗಳು ಇನ್ನೊಬ್ಬರ ಜೀವ ಕಸಿಯುವ ಹಂತಕ್ಕೆ ಹೋಗುತ್ತವೆ.
ಹೌದು... ಗಂಡ ಹೆಂಡತಿಯ ಜಗಳಕ್ಕೆ ಮೂವರು ಮುಗ್ಧ ಮಕ್ಕಳು ಕಣ್ಮುಚ್ಚಿರುವ ಘಟನೆ ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ವರದಿಯಾಗಿದೆ. ಎದೆ ಹಾಲುಣಿಸಿ ಮಕ್ಕಳು ನೂರು ವರ್ಷ ಬದುಕಲಿ ಎಂದು ವರ ಬೇಡುವ ತಾಯಿಯೇ ಮಕ್ಕಳಿಗ ವಿಷವುಣಿಸಿರುವ ದುರಂತ ಘಟನೆ ನಡೆದಿದೆ. ಭವಿಷ್ಯದ ಕನಸು ಕಾಣಬೇಕಿದ್ದವರು ಕಣ್ಮುಚ್ಚಿದ್ದಾರೆ.

ಪಲ್ನಾಡು ಜಿಲ್ಲೆಯ ಮಾಚರ್ಲ ಮಂಡಲ ನಾರಾಯಣಪುರ ತಾಂಡಾದ ರವಿ ನಾಯ್ಕ್ ಮನೆಯಲ್ಲಿ ಈ ದುರಂತ ಘಟನೆ ನಡೆದಿದೆ. ರವಿ ನಾಯ್ಕ್ ಹೈದರಾಬಾದ್‌ನಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ರವಿ ನಾಯ್ಕ್ 12 ವರ್ಷಗಳ ಹಿಂದೆ ಸ್ವಂತ ಅಕ್ಕ ವಸಂತಾ ಎನ್ನುವವರಳನ್ನು ವಿವಾಹವಾಗಿದ್ದರು. ಅವರಿಗೂ ನಾಲ್ವರು ಗಂಡು ಮಕ್ಕಳಿದ್ದಾರೆ. ಹೈದರಾಬಾದ್ ನಲ್ಲಿ ಆಟೋ ಓಡಿಸುವ ರವಿನಾಯಕ್ ವಾರಕ್ಕೊಮ್ಮೆ ಅಥವಾ ಹತ್ತು ದಿನಕ್ಕೊಮ್ಮೆ ಮನೆಗೆ ಬಂದು ಹೆಂಡತಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದರು.
ಆದರೆ ವಿವಾಹದ ವೇಳೆ ರವಿ ನಾಯ್ಕ್‌ಗೆ ಎರಡು ಎಕರೆ ಜಮೀನು ವರದಕ್ಷಿಣೆಯಾಗಿ ನೀಡಲಾಗಿತ್ತು. ಸಾಲಬಾಧೆಯಿಂದ ಅದರಲ್ಲಿ ಒಂದು ಎಕರೆಯನ್ನು ಮಾರಲು ರವಿ ನಾಯ್ಕ್ ನಿರ್ಧರಿಸಿದ್ದರು. ಈ ಕುರಿತು ಭಾನುವಾರ ಬೆಳಗ್ಗೆ ಅಕ್ಕನ ಬಳಿ ಹೋಗಿ ಜಮೀನು ಮಾರಾಟ ಮಾಡುವುದಾಗಿ ಹೇಳಿದ್ದರೂ ಆಕೆ ಒಪ್ಪಲಿಲ್ಲ. ಇಬ್ಬರ ನಡುವೆ ಮಾರಾಮಾರಿ ನಡೆದಿದೆ.
ಇದನ್ನು ರವಿನಾಯಕ್ ಪತ್ನಿ ಮನೆಗೆ ಬಂದು ಹೇಳಿದಾಗ ವಸಂತಾ ಕೂಡ ತಾಯಿಗೆ ಬೆಂಬಲವಾಗಿ ಮಾತನಾಡಿದ್ದಾಳೆ. ಹೊಲವನ್ನು ಮಾರಲು ಒಪ್ಪಿಗೆ ನೀಡಿಲ್ಲ. ಬಳಿಕ ಇಬ್ಬರ ನಡುವೆ ಜಗಳವಾಗಿದೆ. ಈ ಹಿನ್ನಲೆಯಲ್ಲಿ ವಸಂತಾ ಭಾನುವಾರ ಸಂಜೆ ತನ್ನ ತವರು ಮನೆ ನಲ್ಗೊಂಡ ಜಿಲ್ಲೆ ನರಸಾಪುರಕ್ಕೆ ತೆರಳಲು ನಿರ್ಧರಿಸಿದ್ದರು. ಆದರೆ ಗಂಡ ರವಿ ನಾಯ್ಕ ಅದಕಕೆ ಒಪ್ಪಿಲ್ಲ. ಇದರಿಂದ ಇಬ್ಬರ ನಡುವೆ ಮತ್ತೊಮ್ಮೆ ಜಗಳ ನಡೆದಿದೆ.

ಬೆಳಗ್ಗೆ ಎದ್ದರು ಇದೇ ಕೋಪದಲ್ಲಿ ಇದ್ದ ವಸಂತಾ ಟೀಯಲ್ಲಿ ಇಲಿ ವಿಷ ಬೆರೆಸಿ ಮಕ್ಕಳು ಹಾಗೂ ಪತಿಗೆ ನೀಡಿದ್ದಾರೆ. ಜೊತೆಗೆ ತಾನು ಕೂಡ ಕುಡಿದಿದ್ದಾರೆ. ಆದರೆ ಚಹಾದ ರುಚಿ ಮತ್ತು ವಾಸನೆ ಬೇರೆಯಾಗಿರುವುದನ್ನು ಗಮನಿಸಿದ ರವಿ ನಾಯ್ಕ್ ಸ್ವಲ್ಪ ಕುಡಿದು ಆಮೇಲೆ ಪಕ್ಕಕ್ಕೆ ಇಟ್ಟಿದ್ದಾರೆ. ಆದರೆ ಅದಕ್ಕೂ ಮುನ್ನ ಮಕ್ಕಳು ಸಂಪೂರ್ಣವಾಗಿ ಕುಡಿದಿದ್ದರು. ಆ ಬಳಿಕ ವಾಂತಿಭೇದಿಯಿಂದ ತೀವ್ರ ಅಸ್ವಸ್ಥರಾದರು.
ಸ್ಥಳೀಯರು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು.. ಚಿಕಿತ್ಸೆ ಫಲಕಾರಿಯಾಗದೆ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಸದ್ಯ ಪತಿ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರವಿ ನಾಯ್ಕ್ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ವಸಂತ ಗುಂಟೂರು ಜಿಜಿಎಚ್‌ನಲ್ಲಿ ದಾಖಲಾಗಿದ್ದಾರೆ.
ಇನ್ನು, ಚಹಾದಲ್ಲಿ ತಾನೇ ಇಲಿ ಪಾಷಾಣ ಬೆರೆಸಿರುವುದನ್ನು ವಸಂತಾ ಒಪ್ಪಿಕೊಂಡಿದ್ದಾರೆ. ಇಲಿ ಪಾಷಾಣ ಬೆರೆಸಿದ ಅಲ್ಪ ಪ್ರಮಾಣದ ಟೀ ಕುಡಿದಿದ್ದ ರವಿ ನಾಯ್ಕ್ ಅವರ ಆರೋಗ್ಯ ಈಗ ಸುಧಾರಿಸಿದೆ ಎನ್ನುತ್ತಾರೆ ವೈದ್ಯರು. ಕೋಪದ ಕೈಗೆ ಬುದ್ದಿ ಕೊಟ್ಟು ತಾನೇ ಹೆತ್ತ ಮಕ್ಕಳನ್ನು ಬಲಿ ಪಡೆದ ವಸಂತಾರನ್ನು ನೋಡಿ ಇಡೀ ಕುಟುಂಬವೇ ನೋವಿನಲ್ಲಿದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications