• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉತ್ತರ ಭಾರತದ ಉಷ್ಣಗಾಳಿ ಸಾಮಾನ್ಯವಾದದ್ದಲ್ಲ? ಕಾರಣ ಇಲ್ಲಿದೆ

|

ನವದೆಹಲ, ಮೇ 27: ಕಳೆದ ಐದು ದಿನಗಳಿಂದ ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನದಲ್ಲಿ ಉಷ್ಣಗಾಳಿಯ ಅನುಭವವಾಗುತ್ತಿದೆ.

ಈ ಉಷ್ಣಗಾಳಿಯು ತಾಪಮಾನವನ್ನು ಸಾಮಾನ್ಯಕ್ಕಿಂತಲೂ ಹೆಚ್ಚು ಮಾಡುತ್ತದೆ. ಹೀಗಾಗಿ ರಾಜಸ್ಥಾನದ ಚುರುವಿನಲ್ಲಿ ಗರಿಷ್ಠ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮೇ 15 ರಂದು ಬೇಸಿಗೆ ಅತ್ಯಂತ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಮಧ್ಯಭಾರತ,ಉತ್ತರ ಭಾರತ ಸೇರಿದಂತೆ ಹಲವೆಡೆ 40 ಡಿಗ್ರಿ ಸೆಲ್ಸಿಯಸ್ ಇದ್ದ ಉಷ್ಣಾಂಶ ಏಕಾಏಕಿ 45 ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತು. ಉತ್ತರ ಭಾರತದಲ್ಲಿ ಮೇ 21ರವರೆಗೆ ತಾಪಮಾನ ಏರಿಕೆಯ ಅನುಭವವಾಗಿರಲಿಲ್ಲ.

ಅಂಫಾನ್ ಚಂಡಮಾರುತವು ತಾಪಮಾನದ ಮೇಲೆ ಪರಿಣಾಮ ಬೀರಿದೆಯಾ ಎಂದು ಗಮನಿಸಿದರೆ ಹೌದು ಈಗಿರುವ ತಾಪಮಾನಕ್ಕೆ ಚಂಡಮಾರುತ ಪರಿಣಾಮ ಬೀರಿದೆ ಎನ್ನುವುದು ತಿಳಿದುಬಂದಿದೆ. ಈ ಚಂಡಮಾರುತ 700 ಕಿ.ಮೀ ವ್ಯಾಪ್ತಿಯನ್ನು ಆಕ್ರಮಿಸಿತ್ತು.

ದೇಶಾದ್ಯಂತ ಉರಿ ಬಿಸಿಲು ಹೆಚ್ಚುತ್ತಿದೆ, ರಾಜಸ್ಥಾನದಲ್ಲಿ 50 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ದೇಶದ ಹಲವೆಡೆ ಚಂಡಮಾರುತ ಹಾನಿಯನ್ನುಂಟು ಮಾಡಿದೆ, ಇನ್ನು ಕೆಲವೆಡೆ ಮಳೆಯಾಗುತ್ತಿದೆ. ಆದರೆ ಗರಿಷ್ಠ ಉಷ್ಣಾಂಶವೂ ಏರುತ್ತಿದೆ. ರಾಜಸ್ಥಾನದ ಚುರುವಿನಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಇದು ದೇಶದಲ್ಲಿ ದಾಖಲಾದ ಅತಿ ಗರಿಷ್ಠ ಉಷ್ಣಾಂಶವಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆ ವಿಜ್ಞಾನಿ ರವೀಂದ್ರ ಸಿಹಾಗ್ ಹೇಳಿದ್ದಾರೆ. ಕರ್ನಾಟಕದ ಕಲಬುರಗಿಯಲ್ಲಿ 44 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ರಾಜಸ್ಥಾನ ವಿಶ್ವದ ಹಾಟೆಸ್ಟ್‌ ಸಿಟಿ: ಎಲ್ಲೆಲ್ಲಿ ಗರಿಷ್ಠ ಉಷ್ಣಾಂಶ ಎಷ್ಟಿದೆ? ರಾಜಸ್ಥಾನ ವಿಶ್ವದ ಹಾಟೆಸ್ಟ್‌ ಸಿಟಿ: ಎಲ್ಲೆಲ್ಲಿ ಗರಿಷ್ಠ ಉಷ್ಣಾಂಶ ಎಷ್ಟಿದೆ?

ಪಾಕಿಸ್ತಾನದ ಜಾಕೋಬಾಬಾದ್‌ನಲ್ಲಿ ಕೂಡ 50 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶವಿದೆ. ಚುರು ಹಾಗೂ ಜಾಕೋಬಾಬಾದ್ ವಿಶ್ವದ ಹಾಟೆಸ್ಟ್‌ ನಗರಗಳಾಗಿವೆ.

ಇನ್ನು ಬಿಹಾರದ ಮಜಾಫರ್‌ಪುರ್‌ನಲ್ಲಿ 41.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಹಿಮಾಚಲ ಪ್ರದೇಶದಲ್ಲೂ ಕೂಡ ಉಷ್ಣಾಂಶ ಹೆಚ್ಚಾಗುತ್ತಿದೆ.

ಉಷ್ಣಗಾಳಿ ಎಂದರೇನು? ಯಾವಾಗ ಕಂಡುಬರುತ್ತದೆ?

ಉಷ್ಣಗಾಳಿ ಎಂದರೇನು? ಯಾವಾಗ ಕಂಡುಬರುತ್ತದೆ?

ಈ ಉಷ್ಣಗಾಳಿಯು ಸಾಮಾನ್ಯವಾಗಿ ಭಾರತದಲ್ಲಿ ಮಾರ್ಚ್‌ನಿಂದ ಜೂನ್ ಅವಧಿಯಲ್ಲಿ ಗೋಚರಿಸುತ್ತದೆ. ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ಗಿಂತ ಮೇಲಿನದ್ದಾಗ ಬಿಸಿ ಗಾಳಿ ಬೀಸುತ್ತದೆ. ಆ ಸಂದರ್ಭದಲ್ಲಿ ಸಾಮಾನ್ಯ ಉಷ್ಣಾಂಶ 4-5 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಲಿದೆ.

ಉದಾಹರಣೆಗೆ, ಆ ಪ್ರದೇಶದಲ್ಲಿ ಸಾಮಾನ್ಯ ಉಷ್ಣಾಂಶ 40 ಡಿಗ್ರಿ ಇದ್ದರೆ ಆ ದಿನಗಳಲ್ಲಿ 45 ಡಿಗ್ರಿಗೆ ಏರಿಕೆಯಾಗುತ್ತದೆ. ಉಷ್ಣಾಂಶ 45 ಡಿಗ್ರಿಗಿಂತ ಮೇಲಿದ್ದರೆ ಉಷ್ಣಗಾಳಿ ಬೀಸುತ್ತಿದೆ ಎಂದೇ ಅರ್ಥ.
ಈ ಬಿಸಿ ಗಾಳಿ ಎಷ್ಟು ದಿನಗಳ ಕಾಲ ಇರಲಿದೆ?

ಈ ಬಿಸಿ ಗಾಳಿ ಎಷ್ಟು ದಿನಗಳ ಕಾಲ ಇರಲಿದೆ?

ಬಿಸಿ ಗಾಳಿಯು ನಾಲ್ಕರಿಂದ ಐದು ದಿನಗಳ ಕಾಲ ಇರಲಿದೆ. ಕೆಲವು ಸಂದರ್ಭದಲ್ಲಿ 7-10 ದಿನಗಳ ಕಾಲವೂ ಇರಬಲ್ಲದು. 2015 ರಲ್ಲಿ ಮೇ 18-31ರವರೆಗೆ ಇತ್ತು. ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಅಬ್ಬರ ಹೆಚ್ಚಿತ್ತು. 2014ರಲ್ಲಿ ಜೂನ್ 2 ರಿಂದ 11ರವರೆಗೆ ಉಷ್ಣಗಾಳಿ ಬೀಸಿತ್ತು.

ಈ ವರ್ಷ ಉಷ್ಣಗಾಳಿ ಆರಂಭವಾಗಿದ್ದು ಯಾವಾಗ?

ಈ ವರ್ಷ ಉಷ್ಣಗಾಳಿ ಆರಂಭವಾಗಿದ್ದು ಯಾವಾಗ?

2020ರಲ್ಲಿ ಉಷ್ಣಗಾಳಿಯು ಮೇ 22ರಂದು ಆರಂಭವಾಗಿದ್ದು ಮೇ 30ರವರೆಗೂ ಮುಂದುವರೆಯುವ ಸಾಧ್ಯತೆಗಳಿವೆ. ಈ ತಿಂಗಳಲ್ಲಿ ಉಷ್ಣಾಂಶ ಗರಿಷ್ಠ ಮಟ್ಟಕ್ಕೆ ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಹೇಳಿದೆ.

ಭಾರತದ ಎಲ್ಲಾ ಭಾಗಗಳಲ್ಲೂ ಬಿಸಿ ಗಾಳಿ ಅನುಭವವಾಗುತ್ತಾ?

ಭಾರತದ ಎಲ್ಲಾ ಭಾಗಗಳಲ್ಲೂ ಬಿಸಿ ಗಾಳಿ ಅನುಭವವಾಗುತ್ತಾ?

ರಾಜಸ್ಥಾನ, ಪಂಜಾಬ್, ಹರ್ಯಾಣಾ, ಚಂಡೀಗಢ, ದೆಹಲಿ, ಮಧ್ಯಪ್ರದೇಶ, ಉತ್ತರಪ್ರದೇಶ, ಒಡಿಶಾ, ವಿದರ್ಭಾ, ಪಶ್ಚಿಮ ಬಂಗಾಳದ ಕೆಲವು ಭಾಗ, ಆಂಧ್ರ ಹಾಗೂ ತೆಲಂಗಾಣದ ಕೆಲವು ಭಾಗಗಳಲ್ಲಿ ಹೆಚ್ಚು ಅನುಭವವಾಗಲಿದೆ. ಶಿಮ್ಲಾದಲ್ಲಿ 28.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಇದು ಸಾಮಾನ್ಯ ಉಷ್ಣಾಂಶಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್ ಹೆಚ್ಚಿದೆ. ಊನಾದಲ್ಲಿ 43.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ.

English summary
For the past five days, Rajasthan, Delhi, Uttar Pradesh, Madhya Pradesh, and Maharashtra have been experiencing severe to very severe heatwave conditions. In its very first spell this summer, this heatwave pushed day temperatures significantly above normal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X