ಸಿನಿಮಾ ಮಾಡುವ ಲೆವೆಲ್ ಗೆ ಮೋದಿ ಕೊಡುಗೆ ಏನು: ಮಮತಾ

ನವದೆಹಲಿ, ಏಪ್ರಿಲ್ 4: ಜನರು ಯಾಕಾಗಿ ನಿಮ್ಮ ಸಿನಿಮಾ ನೋಡ್ತಾರೆ? ಒಂದು ವೇಳೆ ಜನರು ಸಿನಿಮಾ ನೋಡಲು ಬಯಸುವುದಾರೆ ಗಾಂಧೀಜಿ, ಅಂಬೇಡ್ಕರ್ ಜೀ ಸಿನಿಮಾ ನೋಡ್ತಾರೆ. ಮೋದಿಯದು ಏಕೆ? ಅವರು ಭಾರತಕ್ಕೆ ನೀಡಿದ ಕೊಡುಗೆ ಏನು ಎಂದು ಗುರುವಾರ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರಧಾನಿ ನರೇಂದ್ರ ಮೋದಿ ಅವರ ಜೀವಾನಾಧಾರಿತ ಸಿನಿಮಾ ಬಿಡುಗಡೆ ದಿನಾಂಕ ನಿಗದಿ ಆದ ಮೇಲೆ ವಿವಾದ ಬುಗಿಲೆದ್ದಿದೆ. ನರೇಂದ್ರ ಮೋದಿ ಅವರ ವೈಭವೀಕರಣಕ್ಕಾಗಿ ಈ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಇದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ ಎಂದು ಕಾಂಗ್ರೆಸ್ ಪಕ್ಷವು ಚುನಾವಣೆ ಆಯೋಗಕ್ಕೆ ದೂರು ನೀಡಿದೆ.

ಈ ಸಿನಿಮಾ ಏಪ್ರಿಲ್ ಐದನೇ ತಾರೀಕು ಬಿಡುಗಡೆಗೆ ಸಿದ್ಧವಾಗಿದೆ. ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ಏಪ್ರಿಲ್ ಎಂಟನೇ ತಾರೀಕಿಗೆ ಮೂರು ದಿನ ಇರುವಂತೆ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆದಿತ್ತು. ಆದರೆ ಯಾವುದೇ ಕಾರಣ ನೀಡದೆ ನಿರ್ಮಾಪಕರು ಸಿನಿಮಾ ಬಿಡುಗಡೆ ದಿನವನ್ನು ಮುಂದಕ್ಕೆ ಹಾಕಿದ್ದಾರೆ.

Why will people watch your film, asks Mamata to PM Modi

ಪಿಎಂ ನರೇಂದ್ರ ಮೋದಿ ಸಿನಿಮಾ ಏಪ್ರಿಲ್ ಐದನೇ ತಾರೀಕು ಬಿಡುಗಡೆ ಮಾಡುತ್ತಿಲ್ಲ ಎಂದು ಖಾತ್ರಿ ಪಡಿಸುತ್ತಿದ್ದೇನೆ. ಸದ್ಯದಲ್ಲೇ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಗುರುವಾರ ಮಾತನಾಡಿ, ಪ್ರಧಾನಿ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ಬಿಸಾಡಿ, ದೇಶವನ್ನು ಪ್ರಜಾತಂತ್ರ ವ್ಯವಸ್ಥೆಯಿಂದ ಸರ್ವಾಧಿಕಾರಕ್ಕೆ ಬದಲು ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.

ಬಯೋಪಿಕ್ ನಲ್ಲಿ ಹೀರೋ ಆಗಿ ನಟಿಸಿರುವ ನಟ ವಿವೇಕ್ ಒಬೇರಾಯ್ ಮಾತನಾಡಿ, ಕಾಂಗ್ರೆಸ್ ಗೆ ಚೌಕೀದಾರ್ ದಂಡದಿಂದ ಭಯವಾಗಿದೆ ಎಂದಿದ್ದಾರೆ.

"ಇದು ತಾನು ಶೂನ್ಯ ಎಂದು ಸಾಬೀತು ಮಾಡಿರುವ ಫ್ಲಾಪ್ ವ್ಯಕ್ತಿಯ ಬಗ್ಗೆ ಫ್ಲಾಪ್ ನಿರ್ಮಾಪಕ, ಫ್ಲಾಪ್ ಹೀರೋ ಮಾಡಿರುವ ಬೋಗಸ್ ಸಿನಿಮಾ" ಎಂದು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೇವಾಲ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+